ಬೀದರ್‌ | ಮುಂಗಾರು ಬೆಳೆಗೆ ಜಿಂಕೆ‌ಗಳ ಹಾವಳಿ; ರೈತರು ಹೈರಾಣು

Date:

Advertisements

ಮೊಳಕೆಯೊಡೆದ ಮುಂಗಾರು ಬೆಳೆ ತಿನ್ನಲು ನುಗ್ಗುವ ನೂರಾರು ಸಂಖ್ಯೆಯ ಜಿಂಕೆಗಳ‌ ಕಾಟಕ್ಕೆ ಬೀದರ್ ಜಿಲ್ಲೆಯ ರೈತರು ಬೇಸತ್ತಿದ್ದಾರೆ.

“ಬೀದರ್ ಜಿಂಕೆಗಳ ತಾಣವಾಗಿದೆ. ಆದರೆ, ರೈತರು ಬೆಳೆದ ಬೆಳೆಯೇ ಆಹಾರವಾಗಿ ಮಾಡಿಕೊಂಡ ಜಿಂಕೆ ಹಾಗೂ ಕೃಷ್ಣಮೃಗಗಳ ಹಿಂಡು ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಸರ್ವನಾಶ ಮಾಡುತ್ತಿವೆ” ಎಂದು ರೈತರು ಆರೋಪಿಸಿದರು.

ಎರಡು ದಿನಗಳ ಹಿಂದೆ ಔರಾದ ತಾಲೂಕಿನ ಚಟ್ನಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗಗಳು ಓಡಾಡುತ್ತಿರುವ ದೃಶ್ಯಗಳನ್ನು ಅರಣ್ಯಾಧಿಕಾರಿಗಳು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Advertisements

ಜಿಂಕೆಗಳಿಗೆ ರೈತರ ಬೆಳೆಯೇ ಆಹಾರ

ಔರಾದ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಅರಣ್ಯ ಪ್ರದೇಶದಲ್ಲಿ ಸಾವಿರಾರು ಕೃಷ್ಣಮೃಗಗಳು ವಾಸಿಸುತ್ತಿವೆ. ತಮ್ಮ ಹಸಿವು ನೀಗಿಸಿಕೊಳ್ಳುವ ತವಕದಲಿದ್ದ ಕಾಡುಪ್ರಾಣಿಗಳು ಕಾಡಿನಲ್ಲಿ ಅಗತ್ಯವಾದ ಆಹಾರ ಸಿಗದ ಕಾರಣ ವಾಸ್ತವ್ಯ ತೊರೆದು ರೈತರ ಹೊಲಗಳಿಗೆ ನುಗ್ಗುತ್ತಿವೆ.

“ಮುಂಗಾರು ಬೆಳೆಗಳಾದ ಸೋಯಾಬೀನ್,‌ ಉದ್ದು, ತೊಗರಿ ಸೇರಿದಂತೆ ಇತರೆ ಬೆಳೆಗಳು ಜಿಂಕೆಗಳಿಗೆ ಪ್ರಿಯವಾದ ಆಹಾರ ಎನ್ನುವಂತಿದೆ.‌ ನೂರಾರು ಸಂಖ್ಯೆಯ ಹಿಂಡು ಒಮ್ಮೆ ಹೊಲಗಳಿಗೆ ನುಗ್ಗಿದ್ದರೆ ಸಾಕು ಇಡೀ ಹೊಲದ ಬೆಳೆಯನ್ನು ಮಣ್ಣುಪಾಲು ಮಾಡುತ್ತಿವೆ. ಬೆಳೆ ರಕ್ಷಿಸಿಕೊಳ್ಳಲು ರೈತರು ರಾತ್ರಿ ವೇಳೆ ಹೊಲದಲ್ಲೇ ವಾಸ್ತವ್ಯ ಹೂಡಿದರೂ ಕದ್ದುಮುಚ್ಚಿ ಬಂದು ನಾಶಪಡಿಸುತ್ತಿವೆ” ಎಂದು ರೈತರು ಅವಲತ್ತುಕೊಂಡಿದ್ದಾರೆ.

ಜಿಂಕೆ 01

ಸೋಲಾರ್ ತಂತಿ ಬೇಲಿ ಮೊರೆ ಹೋದ ರೈತರು

ಒಂದು ಕಡೆ ಮಳೆಯ ಅಭಾವ, ಇನ್ನೊಂದು ಕಡೆ ಜಿಂಕೆಗಳ ಕಾಟದಿಂದ ರೈತರು ಹೈರಾಣಾಗಿದ್ದಾರೆ. ಹಿಂಡು ಹಿಂಡಾಗಿ ಹೊಲಗಳಿಗೆ ನುಗ್ಗುವ ಜಿಂಕೆಗಳು ಎಕರೆಗಟ್ಟಲೆ ಬೆಳೆಯನ್ನು ತಿನ್ನುತ್ತಿವೆ. ಸಾಲ ಸೋಲ ಮಾಡಿ ಬೆಳೆದ ಬೆಳೆಯ ರಕ್ಷಣೆಗೆ ರೈತರೇ ಹಗಲು ರಾತ್ರಿ ಕಾವಲು ಕಾಯುವಂತಾಗಿದೆ.

