ನೈಜ ಸಮಸ್ಯೆ ಮರೆಮಾಚಲು, ಜನರ ಗಮನ ಬೇರೆಡೆ ಸೆಳೆಯಲು ಮೋದಿ ಬಳಸುತ್ತಿರುವ ಐದು ಆಸನಗಳು

Date:

Advertisements
ಮೋದಿ ಅವರು ಯೋಗವನ್ನು ವಿಶ್ವಗುರು ಮಾಡಲು ಹೊರಟಿದ್ದವರು. ಅವರ ತಂತ್ರಗಳಾದ ತಪ್ಪಿಸಿಕೊಳ್ಳುವುದು, ಮರೆಮಾಚುವುದು ಹಾಗೂ ಗಮನವನ್ನು ಬೇರೆಡೆ ಸೆಳೆಯುವುದನ್ನು ಹೊಸ ಆಸನಗಳೊಂದಿಗೆ ವಿವರಿಸುವ ಪುಟ್ಟ ಪ್ರಯತ್ನ ಇಲ್ಲಿದೆ...

18ನೇ ಶತಮಾನದ ಆರಂಭದಲ್ಲಿ, ಅಮೆರಿಕನ್ ಲೇಖಕಿ ಸುಸಾನ್ ಕೂಲಿಡ್ಜ್ ವಾಟ್ ಕೇಟಿ ಡಿಡ್ ಅವರು ತಮ್ಮ ‘ವಾಟ್ ಕೇಟಿ ಡಿಡ್ ನೆಕ್ಸ್ಟ್ ಅಂಡ್ ವಾಟ್ ಕೇಟಿ ಡಿಡ್ ಇನ್ ಸ್ಕೂಲ್’ ಎಂಬ ಪುಸ್ತಕ ಸರಣಿ ಬರೆದಿದ್ದರು. ಈ ಪುಸ್ತಕಗಳಲ್ಲಿ 12 ವರ್ಷದ ಹುಡುಗಿಯ ಸಾಹಸಗಳನ್ನು ವಿವರಿಸಿದ್ದರು. ಆ ಬಾಲಕಿ ಅತ್ಯುತ್ತಮ ಕೆಲಸಗಳು ಮತ್ತು ಸಾಧನೆಗಳನ್ನು ಮಾಡುವ ಕನಸು ಕಾಣುತ್ತಾಳೆ. ಆದರೆ, ಆಕೆ ಎದುರಿಸುತ್ತಿದ್ದ ಕೆಲವು ಸಮಸ್ಯೆಗಳು ಆಕೆ ತನ್ನ ಗುರಿಯಿಂದ ದೂರು ಇಟ್ಟಿದ್ದವು.

ಇದೀಗ, ಪಹಲ್ಗಾಮ್ ದಾಳಿ ನಡೆದಿರುವ ಸಮಯದಲ್ಲಿ, ಭಾರತದಲ್ಲಿ, ‘ವಾಟ್ ಮೋದಿ ಡಿಡ್, ವಾಟ್ ಮೋದಿ ಡಿಡ್ ನೆಕ್ಸ್ಟ್ ಅಂಡ್ ವಾಟ್ ಮೋದಿ ಡಿಡ್ ಆಫ್ಟರ್ ದಿ ಪಹಲ್ಗಾಮ್ ಅಟ್ಯಾಕ್’ ಎಂಬ ಹೆಸರಿನ ಸರಣಿಯನ್ನು ಯಾರಾದರೂ ಬರೆಯಬೇಕಿದೆ. ಈ ಬಗ್ಗೆ ಪತ್ರಕರ್ತ ರವೀಶ್ ಕುಮಾರ್ ಅವರು ಮೇ 3 ರಂದು ಪ್ರಕಟಿಸಿದ್ದ ವಿಡಿಯೋದಲ್ಲಿ ಮೋದಿ ಅವರ ಕೆಲಸಗಳು ಮತ್ತು ಪೂರ್ವಗ್ರಹಗಳ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಬಲಿಯಾದವರ ಕುಟುಂಬಗಳ ಸದಸ್ಯರು ಹಿಂದುತ್ವವಾದಿಗಳಿಂದ ಅನುಭವಿಸಿದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ.

