ದಾವಣಗೆರೆ | ಕರ್ನಾಟಕ ಶ್ರಮಿಕಶಕ್ತಿಯಿಂದ ಕಾರ್ಮಿಕರ ದಿನಾಚರಣೆ, ಹಿರಿಯ ಕಾರ್ಮಿಕರಿಗೆ ಅಭಿನಂದನೆ.

Date:

Advertisements

“ಕರ್ನಾಟಕ ಶ್ರಮಿಕ ಶಕ್ತಿ, ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ 139ನೇ ಕಾರ್ಮಿಕ ದಿನಾಚರಣೆ ಮತ್ತು ಹಿರಿಯ ಕಾರ್ಮಿಕರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಸಂಘಟಿತ ವಲಯದ ಕಾರ್ಮಿಕರು ಭಾಗವಹಿಸಲಿದ್ದಾರೆ” ಎಂದು ಮುಖಂಡ ಸತೀಶ್ ಅರವಿಂದ್ ತಿಳಿಸಿದ್ದಾರೆ.

“139ನೇ ಕಾರ್ಮಿಕ ದಿನಾಚರಣೆಯನ್ನು ನಾಳೆ ಮೇ 10, 2025ರ ಶನಿವಾರ ಬೆಳಿಗ್ಗೆ 11-30 ಕ್ಕೆ ದಾವಣಗೆರೆ ನಗರದ ವನಿತಾ ಸಮಾಜ, ಆರುಣ ಟಾಕೀಸ್ ಹಿಂಭಾಗ ಇಲ್ಲಿ ಆಚರಿಸಲಾಗುತ್ತಿದ್ದು ಮತ್ತು ಹಿರಿಯ ಕಾರ್ಮಿಕರಿಗೆ ಅಭಿನಂದನಾ ಸಮಾರಂಭವನ್ನು ಕೂಡ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

“ಜಗತ್ತಿನ ಕಾರ್ಮಿಕ ವರ್ಗವು ನ್ಯಾಯಯುತ ಸೌಲಭ್ಯ, ಹಕ್ಕುಗಳಿಗಾಗಿ ಹೋರಾಡಿ ಹುತಾತ್ಮರಾದ ದಿನವನ್ನು “ಮೇದಿನ”ವನ್ನಾಗಿ ಆಚರಿಸುತ್ತಾ ಬರಲಾಗಿದೆ. ಸಂಘಟಿತವಾಗಿದ್ದ ಕಾರ್ಮಿಕ ವರ್ಗವು ಇಂದುಮತಿ ವಿಘಟನೆಯಾಗುತ್ತ ಸಾಗುತ್ತಿದೆ. ಅಸಂಘಟಿತ ಕಾರ್ಮಿಕರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯು ಕೆಲಸ ಮಾಡುತ್ತಾ ಬಂದಿದೆ”ಎಂದು ಹೇಳಿದರು.

Advertisements
1001962645

“ಮೇ ದಿನವನ್ನು ಸ್ಮರಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವು ಕೂಡ ಆಗಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಕಟ್ಟಡ ಕಾರ್ಮಿಕರು, ಟೈಲರ್ ಕಾರ್ಮಿಕರು, ಹಮಾಲಿ ಕಾರ್ಮಿಕರು, ಮೆಕಾನಿಕ್ ಕಾರ್ಮಿಕರು ಇನ್ನಿತರೇ ಎಲ್ಲಾ ಅಸಂಘಟಿತ ಕಾರ್ಮಿಕರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು” ಎಂದು ಕರೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ: ಭತ್ತ ಖರೀದಿ ಕೇಂದ್ರಕ್ಕೆ ಆಗ್ರಹಿಸಿ
ರಸ್ತೆಯಲ್ಲಿ ಭತ್ತ ಸುರಿದು ರೈತರ ಪ್ರತಿಭಟನೆ.

