ವಿದೇಶಿ ಮಾಧ್ಯಮಗಳು ಕಂಡಂತೆ ಭಾರತ – ಪಾಕ್‌ ಸಂಘರ್ಷ

Date:

Advertisements
ಭಾರತ - ಪಾಕ್‌ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು ಪರಿಸ್ಥಿತಿಯ ಗಂಭೀರತೆ, ಮುಂಬರುವ ಅಪಾಯಗಳು, ಮಧ್ಯಸ್ಥಿಕೆ, ಶಾಂತಿ ನಿರ್ಮಾಣ ಸೇರಿದಂತೆ ಹಲವು ರೀತಿಯಲ್ಲಿ ವರದಿ, ವಿಶ್ಲೇಷಣೆ ಮಾಡಿದ್ದವು. ಬಹುತೇಕ ಮಾಧ್ಯಮಗಳು ಶಾಂತಿ ಕಾಪಾಡಬೇಕೆಂದು ಸಂದೇಶ ಸಾರಿದವು. ಆದರೆ ಭಾರತದ ಮೀಡಿಯಾಗಳು...   

ಕಾಶ್ಮೀರದ ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್‌ ಸಿಂಧೂರದ ನಂತರ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಮಿಲಿಟರಿ ಸಂಘರ್ಷ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ನಾಲ್ಕು ದಿನ ಎರಡು ದೇಶಗಳಲ್ಲಿ ವಿವಿಧ ಕಡೆ ಹಾನಿಯ ಜೊತೆ ಅಪಾರ ಸಾವು ನೋವುಗಳು ಸಂಭವಿಸಿದವು. ಭಾರತದಲ್ಲಿ ರಕ್ಷಣಾ ಸಚಿವರು, ಸೇನಾ ಮುಖ್ಯಸ್ಥರು ಸೇರಿದಂತೆ ಪ್ರಮುಖರು ಈ ಬಗ್ಗೆ ಪ್ರಕಟಣೆ ನೀಡಿ ಕಾರ್ಯಾಚರಣೆ ಹಾಗೂ ದಾಳಿಯಲ್ಲಿ ನೂರಕ್ಕೂ ಹೆಚ್ಚು ಉಗ್ರರು ಹಾಗೂ ಹಲವು ಮಿಲಿಟರಿ ನೆಲೆಗಳನ್ನು ನಾಶ ಪಡಿಸಿರುವುದಾಗಿ ದೃಶ್ಯ ಹಾಗೂ ಸ್ಯಾಟಲೇಟ್‌ ಚಿತ್ರಗಳ ದಾಖಲೆಗಳನ್ನು ನೀಡಿದರು.

ಪಾಕ್‌ ಕೂಡ ತಾನು ಭಾರತದ ಸೈನಿಕರನ್ನು ಕೊಂದಿರುವುದಾಗಿ ಜೊತೆಗೆ ವಾಯು ನೆಲೆಗಳನ್ನು ಸ್ಫೋಟಿಸಿರುವುದಾಗಿ ಹೇಳಿತು. ಎರಡೂ ಅಣ್ವಸ್ತ್ರ ರಾಷ್ಟ್ರಗಳಾಗಿರುವ ಕಾರಣ ಭಾರಿ ಅನಾಹುತವಾಗಬಹುದೆಂದು ವಿಶ್ವದ ಹಲವು ಮಾಧ್ಯಮಗಳು ಆತಂಕ ವ್ಯಕ್ತಪಡಿಸಿದ್ದವು. ಈ ಸಂದರ್ಭದಲ್ಲಿ ಉಭಯ ದೇಶಗಳ ಕದನವನ್ನು ತಮ್ಮದೆ ರೀತಿಯಲ್ಲಿ ವರದಿ, ವ್ಯಾಖ್ಯಾನ ಮಾಡಿದ್ದವು.