ಪಹಲ್ಗಾಮ್ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ನವವಿವಾಹಿತೆಯರಾದ ಹಿಮಾನ್ಶಿ ನರ್ವಾಲ್ ಮತ್ತು ಐಶ್ವರ್ಯ, ತಮ್ಮ ತಂದೆಯನ್ನು ಕಳೆದುಕೊಂಡ ಶೀತಲ್ ಬೆಹ್ನ್ ಮತ್ತು ಆರತಿ ಮೆನನ್ ಅವರು ದಾಳಿಯ ವಿಚಾರವಾಗಿ ಮುಸ್ಲಿಂ ವಿರೋಧಿ, ಕಾಶ್ಮೀರ ವಿರೋಧಿ ನಿರೂಪಣೆಯನ್ನು ನಿರಾಕರಿಸಿದ್ದಕ್ಕಾಗಿ ಹಿಂದುತ್ವವಾದಿಗಳಿಂದ ಕ್ರೂರ ಟ್ರೋಲ್‌ಗೆ ಒಳಗಾದರು.

Advertisements

ಹಿಮಾನ್ಶಿ ಅವರ ಧೈರ್ಯ ಮತ್ತು ನಿಖರ ಜಾತ್ಯತೀತ ಮೌಲ್ಯಗಳನ್ನು ಶ್ಲಾಘಿಸಿ ಲಲಿತಾ ರಾಮದಾಸ್ (ದಿವಂಗತ ನೌಕಾಪಡೆಯ ಅಡ್ಮಿರಲ್ ರಾಮದಾಸ್ ಅವರ ಪತ್ನಿ) ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ಅವರ ಪತ್ರದಲ್ಲಿ ತಮ್ಮನ್ನೂ ಸೇರಿದಂತೆ ಯಾವೊಬ್ಬ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು, ಸಂತೈಸಲು ಪ್ರಧಾನಿ ಮೋದಿ ಚಿಂತಿಸಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ ಎಂಬ ಬಗ್ಗೆ ಗಮನ ಸೆಳೆದಿದ್ದಾರೆ.

ಇದನ್ನು ಓದಿದ್ದೀರಾ?: ಮೋದಿಯ ಅಮೃತಕಾಲದಲ್ಲಿ ದಾಳಿ ಮತ್ತು ದ್ವೇಷಕ್ಕಿದೆ ಮಾರುಕಟ್ಟೆ

ರಾಷ್ಟ್ರ ಎದುರಿಸುತ್ತಿರುವ ತೀವ್ರ ಸವಾಲುಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ಪ್ರಧಾನಿ ಮೋದಿ ಅವರು ಸರ್ವಪಕ್ಷಗಳ ಸಭೆ ಕರೆದು, ಸಮಾಲೋಚನೆ ನಡೆಸಬೇಕಿತ್ತು. ಕೇಂದ್ರ ಸರ್ಕಾರವು ಸರ್ವಪಕ್ಷಗಳ ಸಭೆಯನ್ನೂ ಕರೆದಿತ್ತು. ಆದರೆ, ಆ ಸಭೆಯಲ್ಲಿ ಮೋದಿ ಭಾಗಿಯಾಗಲಿಲ್ಲ. ಬದಲಾಗಿ, ಅವರು ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದರು. ಇದು, ಮೋದಿ ಅವರಿಗೆ ದೇಶದ ಭದ್ರತೆ, ಜನರ ಜೀವಕ್ಕಿಂತ ಚುನಾವಣೆಯೇ ಆದ್ಯತೆ ಎಂಬ ಅಭಿಪ್ರಾಯವನ್ನು ದೇಶಾದ್ಯಂತ ರೂಪಿಸಿತು. ಜೊತೆಗೆ, ಅವರು ತಮ್ಮ ಪರೀಕ್ಷಿತ ತಂತ್ರಗಳಿಂದ ತಪ್ಪಿಸಿಕೊಳ್ಳುವುದು, ಮರೆಮಾಚುವುದು ಹಾಗೂ ಗಮನವನ್ನು ಬೇರೆಡೆ ಸೆಳೆಯುವುದನ್ನು ಮೈಗೂಡಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ನಿರೂಪಣೆಗಳನ್ನು ರೂಪಿಸಲು ಕಸರತ್ತು ನಡೆಸುತ್ತಿದ್ದಾರೆ.