ಕಾರ್ಯಕ್ರಮವನ್ನು ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕುಮಾ‌ರ್ ಸಮತಳ ಉದ್ಘಾಟಿಸಲಿದ್ದು,
ಕಾರ್ಯಕ್ರಮದಲ್ಲಿ ದಾವಣಗೆರೆಯ ಸೈಯದ್ ಅಶ್ಚಾಕ್,ಉಪಾಧ್ಯಕ್ಷ ಕಾಯಕಜೀವಿ ಕಟ್ಟಡ ಕಾರ್ಮಿಕರ ಸಂಘ, ಪವಿತ್ರ, ಅಧ್ಯಕ್ಷೆ ಕರ್ನಾಟಕ ಟೈಲರ್ಸ್ ಕಾರ್ಮಿಕರ ಫೆಡರೇಶನ್, ಸೈಯದ್ ಅಫ್ತಾಬ್ ತಾಲ್ಲೂಕು ಅಧ್ಯಕ್ಷರು, ಕಾಯಕಜೀವಿ ಕಟ್ಟಡ ಕಾರ್ಮಿಕರ ಸಂಘ, ಸೈಯದ್ ಅಕ್ಟರ್, ಮುಖಂಡರು, ಲೋಡಿಂಗ್ ಕಾರ್ಮಿಕರ ಒಕ್ಕೂಟ, ಆದೀಲ್ ಖಾನ್ ಎಸ್.ಕೆ, ಕರ್ನಾಟಕ ಶ್ರಮಿಕ ಶಕ್ತಿ,‌ರವೀಂದ್ರ ಕೆ, ಕರ್ನಾಟಕ ಟೈಲರ್ಸ್ ಕಾರ್ಮಿಕರ ಫೆಡರೇಶನ್, ಬೆಂಗಳೂರಿನ ಕರ್ನಾಟಕ ಶ್ರಮಿಕ ಶಕ್ತಿಯ ಬಸವರಾಜು, ಚನ್ನಮ್ಮ, ಭಾಗವಹಿಸಲಿದ್ದು, ಹೋರಾಟದ ಹಾಡುಗಳನ್ನು ಹನುಮಂತಪ್ಪ ಕರೂರು, ಕಾಯಕಜೀವಿ ಕಟ್ಟಡ ಕಾರ್ಮಿಕರ ಸಂಘ ಇವರು ಹಾಡಲಿದ್ದಾರೆ.‌

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ನಾಗಮೋಹನ ದಾಸ್ ಆಯೋಗದ ವೈಜ್ಞಾನಿಕ ಒಳಮೀಸಲಾತಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ನ್ಯಾ.ನಾಗಮೋಹನ ದಾಸ್ ಆಯೋಗದ ಒಳಮೀಸಲಾತಿ ವರದಿಯು ವೈಜ್ಞಾನಿಕವಾಗಿದ್ದು, ಪ್ರಸ್ತುತ ಅಧಿವೇಶನದಲ್ಲಿ ಜಾರಿಗೊಳಿಸಬೇಕು...

ದಾವಣಗೆರೆ | ದಲಿತ ಸಂಘಟನೆಗಳ ಒಳಮೀಸಲಾತಿ ಪ್ರತಿಭಟನೆ; ಎಸಿ ಕಛೇರಿಗೆ ಬೀಗ

"ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಒಂದು ವರ್ಷವಾದರೂ ಒಳಮೀಸಲಾತಿಯನ್ನು ಜಾರಿ ಮಾಡುವಲ್ಲಿ...

ದಾವಣಗೆರೆ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳಿಂದ ಹರಿಹರದಲ್ಲಿ ಆ.18ಕ್ಕೆ ಪ್ರತಿಭಟನೆ

ಪರಿಶಿಷ್ಟ ಜಾತಿ ಜನಾಂಗದವರಿಗೆ ಯಥಾವತ್ತಾಗಿ ಒಳ ಮೀಸಲಾತಿ ಜಾರಿ ಮಾಡಲು ಒತ್ತಾಯಿಸಿ,...

Download Eedina App Android / iOS

X