ಶಿವಮೊಗ್ಗ | ಭೂ ಕಬಳಿಕೆಗೆ ಯತ್ನ, ಕ್ರಮ ಜರುಗಿಸಿ ಕುಳುವ ಸಮುದಾಯಕ್ಕೆ ನ್ಯಾಯ ಒದಗಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

Date:

Advertisements

ಗೋಪಾಳದ ಡಿವಿಜಿ ವೃತ್ತದಲ್ಲಿರುವ ಸರ್ವೇ ನಂಬರ್ 1 ರಲ್ಲಿ ಗ್ರಾಮ ಠಾಣಾ ಜಮೀನು 38.00 ಗುಂಟೆ ಹಾಗೂ ಇದಕ್ಕೆ ಹೊಂದಿಕೊಂಡಂತೆ ಇರುವ ಸುಮಾರು 4.00 ಎಕರೆ ಸೆಟ್ಲಮೆಂಟ್ ಭೂ ಪ್ರದೇಶವನ್ನು ಕಬಳಿಸಲು ಮುಂದಾಗಿರುವ ಖಾಸಗಿ ವ್ಯಕ್ತಿಗಳ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಹಾಗೂ ಸದರಿ ಭೂ ಪ್ರದೇಶವನ್ನು ಜಿಲ್ಲಾಡಳಿತವು ವಶಪಡಿಸಿಕೊಂಡು ಕುಳುವ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು 90 ವರ್ಷದ ಅವಧಿಗೆ ಲೀಸ್ ಬೇಸ್‌ನಲ್ಲಿ ಮಂಜೂರು ಮಾಡಿಕೊಡಬೇಕೆಂದು ಕುಳುವ ಯುವ ಸೇನೆಯು ಈ ಮೂಲಕ ತಿಳಿಸುವುದೇನೆಂದರೆ.

ಈ ಭೂ ಪ್ರದೇಶವು ಶಿವಮೊಗ್ಗ ಪ್ರಸ್ತುತ ನಗರ ಹಾಗೂ ಅಂದಿನ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ಒಟ್ಟು ಸುಮಾರು ಒಟ್ಟು ಐದು ಎಕರೆ ಗ್ರಾಮ ಠಾಣಾ ಜಮೀನು ಸೆಟ್ಲಮೆಂಟ್ ಪ್ರದೇಶವು ಇದೀಗ ಪೋರ್ಜರಿ ದಾಖಲೆ ಹಾಗೂ ಸುದ್ದಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ವಂಚಿಸಿ ಭೂ ಕಬಳಿಕೆ ಮಾಡಿಕೊಂಡಿದ್ದು ಎಂದು ಆರೋಪಿಸಿದೆ.

1001583272

ಸದರಿ ಅಧಿಕಾರದ ದುರುಪಯೋಗಕ್ಕೆ ತುತ್ತಾಗಿರುವ ಇಂತಹ ಮೀಸಲು ಭೂ ಪ್ರದೇಶಗಳು, ಅಕ್ರಮ ಖಾತೆಗಳಿಗೆ, ಭೂ ಸರ್ವೇ ಸ್ಟೆಪ್‌ ಗಳಿಗೆ ಒಳಗಾಗುತ್ತಿರುವುದು ಅಲ್ಲದೆ ಡಿ ನೋಟಿಫಿಕೇಶನ್ ಎನ್ನುವ ಜ್ವಲಂತ ಪಿಡುಗುಗಳಿಗೆ ಕಾರಣವಾಗುತ್ತಿರುವ ಗ್ರಾಮ ಲೆಕ್ಕಿಗ, ರಜಸ್ಟ ನೀರೀಕ್ಷಕ, ಸರ್ವೇ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತಿನಲ್ಲಿಟ್ಟು ಮೀಸಲು ಭೂ ಪ್ರದೇಶದಲ್ಲಿ ಅಕ್ರಮವಾಗಿ ಒಳ ಪ್ರವೇಶಿಸಿರುವವರ ಮೇಲೆ ಅಗತ್ಯ ಗುಂಡಾ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ ಎಂದು ಕುಳುವ ಯುವ ಸೇನೆ ಈ ಮೂಲಕ ಆಗ್ರಹಿಸುತ್ತದೆ ಎಂದು ತಿಳಿಸಿದರು.

Advertisements
1001583273

ಒಂದು ವೇಳೆ ಜಿಲ್ಲಾಡಳಿತ ವಿಶಂಭನೀತಿ ಅನುಸುರಿಸಿದರೆ ಹೋರಾಟವು ತೀವ್ರಗೊಳಿಸಲು ಕುಳುವ ಯುವ ಸೇನೆ ಮುಂದಾಗುತ್ತದೆ. ಈಗಾಗಲೇ ಕ್ರಮ ಕೈಗೊಳ್ಳಿ ಎಂದು ಶಿವಮೊಗ್ಗ ತಹಶಿಲ್ದಾರ್, ಜಿಲ್ಲಾಡಳಿತಕ್ಕೆ, ಜಿಲ್ಲಾ ಪಂಚಾಯ್ತಿಗೆ ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ, ಮನವಿ ನೀಡಲಾಗಿದ್ದರು ಇಂದಿಗೂ ಯಾವುದೇ ಪ್ರಕ್ರಿಯೆಗಳು ಮುಂದುವರೆಸಿರುವುದು ನ್ಯಾಯಯುತವಲ್ಲವಾಗಿದೆ ಎಂದು ಆರೋಪಿಸಿದ್ದಾರೆ.

ಹೀಗಾಗಿ ಸಾವಿರಾರು ಕುಟುಂಬಗಳು ಇಲ್ಲಿಯೇ ಮೂರು ತಲೆಮಾರುಗಳಿಂದ ವಾಸವಾಗಿರುವ ಕೊರಮ ಸಮುದಾಯಕ್ಕೆ ಈ ಭೂ ಪ್ರದೇಶವನ್ನು ಲೀಸ್ ಬೇಸ್‌ನಲ್ಲಿ ಮಂಜೂರಾತಿ ಮಾಡಿ ಕೊಡಬೇಕೆಂದು ನಿಮ್ಮಗಳಿಗೆ ಈ ಪ್ರತಿಭಟನೆಯ ಮೂಲಕ ಮತ್ತೊಮ್ಮೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ನೀವು ಭೂ ಕಬಳಿಕೆದಾರರ ಮೇಲೆ ಕ್ರಮ ಜರುಗಿಸಿ ಭೂ ಪ್ರದೇಶವನ್ನು ವಶಪಡಿಸಿಕೊಂಡು ಕುಳುವ ಯುವ ಸಮುದಾಯದ ಬೇಡಿಕೆಯನ್ನು ಈಡೇರಿಸಬೇಕೆಂದು ಸಾಂವಿಧಾನಿಕವಾಗಿ ಈ ಮನವಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಲೋಕೇಶ್ ಫೈಲ್ವಾನ್, ಪ್ರಫುಲ್ಲ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

Download Eedina App Android / iOS

X