ಮೋದಿ ಅವರು ಯೋಗವನ್ನು ವಿಶ್ವಗುರು ಮಾಡಲು ಹೊರಟಿದ್ದವರು. ಹೀಗಾಗಿ, ಅವರ ತಂತ್ರಗಳನ್ನು ಹೊಸ ಆಸನಗಳೊಂದಿಗೆ ವಿವರಿಸಬಹುದು:

ಉಪೇಕ್ಷಾಸನ: ಉಪೇಕ್ಷಾ ಎಂದರೆ ನಿರ್ಲಕ್ಷಿಸುವುದು. ನಿತೀಶ್‌ ಕುಮಾರ್ ವಿವರಿಸಿದಂತೆ, ತಮ್ಮ ಎದುರು ಇರುವ ಅತ್ಯಂತ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಕೊಡದೆ ಆ ಸಮಸ್ಯೆಗಳಿಂದ ಜಾರಿಕೊಂಡು ಹೋಗುವುದು. ಇದು, ಮೋದಿ ಅವರ ಮೊದಲ ಆಸನ.

ಮಿಥ್ಯಾಸನ: ಮಿಥ್ಯಾ ಎಂದರೆ ಸುಳ್ಳು ಅಥವಾ ಮೋಸ ಮಾಡು ಎಂದರ್ಥ. 2023ರಲ್ಲಿ ಅಮೆರಿಕಗೆ ಭೇಟಿ ನೀಡಿದ್ದ ಮೋದಿ ಅವರನ್ನು ವರದಿಗಾರ ಸಬ್ರಿನಾ ಸಿದ್ದಿಕಿ ಅವರು ಕೇಂದ್ರ ಸರ್ಕಾರದ ಪ್ರಶ್ನಾರ್ಹ ಮಾನವ ಹಕ್ಕುಗಳ ದಾಖಲೆಯ ಬಗ್ಗೆ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಉತ್ತರಿಸಲು ಮೋದಿ ಅವರು ಮಿಥ್ಯಾಸನವನ್ನು ಜಾಣತನದಿಂದ ಬಳಸಿದರು. “ನೀವು ನನ್ನನ್ನು ಹಾಗೆ ಕೇಳತ್ತಿರುವುದೇ ನನಗೆ ಆಶ್ಚರ್ಯವಾಗಿದೆ. ಭಾರತದ ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ಜಾತಿ, ಧರ್ಮ, ವಯಸ್ಸು ಅಥವಾ ಯಾವುದೇ ಪ್ರಾದೇಶಿಕ ಆಧಾರದ ಮೇಲೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ನಮ್ಮ ‘ಡಿಎನ್‌ಎ’ಯಲ್ಲಿದೆ. ಪ್ರಜಾಪ್ರಭುತ್ವ ನಮ್ಮ ಚೈತನ್ಯ. ಪ್ರಜಾಪ್ರಭುತ್ವ ನಮ್ಮ ರಕ್ತನಾಳಗಳಲ್ಲಿ ಚಲಿಸುತ್ತದೆ. ನಾವು ಪ್ರಜಾಪ್ರಭುತ್ವದೊಂದಿಗೆ ಬದುಕುತ್ತಿದ್ದೇವೆ” ಎಂದು ಮೋದಿ ಹೇಳಿದರು.

