ವಿರಾಟ್‌, ರೋಹಿತ್‌ ನಿವೃತ್ತಿ ನಂತರ ಗುತ್ತಿಗೆ ಮುಂದುವರೆಸುವ ಬಗ್ಗೆ ಸ್ಪಷ್ಟನೆ ನೀಡಿದ ಬಿಸಿಸಿಐ

Date:

Advertisements

ಟೆಸ್ಟ್ ಮತ್ತು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿ ಹೊಂದಿರುವ ಹೊರತಾಗಿಯೂ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಎ ಪ್ಲಸ್ ಗುತ್ತಿಗೆಗಳನ್ನು ಉಳಿಸಿಕೊಂಡಿರುವುದನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯ ಖಚಿತಪಡಿಸಿದ್ದಾರೆ.

2024-25ರ ಸಾಲಿನ ಗುತ್ತಿಗೆಗಳಲ್ಲಿ, ಅತ್ಯುನ್ನತ ಎ ಪ್ಲಸ್ ದರ್ಜೆಯಲ್ಲಿ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ, ಜಸ್‌ಪ್ರಿತ್ ಬುಮ್ರಾ ಮತ್ತು ರವೀಂದ್ರ ಜಡೇಜ ಅವರನ್ನು ಉಳಿಸಿಕೊಳ್ಳಲಾಗಿದೆ.

‘ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್‌ಗಳಿಂದ ನಿವೃತ್ತಿ ಹೊಂದಿದ ಹೊರತಾಗಿಯೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ಎ ಪ್ಲಸ್ ದರ್ಜೆಯ ಗುತ್ತಿಗೆಗಳು ಮುಂದುವರಿಯಲಿವೆ. ಅವರು ಈಗಲೂ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ. ಅವರು ಎ ಪ್ಲಸ್ ದರ್ಜೆಯ ಗುತ್ತಿಗೆಯ ಎಲ್ಲ ಸೌಲಭ್ಯಗಳನ್ನು ಪಡೆಯಲಿದ್ದಾರೆ’’ ಎಂದು ಸೈಕಿಯ ಹೇಳಿದರು.

Advertisements

ವಿರಾಟ್ ಕೊಹ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ, ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅವರು 14 ವರ್ಷಗಳ ಕ್ರೀಡಾ ಜೀವನದ ಅವಧಿಯಲ್ಲಿ 123 ಪಂದ್ಯಗಳಿಂದ 46.85ರ ಸರಾಸರಿಯಲ್ಲಿ 9,230 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧ ಶತಕಗಳಿವೆ. ಅವರ ಗರಿಷ್ಠ ಸ್ಕೋರ್ ಅಜೇಯ 254.

ಇದನ್ನು ಓದಿದ್ದೀರಾ? ಟೆಸ್ಟ್‌ ಕ್ರಿಕೆಟ್ ನಾಯಕನ ಸ್ಥಾನ ಬೇಡ ಎಂದ ವಿರಾಟ್; ಯುವ ಆಟಗಾರನಿಗೆ ಪಟ್ಟ ನೀಡಲು ಬಿಸಿಸಿಐ ಒಲವು

ರೋಹಿತ್ ಶರ್ಮಾ ಮೇ 7ರಂದು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅವರು 11 ವರ್ಷಗಳ ತನ್ನ ಕ್ರೀಡಾ ಜೀವನದ ಅವಧಿಯಲ್ಲಿ 67 ಪಂದ್ಯಗಳಿಂದ 40.57ರ ಸರಾಸರಿಯಲ್ಲಿ 4,301 ರನ್‌ಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ 12 ಶತಕಗಳು ಮತ್ತು 18 ಅರ್ಧ ಶತಕಗಳಿವೆ. ಅವರು 2019ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ತನ್ನ ಗರಿಷ್ಠ 212 ರನ್‌ಗಳನ್ನು ಬಾರಿಸಿದ್ದಾರೆ.

ಬಿಸಿಸಿಐ ಸಾಮಾನ್ಯವಾಗಿ ಕೇಂದ್ರ ಗುತ್ತಿಗೆ ಆಧಾರದಲ್ಲಿ ಒಟ್ಟು 4 ಗ್ರೇಡ್‌ಗಳನ್ನು ಮಾಡಿದೆ. ಈ ವೇಳೆ ಈ ಶ್ರೇಣಿಗಳಿಗೆ ಅನುಗಣವಾಗಿ ಆಟಗಾರರಿಗೆ ವೇತನವನ್ನು ಸಹ ನೀಡುತ್ತದೆ. ಬಿಸಿಸಿಐ ಆಟಗಾರರ ಆಟದ ಗುಣಮಟ್ಟವನ್ನು ಆಧರಿಸಿ ಅವರ ಗ್ರೇಡ್‌ ನಿರ್ಧರಿಸುತ್ತದೆ.

ಅಂದ ಹಾಗೆ ಗ್ರೇಡ್ ಎ ಪ್ಲಸ್, ಗ್ರೇಡ್ ಎ, ಗ್ರೇಡ್ ಬಿ ಮತ್ತು ಸಿ ಸೇರಿವೆ. ಗ್ರೇಡ್‌ ಎ ಪ್ಲಸ್‌ನಲ್ಲಿ ಕೇವಲ ನಾಲ್ವರು ಆಟಗಾರರು ಮಾತ್ರ ಇದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸೇರಿದ್ದಾರೆ.

ಗ್ರೇಡ್ ಎ ಪ್ಲಸ್‌ಗೆ 7 ಕೋಟಿ ಜೊತೆಗೆ ಪಂದ್ಯ ಶುಲ್ಕ, ಗ್ರೇಡ್ ಎ ಗ್ರೇಡ್‌ಗೆ 5 ಕೋಟಿ ಜೊತೆಗೆ ಪಂದ್ಯ ಶುಲ್ಕ, ಗ್ರೇಡ್ ಬಿ ಪ್ಲಸ್‌ಗೆ 3 ಕೋಟಿ ಜೊತೆಗೆ ಪಂದ್ಯ ಶುಲ್ಕ, ಗ್ರೇಡ್ ಸಿ ಪ್ಲಸ್‌ಗೆ 1 ಕೋಟಿ ಜೊತೆಗೆ ಪಂದ್ಯ ಶುಲ್ಕ ನೀಡಲಾಗುತ್ತದೆ. ಗುತ್ತಿಗೆ ಪಟ್ಟಿಯಲ್ಲಿ ಇಬ್ಬರು ಕನ್ನಡಿಗರಾದ ಕೆ ಎಲ್‌ ರಾಹುಲ್ ಹಾಗೂ ಪ್ರಸಿದ್ಧ ಕೃಷ್ಣ ಸ್ಥಾನ ಪಡೆದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X