ಎರಡೂ ದೇಶಗಳ ಹಾನಿಯ ಬಗ್ಗೆ ಪ್ರಸ್ತಾಪಿಸಿದ್ದ ನ್ಯೂಯಾರ್ಕ್‌ ಟೈಮ್ಸ್‌

Advertisements

ಅಮೆರಿಕದ ಪ್ರಮುಖ ಪತ್ರಿಕೆ ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಉಭಯ ದೇಶಗಳ ಮಿಲಿಟರಿ ಸಂಘರ್ಷದ ಬಗ್ಗೆ ವಿಶೇಷ ಲೇಖನ ಪ್ರಕಟಿಸಿತು. ಉಪಗ್ರಹ ತೆಗೆದ ಹೆಚ್ಚು ಗುಣಮಟ್ಟವಿರುವ ಭಾವಚಿತ್ರಗಳನ್ನು ತನ್ನ ವಿಶ್ಲೇಷಣೆಗೆ ಬಳಸಿಕೊಂಡಿತ್ತು. ಭಾರತ ನಡೆಸಿರುವ ದಾಳಿಯಲ್ಲಿ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳಿಗೆ ಹಾನಿಯಾಗಿದೆ ಎಂದು ಹೇಳಿರುವುದರ ಜೊತೆಗೆ ಭಾರತದ ಎರಡು ಯುದ್ಧವಿಮಾನಗಳು ಪತನಗೊಂಡಿರುವ ಬಗ್ಗೆ ಕೂಡ ಪ್ರಸ್ತಾಪಿಸಿತ್ತು. ಸಂಘರ್ಷಕ್ಕೆ ಎರಡೂ ರಾಷ್ಟ್ರಗಳು ಡ್ರೋನ್‌ ಮತ್ತು ಕ್ಷಿಪಣಿಗಳನ್ನು ಬಳಸಿದ್ದವು. ತಮ್ಮ ವಾಯುಪಡೆ ಸಾಮರ್ಥ್ಯವನ್ನು ಪಣಕ್ಕಿಟ್ಟು, ವಿರೋಧಿ ರಾಷ್ಟ್ರದ ವಾಯುನೆಲೆಗಳನ್ನು ಗುರಿ ಮಾಡಿ ದಾಳಿ ನಡೆಸಿದ್ದವು.

ಅತ್ಯಾಧುನಿಕ ತಾಂತ್ರಿಕತೆಯ ನೆರವಿನಿಂದ ವಾಯುನೆಲೆ ಮತ್ತು ಸೇನಾ ನೆಲೆಗಳನ್ನಷ್ಟೇ ಗುರಿಯಾಗಿಸಿ ದಾಳಿ ಮಾಡಿದ್ದವು. ವಿರೋಧಿ ರಾಷ್ಟ್ರದಲ್ಲಿ ಭಾರಿ ಹಾನಿ ಆಗಿದೆ ಎಂದೇ ಎರಡೂ ರಾಷ್ಟ್ರಗಳು ಪ್ರತಿಪಾದಿಸಿದ್ದವು. ಉಪಗ್ರಹದಿಂದ ತೆಗೆದ ಚಿತ್ರಗಳನ್ನು ಬಳಸಿ ಹಾನಿಯ ಪ್ರಮಾಣವನ್ನು ಪತ್ರಿಕೆ ಅಂದಾಜಿಸಿತ್ತು. ಹಲವು ಕಡೆ ದಾಳಿಗಳು ಸಂಭವಿಸಿದ್ದರೂ ಅಂತಹ ದೊಡ್ಡ ಹಾನಿ ಸಂಭವಿಸಿಲ್ಲ ಎಂದು ವರದಿಯಲ್ಲಿ ಹೇಳಿತ್ತು.

ಸಂಯಮ, ಮಾತುಕತೆಗೆ ಒತ್ತು ನೀಡಿದ್ದ ಅಲ್ ಜಝೀರಾ

ನಿರ್ಭೀತಿಯಿಂದ ವರದಿ ಮಾಡುವ ಮತ್ತೊಂದು ಅಂತಾರಾಷ್ಟ್ರೀಯ ಅಲ್ ಜಝೀರಾ ಉಭಯ ದೇಶಗಳಿಗೆ ಸಂಯಮ ವಹಿಸುವಂತೆ ಮತ್ತು ಶಾಂತಿ ಕಾಪಾಡಲು ಮುಂದಾಗುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿತ್ತು. ಅಲ್ ಜಝೀರಾದ ವರದಿಯು ತಟಸ್ಥ ದೃಷ್ಟಿಕೋನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ಆದರೆ ಉಭಯ ದೇಶಗಳ ಆರೋಪಗಳು ಮತ್ತು ಪ್ರತಿದಾಳಿಗಳನ್ನು ಸಮಾನವಾಗಿ ಪ್ರಸ್ತುತಪಡಿಸಿದೆ. ಜಝೀರಾ ನೀಡಿದ ವರದಿ, ವ್ಯಾಖ್ಯಾನಗಳು ಭಾರತದ ಕಾರ್ಯಾಚರಣೆಯನ್ನು ಭಯೋತ್ಪಾದನೆಯ ವಿರುದ್ಧದ ಹೋರಾಟವಾಗಿ ಚಿತ್ರಿಸಿದರೆ, ಇದರಲ್ಲಿ ಪಾಕಿಸ್ತಾನದ ದೃಷ್ಟಿಕೋನವನ್ನು ಸಹ ಒಳಗೊಂಡಿತ್ತು. ಜೊತೆಗೆ, ಅಂತಾರಾಷ್ಟ್ರೀಯ ಸಮುದಾಯದಿಂದ ಸಂಯಮದ ಕರೆಯನ್ನು ಹೇಳಬೇಕೆಂದು ಒತ್ತಿಹೇಳುವ ಮೂಲಕ ರಾಜತಾಂತ್ರಿಕ ಪರಿಹಾರಕ್ಕೆ ಒತ್ತು ನೀಡಿತು.