ಇತ್ತೀಚೆಗೆ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗೆ ಮೂರು ಗಂಟೆಗಳ ಕಾಲ ನಡೆದ ಪಾಡ್‌ಕ್ಯಾಸ್ಟ್‌ನಲ್ಲಿ ಮೋದಿ ಅವರು ಇದೇ ‘ಆಸನ’ವನ್ನು ಮತ್ತೆ ಬಳಸಿದರು. ‘ಟೀಕೆ ಪ್ರಜಾಪ್ರಭುತ್ವದ ಆತ್ಮ’ ಎಂದು ಘೋಷಿಸಿದರು. ”ನಾವು ಹೆಚ್ಚಿನ ಟೀಕೆಯನ್ನು ಎದುರಿಸಬೇಕು. ಟೀಕೆಯು ತೀಕ್ಷ್ಣ ಮತ್ತು ಉತ್ತಮ ಮಾಹಿತಿಯುಕ್ತವಾಗಿರಬೇಕು. ನಿಜವಾದ ಟೀಕೆಗೆ ಸಂಪೂರ್ಣ ಅಧ್ಯಯನ, ಆಳವಾದ ಸಂಶೋಧನೆ ಮತ್ತು ಎಚ್ಚರಿಕೆಯ ವಿಶ್ಲೇಷಣೆಯ ಅಗತ್ಯವಿದೆ. ಇದು ಸುಳ್ಳುಗಳಿಂದ ಸತ್ಯವನ್ನು ಹುಡುಕಲು ಪ್ರೋತ್ಸಾಹಿಸುತ್ತದೆ” ಎಂದರು.

ಆದರೆ, ಕುನಾಲ್ ಕಮ್ರಾ ಅವರು ತಮ್ಮ ಹಾಸ್ಯ ಕಾರ್ಯಕ್ರಮ ‘ನಯಾ ಭಾರತ್’ನಲ್ಲಿ ಬಿಜೆಪಿಯನ್ನು ಟೀಕಿಸಿದ್ದಕ್ಕಾಗಿ, ಅವರ ‘ಹ್ಯಾಬಿಟಾಟ್ ಕಾಮಿಡಿ ಕ್ಲಬ್’ಅನ್ನು ಧ್ವಂಸ ಮಾಡಲಾಗಿದೆ ಎಂಬ ವಿಚಾರವನ್ನು ಮೋದಿ ಮರೆಮಾಚಿದರು. ಆ ಮಾತುಗಳಿಂದ ನಾಜೂಕಾಗಿ ತಪ್ಪಿಸಿಕೊಂಡರು.

ನಿವರ್ತನಾಸನ: ನಿವರ್ತನ ಎಂದರೆ ವಿಚಲನ ಅಥವಾ ತಿರುಗಿ ಓಡು ಎಂದರ್ಥ. ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗಿನ ಸಭೆಯ ಆಡಿಯೋ-ಲೆಸ್ ವೀಡಿಯೊವನ್ನು ಬಿಡುಗಡೆ ಮಾಡಿದರು. ಜೊತೆಗೆ, ಪಹಲ್ಗಾಮ್ ದಾಳಿ ನಡೆದ 2ನೇ ದಿನವೇ (ಏಪ್ರಿಲ್ 24) ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೋದಿ, ವೇದಿಕೆಯಲ್ಲಿ ಬಿಹಾರ ನಿತೀಶ್ ಕುಮಾರ್ ಅವರೊಂದಿಗೆ ತಮಾಷೆ ಮಾಡಿಕೊಂಡು, ನಗುತ್ತಿರುವ ವಿಡಿಯೋ ಕೂಡ ಕಾಣಿಸಿಕೊಂಡಿತ್ತು.

ಅಲ್ಲದೆ, ಮೇ 2 ರಂದು ಕೇರಳದಲ್ಲಿ ಅದಾನಿ ನಿರ್ಮಿಸಿದ ವಿಝಿಂಜಮ್ ಬಂದರು ಉದ್ಘಾಟನೆ ಮಾಡುವಾಗ ‘ವಿರೋಧ ಪಕ್ಷಗಳು ನಿದ್ರೆ ಕಳೆದುಕೊಳ್ಳುತ್ತಿವೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮಾತ್ರವಲ್ಲ, ತಮ್ಮ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿಯೂ ಅವರು ಎಂದಿನಂತೆಯೇ ನಡೆದುಕೊಂಡರು. ಅಂದರೆ, ಪಹಲ್ಗಾಮ್ ದಾಳಿಯಿಂದ ಅವರ ಮನೋಭಾವದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಆ ದಾಳಿಯು ಮೋದಿ ಅವರಿಗೆ ನಗಣ್ಯವಾಗಿತ್ತು.

