ಸಿಂಧನೂರು ತಾಲ್ಲೂಕಿನ ಹಲವಡೆ ಮಂಗಳವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದ ಭತ್ತದ ರಾಶಿಗೆ ನೀರು ನುಗ್ಗಿ ಸುಮಾರು 10 ಲಕ್ಷ್ಯ ರೂವರೆಗೂ ಹಾನಿಯಾಗಿದೆ.
ತಾಲ್ಲೂಕಿನ ಸುಲ್ತಾನಪುರದ ಗ್ರಾಮದ ಹೊರವಲಯದಲ್ಲಿ ಕಟವಾಗಿರುವ ಸುಮಾರು 700 ಕ್ಕೂ ಹೆಚ್ಚು ಕ್ವಿಂಟಾಲ್ ಭತ್ತದ ರಾಶಿಗೆ ನೀರು ನುಗ್ಗಿದ್ದು, ಸಂಪೂರ್ಣ ಹಾಳಾಗಿದೆ.ಅಂದಾಜು 10 ಲಕ್ಷ ರೂ. ಮೌಲ್ಯದ ಹಾನಿ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಸುಲ್ತಾನಪುರದ ನಿವಾಸಿ ಹಾನಿಗೊಳಗಾದ ರೈತ ಲಕ್ಷ್ಮಣ ಮಾತನಾಡಿ,ಭತ್ತ ಕಟಾವು ಮಾಡಿ ಜಮೀನೊಂದರಲ್ಲಿ ರಾಶಿ ಹಾಕಲಾಗಿತ್ತು. ಇಂದು ಸಂಜೆ ಸುರಿದ ಧಾರಾಕಾರ ಮಳೆಗೆ ರಾಶಿಗೆ ನೀರು ನುಗ್ಗಿ ಸಂಪೂರ್ಣ ಹಾಳಾಗಿದೆ.ಸುತ್ತಮುತ್ತ ಜನರು ರಾಶಿ ಮಾಡಿದ್ದ ಭತ್ತ ಮಳೆಯಿಂದಾಗಿ ಕಣದ ಸುತ್ತಮುತ್ತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾದ ಕಾರಣ ಭತ್ತ ರಕ್ಷಿಸಲು ಆಗಲಿಲ್ಲ ಇದರಿಂದ ಸುಮಾರು 10 ಲಕ್ಷ್ಯ ರೂಪಾಯಿವರೆಗೂ ಅಪಾರ ಹಾನಿಯಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನರೇಗಾ ಕೂಲಿ ಕೆಲಸದ ವೇಳೆ ತೀವ್ರ ಬಿಸಿಲಿಗೆ ಕುಸಿದು ಬಿದ್ದು ಮಹಿಳೆ ಸಾವು
ಜಮೀನುಗಳಲ್ಲಿ ರೈತ ಹನುಮಂತ 250 ಭತ್ತದ ಚೀಲ , ಲಕ್ಷ್ಮಣ ತಿಪ್ಪಣ್ಣ 250 ಭತ್ತದ ಚೀಲ ಹಾಗೂ ನಾಗೇಶ್ 150 ಸೇರಿ ಇನ್ನಿತರ ಸುತ್ತಮುತ್ತ ಜನರ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಚಿಂತೆಗಿಡಾಗಿದ್ದೇವೆ ಎಂದರು.
ರೈತರಿಗೆ ಕೆಲ ಕಡೆ ಸೂಕ್ತ ದಾಸ್ತಾನು ಸಂಗ್ರಹ ಗೋದಾಮು ಇಲ್ಲದ ಕಾರಣ ತಮ್ಮ ಹೊಲ ಅಥವಾ ಬಯಲು ಪ್ರದೇಶದಲ್ಲಿ ಕಟಾವು ಮಾಡಿದ ಭತ್ತ ರಾಶಿ ಮಾಡಿದ್ದರು.ಅಕಾಲಿಕ ಮಳೆಗೆ ಕಟವಾಗಿದ್ದ ಭತ್ತದ ರಾಶಿ ಹಾಗೂ ಬೆಳೆ ಸಂಪೂರ್ಣ ಹಾಳಾಗಿದೆ.ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.
