“ಭಾರತದ ಯುವಶಕ್ತಿ ಹಲವಾರು ಸೃಜನಾತ್ಮಕ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ಅವರಿಗೆ ಆತ್ಮವಿಶ್ವಾಸ ದೃಢಸಂಕಲ್ಪ ಬೇಕಾಗುತ್ತದೆ. ಸಮಾಜ, ಸಂಸ್ಕೃತಿಯ ಅರಿವು, ಮಾನವ ಸಂಬಂಧಗಳಲ್ಲಿ ನಂಬಿಕೆ ಮತ್ತು ವಿಶ್ವಾಸ, ಜಾತಿ,ಧರ್ಮಗಳ ವೈಶಮ್ಯ ಮೀರಿದ ಸೌಹಾರ್ದತೆಯ ಜೀವನ ಕ್ರಮ ಇವೆಲ್ಲವೂ ಅಪೇಕ್ಷಣೀಯ. ನಮ್ಮ ದೇಶವು ಎದುರಿಸಬೇಕಾದ ಹಲವಾರು ಸವಾಲುಗಳು ನಮ್ಮ ಮುಂದಿವೆ. ಸಾಧಿಸಬೇಕಾದ ದಾರಿ ನಮ್ಮ ಮುಂದಿದೆ. ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವ ನಮ್ಮ ರಾಷ್ಟ್ರೀಯ ಸೇವಾ ಯೋಜನೆ ಈ ಎಲ್ಲಾ ಸವಾಲುಗಳನ್ನು ಸ್ವೀಕರಿಸುವುದಕ್ಕೆ ಸಿದ್ಧವಿರುವುದು ನಮಗೆ ಸಂತೋಷ ತಂದಿದೆ”.
ಯುವ ಜನರ ಕಾರ್ಯಕ್ಷಮತೆ ವೃದ್ಧಿಸುವಲ್ಲಿ ಪ್ರತಿಭಾ ಶಕ್ತಿ ವಿಕಸಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಪೂರಕವಾಗಿದೆ. ಏಳು ದಿನಗಳವರೆಗೆ ನಡೆದ ಈ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಕಲೆ, ಸಾಹಿತ್ಯ ಸಂಸ್ಕೃತಿ ಪರಿಚಾರಿಕೆಯೊಂದಿಗೆ ವಿದ್ಯಾರ್ಥಿಗಳು ನಡೆದುಕೊಂಡ ರೀತಿ ಶ್ಲಾಘನೀಯ” ಎಂದು ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಚಾಲನೆಗೊಂಡ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಕುಲಪತಿಗಳಾದ ಶರತ್ ಅನಂತಮೂರ್ತಿಯವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸ್ವಯಂಸೇವಕರ ಕೈಪಿಡಿಯನ್ನು ಮಾನ್ಯಕುಲಪತಿಗಳು ಬಿಡುಗಡೆ ಮಾಡಿದರು.
ಕುಲಸಚಿವರಾದ ಮಂಜುನಾಥ ಎ.ಎಲ್ ಮಾತನಾಡಿ ಈ ಶಿಬಿರದ ಯಶಸ್ಸಿಗೆ ಕಾರಣಕರ್ತರಾದ ಎಲ್ಲರನ್ನೂ ಅಭಿನಂದಿಸಿದರು.
ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ ಮೊದಲಾದವುಗಳಿಂದ ಆಗಮಿಸಿರುವ ಸುಮಾರು 150 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳು ಹಾಗೂ ಸ್ವಯಂಸೇವಕರನ್ನು ಗುರುತಿಸಿ ಅಭಿನಂದಿಸಲಾಯಿತು. ಕು. ನಯನ (ಕೇರಳ )ಸಂದೇಶ್ (ಮಹಾರಾಷ್ಟ್ರ) ಜಯವರ್ಧನ (ಕರ್ನಾಟಕ )ಕು. ಅಮೃತ (ಕರ್ನಾಟಕ) ಕು. ಪ್ರಿಯಾಂಕ (ತಮಿಳುನಾಡು)ವಿಶ್ವವೇಲನ್ (ಪಾಂಡಿಚರಿ) ಶ್ರೀ ಚಂದನ (ಆಂಧ್ರ ಪ್ರದೇಶ )ಮಹದೇವಸ್ವಾಮಿ (ಕರ್ನಾಟಕ),ಕು. ಸ್ನೇಹ (ಕೇರಳ) ಖಂಡೇರಾವ್( ಮಹಾರಾಷ್ಟ್ರ), ಈಶ್ವರ್ (ಆಂಧ್ರ ಪ್ರದೇಶ) ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಸುನೇಶ್ ಪರಿಯಲ್( ಕೇರಳ) ಶ್ರೀಮತಿ ರೇವತಿ( ಪಾಂಡಿಚೆರಿ ), ಜ್ಞಾನಶೇಖರ್( ತಮಿಳುನಾಡು ), ಡಾ.ನಿವಾಸ್,( ಆಂಧ್ರ ಪ್ರದೇಶ )ಶ್ರೀ ಅಜಯ್ ದಳವಾಯಿ( ಮಹಾರಾಷ್ಟ್ರ) ಉತ್ತಮ ಕಾರ್ಯಕ್ರಮಾಧಿಕಾರಿಗಳ ಪ್ರಶಸ್ತಿಯನ್ನು ಪಡೆದವರಾಗಿದ್ದಾರೆ. ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿಗಳಾದ ಡಾ.ಶುಭಾ ಮರವಂತೆ ಅವರು ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು. ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ದಿವ್ಯ ವಿ.ಪಿ., ಕಚೇರಿ ಸಿಬ್ಬಂದಿಗಳಾದ ಶ್ರೀಮತಿ ಮಾಲಾ ರಾಜಪ್ಪ, ಅರುಣ್ ಹಾಗೂ ಹಿರಿಯ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Very nice…