- ಬಿಎಸ್‌ಸಿ ಪದವಿಧರನಾಗಿದ್ದ ಆರೋಪಿ, ಉದ್ಯೋಗವಿಲ್ಲದೆ ಮಸೀದಿ ಬಳಿ ಚಂದಾ ಎತ್ತುತ್ತಿದ್ದ
- ಬಸ್ ದೇವನಹಳ್ಳಿ ದಾಟುತ್ತಿದ್ದಂತೆ 112ಗೆ ಕರೆ ಮಾಡಿ ಬಾಂಬ್ ಇದೆ ಎಂದ ಆರೋಪಿ
ಮಸೀದಿಯಲ್ಲಿ ಮಲಗಲು ಜಾಗ ನೀಡಲಿಲ್ಲವೆಂಬ ಕೋಪಕ್ಕೆ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದ ನಿರುದ್ಯೋಗಿ ಬಿಎಸ್‌ಸಿ ಪದವೀಧರನನ್ನು ಬೆಂಗಳೂರಿನ ಶಿವಾಜಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸೈಯದ್ ಮಹಮ್ಮದ್ ಅನ್ವರ್(37) ಬಂಧಿತ ಆರೋಪಿ. ಆತ ಬಿಎಸ್‌ಸಿ ಪದವಿಧರನಾಗಿದ್ದಾರೆ. ಆದರೆ, ಉದ್ಯೋಗ ಸಿಕ್ಕಿರಲಿಲ್ಲ. ಹಾಗಾಗಿ, ಊರೂರು ಸುತ್ತಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದನು. ಬಂದ ಹಣದಲ್ಲೇ ಜೀವನ ಸಾಗಿಸುತ್ತಿದ್ದರು.
ಸೈಯದ್ ಜುಲೈ 4ರಂದು ಬೆಂಗಳೂರಿಗೆ ಬಂದಿದ್ದನು. ಇತನು ಬೆಂಗಳೂರಿನ ಶಿವಾಜಿನಗರದ ರಸೆಲ್ ಮಾರ್ಕೆಟ್ ಹಿಂದಿರುವ ಆಜಾಂ ಮಸೀದಿ ಬಳಿ ಮದರಸಾ ಹೆಸರಿನಲ್ಲಿ ಚಂದಾ ಕೇಳುತ್ತಿದ್ದನು. ಇನ್ನೂ ರಾತ್ರಿ ವೇಳೆ ಮಸೀದಿಯಲ್ಲಿ ಮಲಗಲು ಅನುಮತಿ ಕೇಳಿದಾಗ ಮಸೀದಿ ಸಿಬ್ಬಂದಿ ಇಲ್ಲಿ ಮಲಗಲು ಅವಕಾಶವಿಲ್ಲ ಎಂದಿದ್ದಾರೆ.
ಸೈಯದ್ ಇದರಿಂದ ಬೇಸರಗೊಂಡು ಮೆಜೆಸ್ಟಿಕ್‌ನಿಂದ ಕರ್ನೂಲ್ ಬಸ್ ಹತ್ತಿದ್ದಾನೆ. ಈ ಬಸ್ ದೇವನಹಳ್ಳಿ ದಾಟುತ್ತಿದ್ದಂತೆ 112ಗೆ ಕರೆ ಮಾಡಿ ಆಜಾಂ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಹುಸಿ ಕರೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಹಲವೆಡೆ ಭಾರೀ ಮಳೆ : ಜನಜೀವನ ಅಸ್ತವ್ಯಸ್ತ
ಬಳಿಕ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿದಾಗ ಮಸೀದಿಯಲ್ಲಿ ಬಾಂಬ್ ಇರಲಿಲ್ಲ. ಬಳಿಕ ಇದು ಹುಸಿ ಬಾಂಬ್ ಕರೆ ಎಂದು ಅರಿತ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಂಧ್ರಕ್ಕೆ ತೆರಳಿದ್ದ ಆರೋಪಿ ಸೈಯದ್ನನ್ನು ಶಿವಾಜಿನಗರ ಪೊಲೀಸರು ಕರ್ನೂಲ್ನಿಂದ ತೆಲಂಗಾಣದ ಮೆಹಬೂಬ್ ನಗರಕ್ಕೆ ತೆರಳಿದ್ದಾಗ ಬಂಧಿಸಿದ್ದಾರೆ.