ನೂತನ ಪೋಪ್ ಆಗಿ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರಿವೋಸ್ಟ್ ಆಯ್ಕೆ

Date:

Advertisements

132 ಕಾರ್ಡಿನಲ್ಸ್ ಭಾಗವಹಿಸಿದ್ದ ಕಾಂಕ್ಲೇವ್ ನಲ್ಲಿ ಕ್ರೈಸ್ತರ ನೂತನ ವಿಶ್ವ ಗುರು(ಪೋಪ್) ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಅವರನ್ನು ಆಯ್ಕೆ ಮಾಡಲಾಗಿದೆ.

ವ್ಯಾಟಿಕನ್ ಸಿಟಿಯಲ್ಲಿರುವ ಸಿಸ್ಟೀನ್ ಚಾಪೆಲ್ ಚಿಮಣಿಯಿಂದ ಶ್ವೇತ ವರ್ಣದ ಹೊಗೆ ಹೊರಹೊಮ್ಮುತ್ತಿದ್ದಂತೆ ಸೈಂಟ್ ಪೀಟರ್ಸ್ ಚೌಕದಲ್ಲಿ ಸೇರಿದ್ದ ಸಾವಿರಾರು ಕ್ರೈಸ್ತ ವಿಶ್ವಾಸಿಗಳು ನೂತನ ಪೋಪ್ ಆಯ್ಕೆಯನ್ನು ಸಂಭ್ರಮಿಸಿದರು.

ಹೊಸದಾಗಿ ಆಯ್ಕೆಯಾದ ಪೋಪ್ ತ್ವರಿತವಾಗಿ ಸಾಂಪ್ರದಾಯಿಕ ಪಾಪಲ್ ವಸ್ತ್ರಗಳನ್ನು ಧರಿಸಿ, ಅವರ ಪವಿತ್ರ ಕಚೇರಿಗೆ ಸಾಂಕೇತಿಕ ಹೆಜ್ಜೆ ಇಡಲಿದ್ದಾರೆ. ಹಿರಿಯ ಕಾರ್ಡಿನಲ್ ಡಿಯಕನ್ ಸೈಂಟ್ ಪೀಟರ್ಸ್ ಬೆಸಿಲಿಕಾದ ಕೇಂದ್ರ ಬಾಲ್ಕನಿಯಲ್ಲಿ ಐತಿಹಾಸಿಕ ಧಾರ್ಮಿಕ ಘೋಷಣೆ ಉದ್ಘರಿಸುತ್ತಾ ಹೊರಬಂದರು.

Advertisements

“ಹ್ಯಾಬೆಮಸ್ ಪಾಪಮ್” (“ನಮಗೆ ಪೋಪ್ ಇದ್ದಾರೆ”), ಎಂಬ ಘೋಷಣೆಗಳು ಹೊರಹೊಮ್ಮುತ್ತಿದ್ದಂತೆ ಪೋಪ್ ಅವರ ಜನ್ಮ ಹೆಸರು ಮತ್ತು ಅವರು ಆಯ್ಕೆ ಮಾಡಿದ ಪಾಪಲ್ ಹೆಸರನ್ನು ಘೋಷಿಸಿಲಾಯಿತು.

ಸಾಂಪ್ರದಾಯಿಕ ಧಾರ್ಮಿಕ ವಿಧಿಗಳ ನಂತರ ಹೊಸ ಪೋಪ್ ಸಾರ್ವಜನಿಕರ ಮುಂದೆ ಕಾಣಿಸಿಕೊಂಡರು. ಇದನ್ನು ಉರ್ಬಿ ಎಟ್ ಓರ್ಬಿ (“ನಗರ ಮತ್ತು ಜಗತ್ತಿಗೆ”) ಎಂದು ಕರೆಯಲಾಗುತ್ತದೆ.

ನೂತನ ಪೋಪ್ ಅವರಿಗೆ
ಹದಿನಾಲ್ಕನೇ ಲಿಯೊ ಎಂಬ ಹೆಸರನ್ನು ಆಯ್ಕೆ ಮಾಡಲಾಯಿತು. ಇವರು ಅಮೆರಿಕಾದಿಂದ ಆಯ್ಕೆಯಾದ ಮೊಟ್ಟ ಮೊದಲ ಪೋಪ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯರು ಸೇರಿ 5.5 ಕೋಟಿ ವಿದೇಶಿಗರ ವೀಸಾಗಳ ಮರು ಪರಿಶೀಲನೆಗೆ ಟ್ರಂಪ್ ಆಡಳಿತ ನಿರ್ಧಾರ

ಅಮೆರಿಕಾದಲ್ಲಿ ವೀಸಾ ಹೊಂದಿರುವ 5.5 ಕೋಟಿ ವಿದೇಶಿಗರನ್ನು ಅವರ ದಾಖಲೆಗಳಲ್ಲಿ ಯಾವುದೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

Download Eedina App Android / iOS

X