“ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಯುತ್ತಿದ್ದು, ಈ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು” ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ ಹೇಳಿದರು.
ಹಾವೇರಿ ಜಿಲ್ಲೆಯ ಗುತ್ತಲ ಹಾಗೂ ಸುತ್ತಮುತ್ತ ಹಳ್ಳಿಗಳಿಗೆ ಡಿ ಎಸ್ ಎಸ್ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ ಅವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ಕುರಿತು ಹಾವೇರಿ ಜಿಲ್ಲೆಯ ಗುತ್ತಲ ಸುತ್ತ-ಮುತ್ತ ಹಳ್ಳಿಗಳಿಗೆ ಭೇಟಿ ನೀಡಿ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
“ಒಳಮೀಸಲು ಜಾರಿಗಾಗಿ ಪರಿಶಿಷ್ಟ ಜಾತಿಗಳಲ್ಲಿನ ಮೂಲಕ ಜಾತಿಗಳ ಸಮೀಕ್ಷೆ ಮಾಡಲು ಮನೆ ಮನೆಗೆ ಬರುವರು ಹಾಗಾಗಿ ಸ್ವಾಭಿಮಾನದಿಂದ ಮಾದಿಗ ಎಂದು ಹೇಳಿ, 61ನೇ ಸಂಖ್ಯೆಯನ್ನು ನೋಂದಾಯಿಸಬೇಕು” ಎಂದು ಹೇಳಿದರು.
“ಹೀಗೆ ನೊಂದಾಯಿದರೆ ಸರಕಾರದ ಸರಕಾರದ ಸೌಲಭ್ಯಗಳನ್ನು ಪಡೆಯಬಹುದು. ಹಾಗಾಗಿ ಹೆಮ್ಮೆಯಿಂದ ಬರೆಯಿಸಿ ನಾವು ಮಾದಿಗ ಜಾತಿಯವರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬೇಸಿಗೆ ದಾಹ ತಣಿಸಿ ಮಾನವೀಯತೆ ಮೆರೆಯುತ್ತಿರುವ ʼಸತ್ಯಸಾಯಿ ಸಂಸ್ಥೆ ಸೇವಕರುʼ
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರು ದೇವರಾಜ್ ಹಾವನೂರು, ಹನುಮಂತಪ್ಪ ಹಾಲಪ್ಪ ಹರಿಜನ, ಬಸವರಾಜ್ ಲಕ್ಷ್ಮಪ್ಪ ದಾನಮ್ಮನವರ, ಮಹೇಶಪ್ಪ ಗಾಳೆಪ್ಪ ಹರಿಜನ ಇನ್ನೂ ಅನೇಕರು ಜೊತೆಗಿದ್ದರು.