ಎರಡ್ಮೂರು ವರ್ಷಗಳ ಹಿಂದೆ ಬೆಳೆ ರಕ್ಷಣೆಗೆ ಹೊಲದ ಸುತ್ತಲೂ ಸೀರೆ ಕಟ್ಟುವ ಉಪಾಯ ಮಾಡಿದರು.‌‌ ಆದರೆ ಅದರಿಂದಲೂ ರಕ್ಷಣೆಯಾಗದ ಹಿನ್ನೆಲೆಯಲ್ಲಿ ಇದೀಗ ಸೋಲಾರ್ ಬಳಕೆಗೆ ಮುಂದಾಗಿದ್ದಾರೆ.

ಜಿಂಕೆಗಳ ಕಾಟದ ಕುರಿತು ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಕಾರಣ ರೈತರು ಹೊಲದ ಸುತ್ತ ಕಬ್ಬಿಣದ ತಂತಿ ಬೇಲಿ ಹಾಕಿ ಸೋಲಾರ್ ಅಳವಡಿಸುವ ಮೂಲಕ ಬೆಳೆ ರಕ್ಷಿಸಿಕೊಳ್ಳಲು ಹೊಸ ಉಪಾಯ ಕಂಡುಕೊಂಡಿದ್ದಾರೆ.

ಜಿಂಕೆ

ಕೃಷ್ಣಮೃಗಗಳ ಸಂರಕ್ಷಣಾ ಮೀಸಲು ಪ್ರದೇಶ ಸಂರಕ್ಷಣೆಗೆ 2 ಕೋಟಿ ರೂ. ಅನುದಾನ

ಜಿಲ್ಲೆಯಲ್ಲಿ ಕೃಷ್ಣಮೃಗಗಳು ಹೆಚ್ಚಾಗಿ ಕಂಡು ಬರುವುದರಿಂದ ಕೃಷ್ಣಮೃಗಗಳ ಸಂರಕ್ಷಣಾ ಮೀಸಲು ಪ್ರದೇಶ ಘೋಷಣೆ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉಡುಪಿ | ಶಾಸಕರಿಗೆ ತರಬೇತಿ ಕೊಟ್ಟಂತೆ ಪತ್ರಕರ್ತರಿಗೂ ತರಬೇತಿ ಅಗತ್ಯ: ಯು ಟಿ ಖಾದರ್‌

ಈ ಸಂರಕ್ಷಣಾ ಮೀಸಲು ಪ್ರದೇಶ ರಕ್ಷಣೆ ಮತ್ತು ನಿರ್ವಹಣೆಗೆ 2 ಕೋಟಿ ರೂ. ಅನುದಾನ ಕೂಡ ಘೋಷಿಸಿದ್ದಾರೆ. ಬೀದರ್ ಉಸ್ತುವಾರಿ ಸಚಿವ, ಅರಣ್ಯ ಪರಿಸರ ಹಾಗೂ ಜೈವಿಕ ಖಾತೆ ಸಚಿವ ಈಶ್ವರ ಖಂಡ್ರೆಯವರು ಜಿಲ್ಲೆಯವರೇ ಆಗಿರುವ ಕಾರಣ  ಹೆಚ್ಚಿನ ಆದ್ಯತೆ ಕೊಟ್ಟು ಜಿಂಕೆಗಳ ಸಂರಕ್ಷಣೆಗೆ ಮುಂದಾದರೆ ಜಿಲ್ಲೆಯ ರೈತರು ನಿಟ್ಟುಸಿರು ಬಿಡುವಂತಾಗುತ್ತದೆ ಎಂದು ರೈತರು‌‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಕೃಷ್ಣಮೃಗಗಳ ಸಂರಕ್ಷಣಾ ಮೀಸಲು ಪ್ರದೇಶ ಗುರುತಿಸಿ ಜಿಲ್ಲೆಯ ಹಲವೆಡೆ ವಾಸವಾಗಿರುವ ಜಿಂಕೆಗಳನ್ನು ಸಂರಕ್ಷಿಸಲು ‘ಜಿಂಕೆ ವನ’ ನಿರ್ಮಾಣದ ಅಗತ್ಯವಿದೆ” ಎಂದು ವನ್ಯಜೀವಿ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X