ಚಾಮರಾಜನಗರ | ಮೇ. 26 ರಂದು ಭೀಮೋತ್ಸವ; ಪ್ರಗತಿಪರ ಸಂಘಟನೆಗಳ ಬೆಂಬಲ

Date:

Advertisements

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆಯ ಮೈ ಜ್ಯೂಸ್ ಕಮೀಟಿ ಹಾಲ್ ನಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ನಡೆಸಿದ ಸಭೆಯಲ್ಲಿ ಮೇ. 26 ರ ಭೀಮೋತ್ಸವಕ್ಕೆ ಪ್ರಗತಿಪರ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.

ಕನ್ನಡ ಸಾಹಿತ್ಯ ಪರಿಷತ್ತು , ಕರ್ನಾಟಕ ರಾಜ್ಯ ರೈತ ಸಂಘ , ಹಸಿರು ಸೇನೆ , ದಲಿತ ಸಂಘರ್ಷ ಸಮಿತಿ , ( ಕೃಷ್ಣಪ್ಪ ಬಣ) , ಕರ್ನಾಟಕ ರಕ್ಷಣಾ ವೇದಿಕೆ , ಜಾರಕಿಹೋಳಿ ಬ್ರಿಗೇಡ್, ಕರ್ನಾಟಕ ಗ್ರಾಮ ಪಂಚಾಯತಿ ಸದಸ್ಯರುಗಳ ಮಹಾ ಒಕ್ಕೂಟ , ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಕಾವಲು ಪಡೆ , ಕುವೆಂಪು ಕನ್ನಡ ಸಾಹಿತ್ಯ ವೇದಿಕೆ , ಸೃಷ್ಟಿ ಸಂಸ್ಥೆ , ರೂಟ್ಸ್ ಫಾರ್ ಫ್ರೀಡಂ , ಗಡಿನಾಡು ರಕ್ಷಣಾ ಸೇನೆ , ನಮ್ಮ ಕರ್ನಾಟಕ ಸೇನೆ , ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ , ವನ್ಯಜೀವಿ ಮತ್ತು ಪರಿಸರ ಸಂರಕ್ಷಣಾ ಸಂಘ , ಗಿರಿಜನ ಶ್ರೇಯೋಭಿವೃಧ್ಧಿ ಸಂಘ , ಬಿ ವಿ ಎಸ್ , ಗೃಹ ರಕ್ಷಣಾ ದಳ , ಮಹಾನಾಯಕ ಶ್ರೇಯೋಭಿವೃಧ್ಧಿ ಸಂಘ ಮುಂತಾದ ಹಲವಾರು ಸಂಘಟನೆಗಳು ಬೆಂಬಲವನ್ನು ನೀಡಲು ಒಮ್ಮತದ ನಿರ್ಧಾರ ಕೈಗೊಂಡರು.

ರೈತ ಮುಖಂಡ ಕುಂದಕೆರೆ ಸಂಪತ್ತು ಮಾತನಾಡಿ ‘ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರು ರಾಷ್ಟ್ರೀಯ ಮಟ್ಟದ ನಾಯಕರಷ್ಟೆಯಲ್ಲ ಅವರು ವಿಶ್ವ ಮಟ್ಟದ ನಾಯಕರು. ಅವರ ಜಯಂತಿಯ ಕಾರ್ಯಕ್ರಮವನ್ನು ಗುಂಡ್ಲುಪೇಟೆ ಯಲ್ಲಿ ಅಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ ‘ ಎಂದರು.

Advertisements

ಕವಿ ಚುಟುಕು ಮಾಧು ಮಾತನಾಡಿ ‘ ಸರ್ವ ಸಮುದಾಯದವರು ಸೇರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭೀಮೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಚಾರ. ಎಲ್ಲರೂ ಒಟ್ಟುಗೂಡಿ ಸಂವಿಧಾನ ಶಿಲ್ಪಿಯವರ ಕಾರ್ಯಕ್ರಮ ಯಶಸ್ವಿಗೊಳಿಸೋಣ ‘ ಎಂದರು.

ಆಚರಣಾ ಸಮಿತಿ ಅಧ್ಯಕ್ಷರಾದ ಸುಭಾಷ್ ಮಾಡ್ರಳ್ಳಿ ಮಾತನಾಡಿ ‘ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪ್ರಸ್ತುತ ಎಲ್ಲರ ಮನೆ ಮಾತಾಗಿದ್ದಾರೆ. ಅವರು, ನೀಡಿದ ಸಂವಿಧಾನ ಆಶಯಗಳು ಜನ ಸಾಮಾನ್ಯರಿಗೆ ತಲುಪಲು ಎಲ್ಲರನ್ನೂ ಒಳಗೊಂಡ ಭೀಮೋತ್ಸವ ಮೆರವಣಿಗೆ ಸ್ಪೂರ್ತಿಯಾಗಲಿದೆ ‘ ಎಂದು ಆಶಯ ವ್ಯಕ್ತಪಡಿಸಿದರು.

