ಸಂವಿಧಾನ ‘ಭೀಮಸ್ಮೃತಿ’ ಎನ್ನುವ ಸಿಜೆಐ- ತಳಸ್ತರದ ಅಸಹಾಯಕರ ನ್ಯಾಯ ಪ್ರತಿಪಾದಕ

Date:

Advertisements

ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ (ಬಿ ಆರ್‌ ಗವಾಯಿ) ಅವರು ಮೇ 14ರಂದು ದೇಶದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮೇ 13ರಂದು ಸಂಜೀವ್ ಖನ್ನಾ ಅವರು ನಿವೃತ್ತಿ ಹೊಂದಿದ್ದಾರೆ. ಬಳಿಕ ಗವಾಯಿ ಸಿಜೆಐ ಆಗಲಿದ್ದಾರೆ. ಅವರ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಎಂದೇ ಪರಿಗಣಿಸಬಹುದು. ನಿವೃತ್ತ ಸಿಜೆಐ ಕೆ ಜಿ ಬಾಲಕೃಷ್ಣನ್ ನಂತರ ಸುಪ್ರೀಂ ಕೋರ್ಟ್‌ನ ಉನ್ನತ ಸ್ಥಾನವನ್ನು ತಲುಪಿದ ಪರಿಶಿಷ್ಟ ಜಾತಿ ಸಮುದಾಯದ ಎರಡನೇ ವ್ಯಕ್ತಿ ನ್ಯಾಯಮೂರ್ತಿ ಗವಾಯಿ.

ಅಗಾಧ ಗ್ರಹಿಕೆಯ ಸಾಮರ್ಥ್ಯಕ್ಕೆ ಹೆಸರಾದವರು ಗವಾಯಿ. ವಿಚಾರಣೆ ವೇಳೆ ಅತೀವ ತಾಳ್ಮೆಯಿಂದ ವಾದವನ್ನು ಆಲಿಸುವ, ಆದರೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಎಂದಿಗೂ ಹಿಂಜರಿಯದ ನ್ಯಾಯಮೂರ್ತಿ. ಹಾಸ್ಯ-ವಿಡಂಬನೆಯ ಪ್ರಜ್ಞೆ ಹೊಂದಿದವರು. ಗವಾಯಿ ಭೋಜನಪ್ರಿಯರೂ ಹೌದು. ಮರಾಠಿ ಖಾದ್ಯಗಳ ರುಚಿ ಸವಿಯಲು ಸುಪ್ರೀಮ್ ಕೋರ್ಟಿಗೆ ಸಮೀಪದಲ್ಲೇ ಇರುವ ಮಹಾರಾಷ್ಟ್ರಸದನಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ.

ಇದನ್ನು ಓದಿದ್ದೀರಾ? ಮುಂದಿನ ನೂತನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಗವಾಯಿ: ಸಿಜೆಐ ಖನ್ನಾ ಶಿಫಾರಸ್ಸು

Advertisements

ನ್ಯಾಯಮೂರ್ತಿ ಗವಾಯಿ ಅವರು ಹಲವು ರಾಜ್ಯಗಳ ರಾಜ್ಯಪಾಲರಾಗಿದ್ದ ಪ್ರಸಿದ್ಧ ರಾಜಕಾರಣಿ ಆರ್ ಎಸ್ ಗವಾಯಿ ಅವರ ಪುತ್ರ. ಬಿ ಆರ್ ಅಂಬೇಡ್ಕರ್ ಅವರ ಆದರ್ಶಗಳನ್ನು ಆಳಕ್ಕೆ ಅಳವಡಿಸಿಕೊಂಡ ಕುಟುಂಬಕ್ಕೆ ಸೇರಿದವರು. ಅವರ ತಂದೆ ಅಂಬೇಡ್ಕರ್‌ವಾದಿ ಮತ್ತು ಮಾಜಿ ಸಂಸತ್ ಸದಸ್ಯರು. ನ್ಯಾಯಮೂರ್ತಿ ಗವಾಯಿ ಅವರ ಬಾಲ್ಯದ ಬಹುಪಾಲು ಅಮರಾವತಿಯ ಫ್ರೆಝರ್‌ಪುರದ ಸ್ಲಮ್‌ನಲ್ಲಿ ಕಳೆಯಿತು.

