ಬೆಂಗಳೂರು ನಗರದ ಹೊರವಲಯದಲ್ಲಿರುವ ಅನಿಲ ಕಂಪನಿ ಗೋಡೌನ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮಂಗಳವಾರ ಬೆಳಿಗ್ಗೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯ ಬಗ್ಗೆ ಬೆಳಗಿನ ಜಾವ 3:30 ಕ್ಕೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿದೆ. ನಂತರ 11 ಟೆಂಡರ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಅಗ್ನಿ ಅವಘಡ: ₹5 ಕೋಟಿ ಮೌಲ್ಯದ ಬಟ್ಟೆ, 40 ಬೈಕ್ ಭಸ್ಮ
ಅಗ್ನಿ ನಂದಿಸುವ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಮತ್ತು ಇಲ್ಲಿಯವರೆಗೆ ಯಾವುದೇ ಸಾವುನೋವುಗಳ ವರದಿಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನೆಲಮಂಗಲ ಆರ್‌ಟಿಒ ಬಳಿಯ ಅಡ್ಕಮಾರನಹಳ್ಳಿಯಲ್ಲಿರುವ ಗೋಡೌನ್ ಮತ್ತು ಸುತ್ತಮುತ್ತ ಭಾರಿ ಹೊಗೆ ಆವರಿಸಿಕೊಂಡಿದೆ. ಸದ್ಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. “ಶೇಖರಣಾ ಗೋಡೌನ್‌ನಲ್ಲಿ ತೈಲ ಮತ್ತು ಇತರ ವಸ್ತುಗಳಿವೆ. ಕಾರಣ ಇನ್ನೂ ತಿಳಿದುಬಂದಿಲ್ಲ” ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಡಿಎಚ್ ವರದಿ ಮಾಡಿದೆ.
