ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್ ಏರಿಯಾದ ತೀರಾ ಸಾಧಾರಣವಾದ ಲಾಡ್ಜ್ ವೊಂದರಲ್ಲಿ ಸಿಂಗಲ್ ರೂಮಿನಲ್ಲಿ ಉಳಿದುಕೊಳ್ಳುವ, ಕೋರ್ಟು ಕಚೇರಿಗಳಿಗೆ ಓಡಾಡಲು ಆಟೋ ಅಥವಾ ಸಿಟಿ ಬಸ್ ಬಳಸುವ, ಸಾಧಾರಣ ಶರ್ಟ್, ಪ್ಯಾಂಟ್ ಧರಿಸುವ ಎಸ್.ಆರ್. ಹಿರೇಮಠ ಮೆದು ಮಾತಿನ ಸಜ್ಜನರು. ಆದರೆ ಇವರ ಕ್ರಿಯೆಗಳು ಬಲಾಢ್ಯರ ಬುಡ ಅಲ್ಲಾಡಿಸಿಬಿಟ್ಟಿವೆ. ಅಂತಹ ಕೆಲವು ಉದಾಹರಣೆಗಳೆಂದರೆ… ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಿಬಿಐ ದಾಳಿಗೊಳಗಾದ ಮುಖ್ಯಮಂತ್ರಿ ಎಂಬ ಅಪಖ್ಯಾತಿಗೆ ಬಿ.ಎಸ್.ಯಡಿಯೂರಪ್ಪನವರು ಗುರಿಯಾಗಿದ್ದರೆ, ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದು ಜೈಲು ವಾಸ ಅನುಭವಿಸಿದ್ದರೆ, ಮತ್ತೆ ಕೋರ್ಟು, ಕಚೇರಿ, ಬಂಧನಗಳ ಭೀತಿಯಲ್ಲಿ ಬದುಕುತ್ತಿದ್ದರೆ, ಅದರ ಹಿಂದೆ ಎಸ್.ಆರ್. ಹಿರೇಮಠರ ಸತತ ಶ್ರಮ ಮತ್ತು ಪ್ರಾಮಾಣಿಕ…

ಲೇಖಕ, ಪತ್ರಕರ್ತ