ಪಾಕಿಸ್ತಾನ ವಿರುದ್ಧ ನಡೆದ ಏರ್ ಸ್ಟ್ರೈಕ್ ಹಿನ್ನೆಲೆಯಲ್ಲಿ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯಲಿರುವ ಸಂವಿಧಾನ ಉಳಿಸಿ ಅಭಿಯಾನ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.
ಸಂವಿಧಾನ ವಿರೋಧಿ ಹಾಗೂ ಜನ ವಿರೋಧಿ ಸರ್ಕಾರದ ವಿರುದ್ದ ನಗರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗು ಸಿಎಂ ಸಿದ್ದರಾಮಯ್ಯ ಅವರ ಇಂದು ಆಗಮಿಸುತ್ತಿದ್ದರು.ಪಾಕಿಸ್ತಾನ ವಿರುದ್ಧ ದಾಳಿ ನಡೆದಿರುವ ಹಿನ್ನಲೆಯಲ್ಲಿ ಸಿಎಂ ಪ್ರವಾಸ ರದ್ದುಗೊಂಡಿದೆ ಕಾರಣಕ್ಕೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಾಕ್ ಡ್ರಿಲ್ ತಾತ್ಕಾಲಿಕ ಮುಂದೂಡಿಕೆ ; ಡಿಸಿ ನಿತೀಶ್ ಕೆ
ಬಿಜೆಪಿ ಸರ್ಕಾರ ಕೇವಲ ಬಲಪಂತಿಯರ ಪರವಾಗಿ ಕೆಲಸ ಮಾಡುತ್ತಿದೆ. ಹೊರತು ಬಡವರ, ಮಾಧ್ಯಮ ಜನರ ಪರವಾಗಿಲ್ಲ. ಬಿಜೆಪಿ ಮತ್ತು ಮೋದಿ ಅವರ ಕುತಂತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಪ್ರತಿಭಟನಾ ಸಮಾವೇಶಗಳು ವಿಭಾಗ ಮಟ್ಟದಲ್ಲಿ ನಡೆಸಲಾಗುತ್ತಿತ್ತು ಈ ನಿಟ್ಟಿನಲ್ಲಿ ರಾಯಚೂರು ನಗರದಲ್ಲಿಯೂ ಕೂಡ ಆಯೋಜಿಸಲಾಗಿತ್ತು.
