ಕೊಪ್ಪಳ | ಯುದ್ಧ ತ್ಯಜಿಸಿದ ಬುದ್ಧ ಅಹಿಂಸಾ ತತ್ವಕ್ಕೆ ಶರಣಾದ: ಎಚ್ ಎಸ್ ಪಾಟೀಲ್

Date:

Advertisements

ರೋಹಿಣಿ ನದಿಯ ನೀರಿಗಾಗಿ ನಡೆಯುತ್ತಿದ್ದ ಯುದ್ಧ ಹಾಗೂ ಅದರಿಂದ ಆಗುತ್ತಿದ್ದ ರಕ್ತಪಾತದ ಘೋರತೆಗೆ ಬೇಸತ್ತು ಶಾಂತಿಗಾಗಿ ಬುದ್ಧ ವೈರಾಗ್ಯದ ಕಡೆಗೆ ಮುಖ ಮಾಡಿದ ಎಂದು ಹಿರಿಯ ಹೋರಾಟಗಾರ ಎಚ್ ಎಸ್ ಪಾಟೀಲ್ ಹೇಳಿದರು.

ಕೊಪ್ಪಳ ವಿಶ್ವವಿದ್ಯಾಲಯ ಹಾಗೂ ಜ್ಞಾನಬಂಧು ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಬುದ್ಧ ಪೂರ್ಣಿಮದ ಅಂಗವಾಗಿ ಹಮ್ಮಿಕೊಂಡಿದ್ದ ʼಕಾವ್ಯ ಪೂರ್ಣಿಮಾ-2025ʼ ಕಾವ್ಯಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಬುದ್ದ ಪೂರ್ಣಿಮೆಯನ್ನು ಕೊಪ್ಪಳದಲ್ಲಿ ಆಚರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ. ಕಳೆದ ಒಂದೂವರೆ ವರ್ಷದಿಂದ ನಾನೂ ಕೂಡ ಬುದ್ಧನ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ನೂರಾರು ವರ್ಷಗಳಿಂದ ಬುದ್ಧನ ಸಮಾನತೆ ಸಹಜೀವನದ ತತ್ವಗಳನ್ನು ಕಲಿತಿದ್ದೇವೆ. ಕೊಪ್ಪಳದ ಪಾಲ್ಕಿಗುಂಡ ಶಾಸನ ಹಾಗೂ ಗವಿ ಮಠದ ಶಾಸನಗಳಲ್ಲಿ ಅಶೋಕ ಇತ್ಯರ್ಥಪಡಿಸಿದ್ದಾನೆ. ಮಸ್ಕಿಯ ಶಾಸನದಲ್ಲಿ ಅಶೋಕ ಬೇರೆ ಪ್ರಿಯದರ್ಶಿನಿ ಬೇರೆ ಎಂದು ಉಲ್ಲೇಖಿಸುತ್ತಾನೆ. ಬುದ್ಧ ವೈರಾಗ್ಯ ಜೀವನ ಸ್ವೀಕರಿಸಲು ಕಾರಣ ರೋಹಿಣಿ ನದಿಯ ನೀರಿನ ಹಂಚಿಕೆಯ ಕುರಿತು ಯುದ್ದ ಸಂಭವಿಸುವ ಪ್ರಸಂಗ ಬಂದಾಗ ಯುದ್ಧ ತ್ಯಜಿಸಿ ರಕ್ತಪಾತ ಬೇಡ ಎಂದು ರಾಜ್ಯ ತೊರೆದು ಸನ್ಯಾಸ ಸ್ವೀಕರಿಸುತ್ತಾನೆ. ‘ಬೌದ್ಧರನ್ನ ಕಡಿದು ತಂದವರಿಗೆ ಬಂಗಾರದ ನಾಣ್ಯ ಕೊಡುತ್ತೇವೆʼ ಎಂದು ಆಮಿಷವೊಡ್ಡಿದ್ದರಿಂದ ಬೌದ್ಧರು ಭಾರತ ಬಿಟ್ಟು ಹೋದರು‌. ಆದರೆ, ಜಗತ್ತು ಸ್ವೀಕರಿಸಿತು” ಎಂದರು.

Advertisements

ವಿವಿ ಕುಲಪತಿ ಬಿ ಕೆ ರವಿ ಮಾತನಾಡಿ, “ಕೊಪ್ಪಳದಲ್ಲಿ ಪ್ರಗತಿಪರರು ಹಾಗೂ ಕವಿ ಮನಸುಗಳು ಹೆಚ್ಚಾಗಿದ್ದಾರೆ. ಅವರ ಸಹಕಾರ, ಉತ್ಸಾಹ ಪ್ರೇರಣೆಯಿಂದ ಬುದ್ಧ ಪೂರ್ಣಿಮಾ ದಿನದಂದ‌ ಕಾವ್ಯ ಪೂರ್ಣಿಮಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಯಿತು. ಬುದ್ದನನ್ನು ಇವತ್ತಿನ ಯುವ ಪೀಳಿಗೆ ಓದಲಿಲ್ಲ. ಜಗತ್ತಿನ ಹಲವು ರಾಷ್ಟ್ರಗಳು ಬುದ್ಧನ ಚಿಂತನೆಯನ್ನು ಅಪ್ಪುಕೊಂಡವು. ಭಾರತ ಬುದ್ಧನನ್ನು ಒಪ್ಪಿ, ಅಪ್ಪಿಕೊಂಡಿದ್ದರೆ, ಭಾರತ ಇಂದು ಮೌಢ್ಯ, ಅಂಧಕಾರ ಹಾಗೂ ಅಸಮಾನತೆಯಿಂದ ದೂರ ಇದ್ದು ಅಭಿವೃದ್ಧಿಯ ಪಥದಲ್ಲಿರುತ್ತಿತ್ತು” ಎಂದರು.

ಇದನ್ನೂ ಓದಿ: ಕೊಪ್ಪಳ | ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಇಬ್ಬರ ಬಂಧನ

ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಡಿ ಎಮ್ ಬಡಿಗೇರ, ಪಾರ್ವತಿ ಕನಕಗಿರಿ, ಪ್ರವಿಣ ಪಾಟೀಲ್, ಸಂತೋಷ, ಸಾವಿತ್ರಿ ಮುಜುಮದಾರ್, ರವುಕಾಂತ್, ಸಿರಾಜ್ ಬೀಸರಳ್ಳಿ, ಮಾಲತಿ ಬಡಿಗೇರ, ಈಸ್ವರ ಹತ್ತಿ, ಮಹೇಶ ಬಳ್ಳಾರಿ, ಕೆ ಬಿ ಗೋನಾಳ ಮೂವತ್ತು ಕವಿಗಳು ಹಾಗೂ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X