ಅಪಹೃತ್ಯಾಸನ: ಅಪಹೃತ್ಯ ಎಂದರೆ ಆಕ್ರಮಿಸಿಕೊಳ್ಳುವುದು. ಏಪ್ರಿಲ್ 30 ರಂದು ಮೋದಿ ಸರ್ಕಾರವು ಜಾತಿ ಜನಗಣತಿ ನಡೆಸಲು ಹಠಾತ್ತನೆ ನಿರ್ಧರಿಸಿತು ಮತ್ತು ಘೋಷಿಸಿತು. ಈ ಪ್ರಹಸನವು ‘ಅಪಹೃತ್ಯಾಸನ’ಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ.

ಕಳೆದ ವರ್ಷದವರೆಗೆ ಪ್ರಧಾನಿಯವರು ಜಾತಿಗಣತಿ ಕೇಳುವುದು ‘ನಗರ ನಕ್ಸಲರ ಚಿಂತನೆ’, ಜಾತಿಗಣತಿ ನಡೆಸಬೇಕು ಎನ್ನುವವರು ‘ನಗರ ನಕ್ಸಲರು’ ಎಂದು ಹೇಳುತ್ತಿದ್ದರು. ಆದರೆ, ಈಗ ಇದ್ದಕ್ಕಿದ್ದಂತೆ ಜಾತಿಗಣತಿ ಅಗತ್ಯವಾಗಿದೆ. ನಾವು ಅದನ್ನು ಮಾಡುತ್ತೇವೆಂದು ಹೇಳುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇದನ್ನು ”ಸಾಮಾಜಿಕ ಸಮಾನತೆ ಮತ್ತು ಪ್ರತಿಯೊಂದು ವರ್ಗವು ತಮ್ಮ ಹಕ್ಕುಗಳನ್ನು ಪಡೆಯುವಂತೆ ಮಾಡಲು ಸರ್ಕಾರದ ಬಲವಾದ ಬದ್ಧತೆಗೆ ಉದಾಹರಣೆಯಾಗಿದೆ” ಎಂದು ಹೇಳಿದ್ದಾರೆ. ಈ ಸಮಯದಲ್ಲಿ, ಇಂತಹ ನಿರ್ಧಾರದ ಬಗ್ಗೆ ಯಾರಾದರೂ ಒಬ್ಬರಾದರೂ ಆಶ್ಚರ್ಯ ಪಡೆದೇ ಇರಲು ಸಾಧ್ಯವಿಲ್ಲ.

ಸಂತ್ರಶನಾಸನ: ಸಂತ್ರಶ ಎಂದರೆ ಭಯ ಮತ್ತು ಬೆದರಿಕೆ. ಉಳಿದೆಲ್ಲವೂ ವಿಫಲವಾದರೆ, ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳ ಸಹಾಯದಿಂದ ಈ ಆಸನವನ್ನು ಜಾರಿಗೊಳಿಸಲಾಗುತ್ತದೆ.

ಈ ಲೇಖನ ಓದಿದ್ದೀರಾ?: ಹಿಂದೂಗಳ ಕೊಲೆಯಾದರೆ ಬಿಜೆಪಿಯೊಳಗೆ ‘ಹಬ್ಬ’ದ ಸಡಗರ! ಹೆಣ ರಾಜಕಾರಣವೇ ಇವರ ರಾಜಕೀಯ ಅಸ್ತಿತ್ವ