1960ರ ನವೆಂಬರ್ 24ರಂದು ಅಮರಾವತಿಯಲ್ಲಿ ಜನಿಸಿದ ನ್ಯಾಯಮೂರ್ತಿ ಗವಾಯಿ, ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಬಿಎ ಎಲ್‌ಎಲ್‌ಬಿ ಪದವಿಯನ್ನು ಪೂರ್ಣಗೊಳಿಸಿದರು. ಅದಾದ ನಂತರ 1985ರ ಮಾರ್ಚ್ 16ರಂದು ವೃತ್ತಿ ಜೀವನ ಆರಂಭಿಸಿದರು. ಮಹಾರಾಷ್ಟ್ರದ ಮಾಜಿ ಅಡ್ವೊಕೇಟ್ ಜನರಲ್ ಮತ್ತು ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ದಿವಂಗತ ರಾಜಾ ಎಸ್ ಭೋಂಸ್ಲೆ ಅವರೊಂದಿಗೆ 1987ರವರೆಗೆ ಕಾರ್ಯನಿರ್ವಹಿಸಿ ತಮ್ಮ ಕಾನೂನು ವೃತ್ತಿಜೀವನಕ್ಕೆ ಅಡಿಪಾಯ ಹಾಕಿಕೊಂಡರು.

ಅದಾದ ಬಳಿಕ 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರ ವಕೀಲಿ ವೃತ್ತಿ ನಡೆಸಿದರು. 1990ರ ನಂತರ ಅವರು ಮುಖ್ಯವಾಗಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ನ್ಯಾಯಪೀಠದಲ್ಲಿ ಅಭ್ಯಾಸ ಮಾಡಿದರು. 2023ರ ನವೆಂಬರ್ 14ರಂದು ನ್ಯಾಯಮೂರ್ತಿ ಗವಾಯಿ ಅವರನ್ನು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ನೇಮಿಸಲಾಯಿತು. 2005ರ ನವೆಂಬರ್ 12ರಂದು ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾದರು.

ಇದನ್ನು ಓದಿದ್ದೀರಾ? ಜಾತಿ ಉಪ-ವರ್ಗೀಕರಣದ ಕುರಿತ ಸುಪ್ರೀಂ ತೀರ್ಪು – ಸಾಮಾಜಿಕ ವ್ಯವಸ್ಥೆಯಲ್ಲಿ ಹೆಗ್ಗುರುತು

ಹೈಕೋರ್ಟ್ ನ್ಯಾಯಮೂರ್ತಿಯಾಗಿ ಗವಾಯಿ ಅವರು ನಾಗ್ಪುರ, ಔರಂಗಾಬಾದ್ ಮತ್ತು ಪಣಜಿಯ ನ್ಯಾಯಪೀಠಗಳ ನೇತೃತ್ವ ವಹಿಸಿದ್ದರು. 2019ರ ಮೇ 24ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. 2025ರ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ಅವರ ಅಧಿಕಾರಾವಧಿ ಕೇವಲ ಆರು ತಿಂಗಳು.

ಜಸ್ಟೀಸ್ ಗವಾಯಿ ಅವರು ನೋಟು ರದ್ದತಿ, ಸಂವಿಧಾನದ 370ನೆಯ ಅನುಚ್ಛೇದ ರದ್ದು ಮೇಲ್ಮನವಿ, ಚುನಾವಣಾ ಬಾಂಡ್ ಯೋಜನೆ ಮತ್ತು ಎಸ್‌ಸಿ/ಎಸ್‌ಟಿಯಲ್ಲಿ ಉಪವರ್ಗೀಕರಣ ಸೇರಿದಂತೆ ಸುಪ್ರೀಮ್ ಕೋರ್ಟು ನೀಡಿರುವ ಹಲವು ತೀರ್ಪುಗಳ ಭಾಗವಾಗಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಗವಾಯಿ ಅವರನ್ನು ಜಂಭವಿಲ್ಲದ, ನಿರಾಡಂಬರ ಪ್ರಾಮಾಣಿಕರು ಎಂದು ಕರೆದಿದ್ದಾರೆ.

