ನಾಗಮೋಹನದಾಸ ಏಕ ಸದಸ್ಯ ಆಯೋಗದಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಪ್ರಾರಂಭವಾಗಿರುವ ಗಣತಿ ಕಾರ್ಯ ಸರ್ವರ ಸಮಸ್ಯೆಯಿಂದ ಆಮೆ ವೇಗದಲ್ಲಿ ನಡೆಯುತ್ತಿದ್ದು ಕೂಡಲೇ ಒಂದು ವಾರ ಕಾಲಾವಕಾಶ ವಿಸ್ತರಿಸಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಅನಿಲ್ ಕುಮಾರ ಆಗ್ರಹಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಮೇ 5 ರಿಂದ ಪ್ರಾರಂಭವಾಗಿರುವ ಜಾತಿ ಗಣತಿಯಲ್ಲಿ ಮೊಬೈಲ್ ಆಪ್ ಮೂಲಕ ಕುಟುಂಬದ ಮಾಹಿತಿಯನ್ನು ದಾಖಲೀಕರಿಸಬೇಕಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಆಪ್ ಕಾರ್ಯನಿರ್ವಹಿಸುತ್ತಿಲ್ಲ. ಕುಟುಂಬ ವರ್ಗದ ಮಾಹಿತಿ ದಾಖಲು ಮಾಡಲು ಸಾಧ್ಯವಾಗುತ್ತಿಲ್ಲ. ಮೇ.10 ರಂದು ಜಿಲ್ಲೆಯಲ್ಲಿ ಒಂದೇ ಒಂದು ಕುಟುಂಬದ ಮಾಹಿತಿ ದಾಖಲೀಕರಿಸಲು ಆಗಿಲ್ಲ. ಆಧಾರ ಸಂಖ್ಯೆ ಹಾಗೂ ಜಾತಿ ಪ್ರಮಾಣಪತ್ರದ ಮಾಹಿತಿಯೂ ಆಪ್ ಸ್ವೀಕರಿಸುತ್ತಿಲ್ಲ. ಸಮೀಕ್ಷೆ ಪ್ರಾರಂಭವಾಗಿ ಆರು ದಿನಗಳಾದರೂ ನಿರೀಕ್ಷಿತ ಮಟ್ಟದಲ್ಲಿ ಗಣತಿ ನಡೆದಿಲ್ಲ. ಒಂದು ವಾರ ಕಾಲಾವಕಾಶ ವಿಸ್ತರಿಸಲು ಮೇ.12 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೇ 17,18 ರಂದು ಸಿಂಧನೂರಿನಲ್ಲಿ ಮೇ ಸಾಹಿತ್ಯ ಮೇಳ
ಮೇ.19 ರಿಂದ ಬೂತ್ ಮಟ್ಟದಲ್ಲಿ ಸಮೀಕ್ಷೆ ನಡೆಯಲಿದೆ. ಎಲ್ಲರೂ ಹೋಗಿ ಮಾಹಿತಿ ನೀಡಲು ಸಾಧ್ಯವಾಗದೇ ಹೋಗಬಹುದು. ಕಾರಣ ಮನೆ ಮನೆ ಸಮೀಕ್ಷೆಯೇ ವ್ಯವಸ್ಥಿತವಾಗಿ ನಡೆಯುವಂತೆ ಜಿಲ್ಲಾಡಳಿತ ಮತ್ತು ಆಯೋಗ ಮುಂದಾಗಬೇಕಿದೆ. 350 ಕುಟುಂಬಗಳಿಗ ಒಬ್ಬ ಗಣತಿ ಶಿಕ್ಷಕರನ್ನು ನೇಮಿಸಲಾಗಿದೆ. ಸರ್ವರ ಸಮಸ್ಯೆಯಿಂದ ಗಣತಿ ನಡೆಯದೇ ಇರುವದರಿಂದ ಹೆಚ್ಚುವರಿ ಗಣತಿದಾರರನ್ನು ನೇಮಿಸಿ ಗಣತಿ ವೇಗ ಹೆಚ್ಚಿಸಬೇಕೆಂದರು.
ಜನಾರ್ಧನ ಹಳ್ಳಿ ಬೆಂಚಿ ಮಾತನಾಡಿ ಒಂದು ಕುಟುಂಬದ ಮಾಹಿತಿ ಸಂಗ್ರಹಿಸಲು ಅರ್ಧಗಂಟೆಗೂ ಹೆಚ್ಚು ಸಮಯಬೇಕಾಗುತ್ತಿದೆ. ಸರ್ವರ ಸಮಸ್ಯೆಯಿಂದ ಕುಟುಂಬಗಳ ಅಪೂರ್ಣ ಮಾಹಿತಿ ಪಡೆಯುವಂತಾಗಿದೆ. ಒಂದೇ ಕುಟುಂಬದಲ್ಲಿ ಬೇರೆಬೇರೆ ರೇಷನ್ ಕಾರ್ಡಗಳಿರುವ ಮಾಹಿತಿ ದಾಖಲಾಗುತ್ತಿಲ್ಲ. ಆಧಾರ ಸಂಖ್ಯೆ ನಮೂದಿಸಿದರೂ ಅಪ್ ಲೋಡ್ ಆಗುತ್ತಿಲ್ಲ. ಕೂಡಲೇ ತಾಂತ್ರಿಕ ಸಮಸ್ಯೆ ನಿವಾರಿಸಬೇಕೆಂದರು.
ಈ ಸಂದರ್ಬದಲ್ಲಿ ರಾಜು ಸಂಗಟಿ, ಮಣಿಕಂಠ, ರಾಮು ಆರೋಲಿ, ಚಂದ್ರು, ಉರುಕುಂದಪ್ಪ, ಪ್ರವೀಣ್ ಇದ್ದರು.