ಸಂವಹನದ ದೊಡ್ಡ ಸಮಸ್ಯೆ ಎಂದರೆ ‘ಯಾವುದಾದರೂ ಒಂದು ಘಟನೆ ನಡೆದಿದೆ ಎಂಬ ಭ್ರಮೆ’ ಎಂದು ಹೇಳಲಾಗಿದೆ. ಮೋದಿ ಈ ಭ್ರಮೆಯನ್ನು ಬಹಳ ಸಮಯದಿಂದ ಅವಲಂಬಿಸಿದ್ದಾರೆ. ಗೊಂದಲ, ವಿಚಲನ ಮತ್ತು ತಿರುಚುವಿಕೆಯನ್ನು ಸೃಷ್ಟಿಸುವ ಮೂಲಕ ದೇಶದಲ್ಲಿನ ಜ್ವಲಂತ ಸಮಸ್ಯೆಗಳನ್ನು ಚರ್ಚೆಯಿಂದ ಮರೆಮಾಚುತ್ತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ರೀತಿಯ ಪ್ರಯತ್ನಗಳನ್ನು ಮಾಡುತ್ತಿಲ್ಲ.

ಬದಲಾಗಿ, ಸಮಸ್ಯೆಗಳ ಬಗ್ಗೆ ಮಾತನಾಡುವವರನ್ನೇ ಬಾಯಿ ಮುಚ್ಚಿಸಲಾಗುತ್ತಿದೆ. ಪ್ರಶ್ನಿಸುವವರ ವಿರುದ್ಧ ಇಡಿ ದಾಳಿ ನಡೆಸುತ್ತಿದ್ದಾರೆ. ಸಮಸ್ಯೆಗಳ ವಿಚಾರದಲ್ಲಿ ಎಲ್ಲರನ್ನೂ ಮನವೊಲಿಸಲು ಅಪಾರ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸುವುದಕ್ಕಿಂತ ಹೀಗೆ ಬಾಯಿ ಮುಚ್ಚಿಸುವುದು ಅವರಿಗೆ ಸುಲಭ ಮಾರ್ಗವಾಗಿದೆ.

ಇದೆಲ್ಲದರ ನಡುವೆ ಮತ್ತೊಂದು ಆಸನವಿದೆ. ಈ ಆಸನದ ಮೇಲೆ ಮೋದಿ ಅವರು ಕೇಂದ್ರೀಕರಿಸಿದರೆ, ದೇಶವು ಶಾಶ್ವತವಾಗಿ ಅವರಿಗೆ ಕೃತಜ್ಞರಾಗಿರುತ್ತದೆ. ಅದೇ ‘ನಮ್ರಕರ್ಮಧರಾಸನ’. ‘ನಮ್ರ’ ಎಂದರೆ ವಿನಮ್ರ, ಕರ್ಮ ಎಂದರೆ ಕರ್ತವ್ಯ, ಧಾರಾ ಎಂದರೆ ಸ್ಥಿರವಾದ ಹರಿವು. ಈ ‘ಆಸನ’ವು ಯಾವುದೇ ಕರ್ತವ್ಯವನ್ನು ವಿನಮ್ರವಾಗಿ ಸ್ಥಿರತೆಯಿಂದ ನಿರ್ವಹಿಸಬೇಕು ಎಂದು ಹೇಳುತ್ತದೆ. ಮೋದಿ ಅವರು ಇದನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ.

ಮೂಲ: ದಿ ವೈರ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ನಿಮಗೆ ಬೇರೆ ಯಾವುದೇ ಮಾದ್ಯಮದ ಮುಖಾಂತರ ಮೋದಿಯನ್ನು ಟೀಕಿಸಲು ಸಿಕ್ಕಿಲ್ವಾ ಯೋಗವೇ ಬೇಕಿತ್ತಾ? ಭಾರತದ ಪುರಾತನ ಸಂಸ್ಕಾರವನ್ನು ಈ ರೀತಿ ಅವಹೇಳನ ಮಾಡುವುದು ಬೇಕಿತ್ತಾ? ಯೋಗಾಸನಗಳ ಮಹತ್ವದ ಅರಿವು ಇದ್ದು ಮಾಡಿದ್ದಾ ಇದನ್ನು? ಮೋದಿಗೂ ಯೋಗಕ್ಕೂ ಏನು ಸಂಭಂದ? ಯೋಗವನ್ನು ಮೋದಿ ಕೊಟ್ಟದ್ದಾ ಜಗತ್ತಿಗೆ?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X