ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆಯ ಜಾತಿ ಕಾಲಂನಲ್ಲಿ ನಮ್ಮ ಜನಾಂಗದವರು ಹೊಲೆಯ ಎಂಬುದಾಗಿ ನಮೂದಿಸಬೇಕು ಎಂದು ರೇಣುಕಾ ಯಲ್ಲಮ್ಮ ಬಳಗದ ಅಭಿವರದ್ಧಿ ಸಂಘದ ಅಧ್ಯಕ್ಷ ಎಂ.ನಾಗೇಂದ್ರ ಹೇಳಿದ್ದಾರೆ.
ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಜನಾಂಗದ ಜನರು ತಮಿಳು ಮಿಶ್ರಿತ ಕನ್ನಡ ಮಾತನಾಡುತ್ತಿದ್ದಾರೆ. ನಮ್ಮ ಜನಾಂಗವನ್ನು ಆದಿ ಕನರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಕರೆಯಲಾಗುತ್ತಿದೆ. ಒಳ ಮೀಸಲಾತಿಗಾಗಿ ರಾಜ್ಯ ಸರಕಾರದಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ನಮ್ಮ ಜನಾಂಗದ ಜನರು ಜಾತಿ ಕಾಲಂನಲ್ಲಿ ಹೊಲೆಯ ಎಂದು ನಮೂದಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಿ.ರಾಮಯ್ಯ, ಪ್ರಧಾನ ಕಾರ್ಯದಶರ್ಶಿ ಎಸ್.ಜಿ.ಯಲ್ಲಪ್ಪ, ಜಂಟಿ ಕಾರ್ಯದಶರ್ಶಿ ಕೆ.ಎಂ.ಕೀತರ್ತಿನಾರಾಯಣ ಸ್ವಾಮಿ, ಸಂಘಟನಾ ಕಾರ್ಯದಶರ್ಶಿ ಕೆ.ಸುನೀಲ್ ಕುಮಾರ್, ಖಜಾಂಚಿ ಕೆ.ಗುವಪ್ಪ ಉಪಸ್ಥಿತರಿದ್ದರು.