ಧಾರವಾಡ | 2ನೇ ದಿನಕ್ಕೆ ಕಾಲಿಟ್ಟ ‘ನಮ್ಮ ಸಂವಿಧಾನ ನಮ್ಮ ಕಲರವ’ ಚಿಣ್ಣರ ನಾಟಕೋತ್ಸವ

Date:

ಧಾರವಾಡ ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್‌ಗಳ ಸಹಯೋಗದಲ್ಲಿ ಆಯೋಜಿಸಿದ್ದ ಚಿಣ್ಣರಮೇಳ-2025ರ “ಚಿಣ್ಣರ ನಾಟಕೋತ್ಸವ”ದ 2ನೇ ದಿನದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ರೆಹಮತ್ ತರೀಕೆರೆ ಚಿಣ್ಣರಮೇಳದ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.

- Advertisement -
IMG 20250505 WA0008

ಈ ಕುರಿತು ಶಿಬಿರದ ನಿರ್ದೆಶಕ ಲಕ್ಷ್ಮಣ ಪಿರಗಾರ ಮಾತನಾಡಿ, ಮಕ್ಕಳಲ್ಲಿ‌ ಸಂವಿಧಾನ ಮತ್ತು ಅಂಬೇಡ್ಕರ್ ವಿಚಾರಗಳು ಬೇರೂರಬೇಕೆಂಬ ವಿಚಾರದಿಂದ ‘ನಮ್ಮ‌ ಸಂವಿಧಾನ, ನಮ್ಮ ಕಲರವ’ ಘೋಷವಾಕ್ಯದಡಿಯಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ರೂಪಿಸಲಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ‌ ಕಾಣು ಎಂಬಂತೆ ಮಕ್ಕಳಲ್ಲಿ ಸಂವಿಧಾನ ಆಶಯಗಳನ್ನು ಬಿತ್ತುವ ಅವಶ್ಯವಿದೆ. ಕಾರಣ; ಬಾಬಾಸಾಹೇಬರ ಕುರಿತು ಇಂದಿಗೂ ಬಹುತೇಕರಲ್ಲಿ ಅರಿವಿಲ್ಲದಿರುವುದು ದುರಂತದ ಸಂಗತಿ. ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಅವರ ಮತ್ತು ಸಂವಿಧಾನದ ಅರಿವು ಮೂಡಿಸು ಚಟುವಟಿಕೆಗಳನ್ನು ಮಾಡಿದರೆ; ಮುಂದಿನ ಪೀಳಿಗೆಯಿಂದ ಸಂವಿಧಾನದ ಆಶಯಗಳನ್ನು ಎತ್ತಿಹಡಿಯುವ ಕೆಲಸವಾಗುತ್ತದೆ.‌ ಮತ್ತು ನಮ್ಮಲ್ಲಿ‌ ಪರಂಪರಾಗತವಾಗಿ ಬೇರೂರಿರುವ ಸಂಕುಚಿತ ಮನೋಭಾವನೆಗಳಿಗೆ ಕಡಿವಾಣ ಹಾಕಲು ಸಂವಿಧಾನದಿಂದ ಮಾತ್ರ ಸಾಧ್ಯ.‌ ಆ ನಿಟ್ಟಿನಲ್ಲಿ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ, ಸಮಗ್ರತೆ ಹೀಗೆ ವಿವಿಧ ಗುಂಪುಗಳನ್ನು ಮಾಡಿ, ಮಕ್ಕಳಿಂದ ವಿವಿಧ ನಾಟಕಗಳನ್ನು ಮಾಡಿಸಲಾಗುತ್ತಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...
IMG 20250505 WA0007

ಸಾಹಿತಿ ರೆಹಮತ್ ತರೀಕೆರೆ ಸಂವಿಧಾನ’ದ ಕುರಿತು ಮಕ್ಕಳು ರಚಿಸಿ ಹಾಡಿದ ಹಾಡಿಗೆ ಸಂತಸಪಟ್ಟರು. ಚಿಣ್ಣರ ನಾಟಕೋತ್ಸವದ ಕುರಿತು ಹರ್ಷ ವ್ಯಕ್ತಪಡಿಸಿದರು. ನಂತರ ಸಮಾನತೆ ತಂಡ “ದೊಡ್ಡಾಟದ ಹೆಜ್ಜೆಗಳು” ಹಾಗೂ ಸ್ವಾತಂತ್ರ್ಯ ತಂಡದವರು “ಪರಿಸರದ ಗೀತೆಗಳ”ನ್ನು ಪ್ರಸ್ತುತಪಡಿಸಿದರು. ನಂತರ ಸಹೋದರತ್ವ ತಂಡ “ಅದಲ್-ಬದಲ್” ನಾಟಕ ಹಾಗೂ ಸಮಗ್ರತೆ ತಂಡದವರು “ಬೆಳಕು ಹಂಚಿದ ಬಾಲಕ” ನಾಟಕವನ್ನು ಪ್ರದರ್ಶಿಸಿ,‌ಮಕ್ಕಳು ಸಂವಿಧಾನದ ಕುರಿತು ಹಾಡು ರಚಿಸಿ ಹಾಡಿದರು ಎಲ್ಲರ ಮನತಣಿಸಿದರು.

ಇದನ್ನು ಓದಿದ್ದೀರಾ? ಧಾರವಾಡ | ಕಾರುಗಳೆರಡು ಮುಖಾಮುಖಿ ಡಿಕ್ಕಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವು

ಈ ಸಂದರ್ಭದಲ್ಲಿ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ, ರಂಗಕಲಾವಿದ ಮುರುಗೋಡ, ಶಿಬಿರದ ನಿರ್ದೆಶಕ ಲಕ್ಷ್ಮಣ ಪಿರಗಾರ, ಸಾಹಿತಿ ರೆಹಮತ್ ತರೀಕೆರೆ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಭಾರತದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ; ಮಾವಳ್ಳಿ ಶಂಕರ್

ಚಿಕ್ಕಮಗಳೂರಿನ ಮಹಾರಾಜ ಗ್ರ್ಯಾಂಡ್ ಹೋಟೆಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...

ಹಾಸನ | ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿ ಜನಪರ ಒಕ್ಕೂಟ ಪ್ರತಿಭಟನೆ 

ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಖಂಡಿಸಿ ಹಾಸನದ ಹೇಮಾವತಿ ಪ್ರತಿಮೆಯ...

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...