ಸಂವಿಧಾನವೆಂಬ ಭೀಮಸ್ಮೃತಿ

ಸಿಜೆಐ ಆಗಿ ನೇಮಕಗೊಳ್ಳುವ ನ್ಯಾಯಮೂರ್ತಿ ಗವಾಯಿ ಅವರು ತಮ್ಮ ಅಂಬೇಡ್ಕರ್ ಅನುಯಾಯಿ ಕುಟುಂಬದ ಚರಿತ್ರೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಬಣ್ಣಿಸಲಾಗಿದೆ. ಗವಾಯಿ ಅವರ ತಂದೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಟ್ಟಾ ಅನುಯಾಯಿ. ಗವಾಯಿ ಸಂವಿಧಾನವನ್ನು ಭೀಮಸ್ಮೃತಿ ಎಂದು ಕರೆಯುತ್ತಾರೆ. ‘ಅಂಬೇಡ್ಕರ್‌ ಕನಸುಗಳಿಗೆ ರೆಕ್ಕೆ ನೀಡುವ ಮಾರ್ಗ ಸಂವಿಧಾನ’ ಎಂಬ ತನ್ನ ತಂದೆಯ ಮಾತು ಗವಾಯಿ ಅವರಿಗೆ ದಾರಿದೀಪ.

ಗವಾಯಿ ಅವರ ವೃತ್ತಿಬದ್ಧತೆಗೆ 2023ರ ಜುಲೈನ ವಾರಾಂತ್ಯದ ರಜಾ ದಿನವಾಗಿದ್ದ ಶನಿವಾರ ರಾತ್ರಿ ನಡೆದ ಘಟನೆಯೇ ಸಾಕ್ಷಿ. ಶನಿವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಿಂದ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಧಾವಿಸಿ ಮಧ್ಯಂತರ ಆದೇಶ ನೀಡಿದ್ದರು. ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಬಂಧನಕ್ಕೆ ತಡೆ ನೀಡಿದ್ದರು.

ನ್ಯಾಯಾಂಗದ ಮೇಲಿನ ನಂಬಿಕೆಯು ನಮ್ಮ ಪ್ರಜಾಪ್ರಭುತ್ವದ ನಿಜವಾದ ಅಡಿಪಾಯ. ಎಲ್ಲರಿಗೂ, ಮುಖ್ಯವಾಗಿ ಪಿರಮಿಡ್‌ನ ತಳಸ್ತರದ ಅಸಹಾಯಕ ಅರ್ಜಿದಾರರಿಗೆ ನ್ಯಾಯ ಲಭಿಸುವಂತೆ ಮಾಡಬೇಕು ಎಂಬುದು ನ್ಯಾಯಮೂರ್ತಿ ಗವಾಯಿ ಆಗಾಗ್ಗೆ ಒತ್ತಿ ಹೇಳುತ್ತ ಬಂದಿರುವ ಮಾತು. ಮಣಿಪುರ ಹಿಂಸಾಚಾರದ ವೇಳೆ ಅಲ್ಲಿದ್ದ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದ ನ್ಯಾಯಾಧೀಶರ ನಿಯೋಗದ ನೇತೃತ್ವ ವಹಿಸಿದ್ದರು. ದೇಶದ ಪ್ರಧಾನಿಯೇ ಮಣಿಪುರಕ್ಕೆ ಭೇಟಿ ನೀಡದಿರುವಾಗ ಗವಾಯಿ ತಂಡ ಭೇಟಿ ನೀಡಿರುವುದನ್ನು ಪ್ರಶಂಸಿಸಲಾಗಿತ್ತು.

ಸಂವಿಧಾನವನ್ನು ತಿರುಚುವ, ಬದಲಾಯಿಸುವ ಭಾಷಣಗಳನ್ನು ರಾಜಕಾರಣಿಗಳು ಮಾಡುತ್ತಿರುವ ಸಂದರ್ಭದಲ್ಲಿ ಅಂಬೇಡ್ಕರ್‌ವಾದ ಕುಟುಂಬ ಹಿನ್ನೆಲೆಯವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿರುವುದು ನ್ಯಾಯಪರ ನಿಲ್ಲುವವರಲ್ಲಿ ಆಶಾಭಾವನೆ ಮೂಡಿಸಿದೆ. ಸಂವಿಧಾನದ ಪುಟವನ್ನು ಮನುವಾದಕ್ಕೆ ಮಗಚುವ ಬಿಜೆಪಿ ಸರ್ಕಾರದ ಪ್ರಯತ್ನಕ್ಕೆ ತಡೆಯಾಗಬಹುದು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X