ಆಚರಣಾ ಸಮಿತಿ ಉಸ್ತುವಾರಿ ನವೀನ್ ಮೌರ್ಯ ಮಾತನಾಡಿ ‘ ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆಲ್ಲರಿಗೂ ಆದರ್ಶ ವ್ಯಕ್ತಿ. ಅವರು ನೀಡಿದ ಸಂವಿಧಾನದ ಫಲವಾಗಿ ನಾವು ಹಕ್ಕು ಅಧಿಕಾರಗಳನ್ನ ಅನುಭವಿಸಲು ಸಾಧ್ಯವಾಗಿದೆ. ಹಾಗಾಗಿ, ಭಾರತದ ಎಲ್ಲಾ ಜನತೆ ಗೌರವಿಸಬೇಕಾಗಿದೆ. ಅವರ ಋಣ ತೀರಿಸಲು ಇಂತಹ ಭೀಮೋತ್ಸವ ಆಚರಣೆ ಮಾಡಲು ಮುಂದಾಗಿದ್ದೇವೆ ‘ ಎಂದರು.

ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಅವರ ನೇತೃತ್ವವಹಿಸುವರು. ದಿವ್ಯ ಸಾನಿಧ್ಯ ಪೂಜ್ಯ ಕಲ್ಯಾಣ ಸಿರಿ ಭಂತೇಜಿ, ಲೋಕಸಭಾ ಸದಸ್ಯ ಸುನೀಲ್ ಬೋಸ್ , ಮಾಜಿ ಶಾಸಕ ಸಿ. ಎಸ್. ನಿರಂಜನ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿಲಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸಾಮರಸ್ಯದ ಮೆರವಣಿಗೆ ನಡೆಯಲಿದ್ದು, ಇದೊಂದು ಐತಿಹಾಸಿಕ ಹೆಜ್ಜೆಗೆ ಸಾಕ್ಷಿಯಾಗಲಿದೆ ಎಂದು ಸಂಘಟಕರು ಆಶಯ ವ್ಯಕ್ತಪಡಿಸಿ. ಭೀಮೋತ್ಸವ ಮೆರವಣಿಗೆಯಲ್ಲಿ ಪಲ್ಲಕ್ಕಿ ಉತ್ಸವ, ನಾದಸ್ವರ ತಂಡ , ಗೊರವರ ಕುಣಿತ , ಗಿರಿ ಜನರ ನೃತ್ಯ , ಭಜನೆ ತಂಡ , ಕಲಾ ತಂಡ ಸೇರಿದಂತೆ 20 ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಗೆ ಮೆರಗು ತರಲಿದೆ ಎಂದು ಮಾಹಿತಿ ನೀಡಿದರು.

ಈ ವಿಶೇಷ ವರದಿ ಓದಿದ್ದೀರಾ? ಮೈಸೂರು | ಕುಸಿಯುವ ಹಂತದಲ್ಲಿ ನೀರಿನ ಟ್ಯಾಂಕ್; ತೆರವುಗೊಳಿಸುವುದೇ ಪುರಸಭೆ

ಸಭೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅರ್. ಡಿ. ಉಲ್ಲಾಸ್, ಹಿರಿಯ ಹೋರಾಟಗಾರ ಬ್ರಹ್ಮಾನಂದ, ಮಹದೇಪ್ಪ. ಮಾಡ್ರಹಳ್ಳಿ , ಹಾಲಹಳ್ಳಿ ಮಹೇಶ್, ನಾಗಣ್ಣ ವೀರನಪುರ, ಕರವೇ ರಾಜೇಂದ್ರ, ಅಬ್ದುಲ್ ಮಾಲಿಕ್, ವೃಷಬೇಂದ್ರ ಹಂಗಳ, ಗುಂಡ್ಲುಪೇಟೆ ಮಾಧು, ಶ್ರೀನಿವಾಸ್ ನಾಯಕ್, ಗೋವಿಂದ್ ನಾಯಕ್, ರಂಗಪ್ಪ ನಾಯಕ್, ಅಬ್ದುಲ್ ರಶೀದ್, ಮುನೀರ್ ಪಾಷ, ರಾಜೇಂದ್ರ ಮದ್ದೂರ್, ಮಾಧು ಮದ್ದೂರು ಕಾಲೂನಿ, ಬಾಲು ಗುಂಡ್ಲುಪೇಟೆ, ನಾಗಯ್ಯ ಹೂನ್ನೇಗೌಡನಹಳ್ಳಿ, ರಮೇಶ್ ಗುಂಡ್ಲುಪೇಟೆ, ಕೃಷ್ಣ ಹೊಸೂರು, ರಾಜೇಶ್ ಹಂಗಳ, ನಾಗಮಲ್ಲು ಭೀಮನ ಬೀಡು, ಶ್ರೀನಿವಾಸ್ ಎಂ ಪಾಳ್ಯ, ಶಿವು ವೀರನಪುರ, ಮಂಟೇಶ್ ವಡ್ಡಗೆರೆ, ನಾರಾಯಣ , ಸೇರಿದಂತೆ ಹಲವಾರು ಮುಖಂಡರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X