ಇದಲ್ಲದೆ ಅಲ್ ಜಝೀರಾದ ವರದಿಗಳು ಉಭಯ ದೇಶಗಳ ಆರೋಪಗಳು, ಸೈನಿಕ ಕಾರ್ಯಾಚರಣೆಗಳು ಮತ್ತು ಅಂತಾರಾಷ್ಟ್ರೀಯ ಒತ್ತಡಗಳ ಬಗ್ಗೆ ಕೂಡ ಹೇಳಿದೆ. ಭಾರತದ ‘ಆಪರೇಷನ್ ಸಿಂಧೂರ್’ ಮತ್ತು ಪಾಕಿಸ್ತಾನದ ಪ್ರತಿದಾಳಿಗಳನ್ನು ಒಳಗೊಂಡಂತೆ ಘಟನೆಗಳನ್ನು ಕೂಡ ದಾಖಲಿಸುತ್ತದೆ. ಒಟ್ಟಾರೆ ಈ ಮಾಧ್ಯಮದ ವರದಿಗಳು ಯಾವುದೇ ಒಂದು ದೇಶದ ಪರವಾಗಿ ಸ್ಪಷ್ಟವಾಗಿ ಒಲವು ತೋರದೆ, ಸಂಯಮ ಮತ್ತು ಮಾತುಕತೆಗೆ ಹೆಚ್ಚು ಪ್ರಾಧಾನ್ಯ ನೀಡಿತ್ತು. 

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತಿರಂಗಾ ಯಾತ್ರೆ, ಸೈನಿಕರ ನಿಂದನೆ ಮತ್ತು ದೇಶಭಕ್ತಿ

ಭವಿಷ್ಯದ ಅಪಾಯಗಳ ಬಗ್ಗೆ ಬಿಬಿಸಿ ವರದಿ

ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮ ಬಿಬಿಸಿ ಕೂಡ ಭಾರತ-ಪಾಕಿಸ್ತಾನ ಸಂಘರ್ಷವನ್ನು ಮುಖ್ಯ ಚರ್ಚಾ ವಿಷಯವನ್ನಾಗಿ ದಾಖಲಿಸಿತ್ತು. ಇದರ ಜೊತೆ ಕಾಶ್ಮೀರ ಕೇಂದ್ರಿತ ದ್ವೇಷ, ರಾಜಕೀಯ ಒತ್ತಡಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ಮಧ್ಯಸ್ಥಿಕೆಯ ಅಗತ್ಯದ ಬಗ್ಗೆ ವರದಿ ಮಾಡಿತ್ತು. ಬಿಬಿಸಿ ವಾಹಿನಿಯ ಹಲವು ವರದಿಗಳು ಭಾರತ –ಪಾಕ್‌ ಯುದ್ಧದ ನಂತರದ ಪರಿಣಾಮಗಳು ಮತ್ತು ಭವಿಷ್ಯದ ಅಪಾಯಗಳನ್ನು ವಿವರಿಸಿತು. ಕೆಲವು ವಿಮರ್ಶಕರು ಮುಂದೆ ಎದುರಾಗುವ ಅಪಾಯವನ್ನು ಮನಗಂಡು ಎರಡೂ ದೇಶದ ನಾಯಕರು ಕದನವನ್ನು ಬಿಟ್ಟು ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂದು ಹೇಳಿದರೆ, ಇನ್ನೂ ಕೆಲವರು ಭಾರತ ಹಾಗೂ ಪಾಕ್‌ ಪರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಪಹಲ್ಗಾಮ್‌ ದಾಳಿ ನಡೆದಾಗ ಅಮೆರಿಕದ ಪ್ರಮುಖ ಮಾಧ್ಯಮವಾದ ‘ನ್ಯೂಯಾರ್ಕ್‌ ಟೈಮ್ಸ್‌’ ಬಂಡುಕೋರರು ಹಾಗೂ ಬಂದೂಕುಧಾರಿಗಳ ದಾಳಿ ಎಂದು ಬಣ್ಣಿಸಿತ್ತು. ಈ ಹಿನ್ನೆಲೆಯಲ್ಲಿ ದಾಳಿಯ ಗಾಂಭೀರ್ಯತೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಅಮೆರಿಕ ಸೆನೆಟ್ ಹಾಗೂ ವಿದೇಶಾಂಗ ವ್ಯವಹಾರಗಳ ಸದನ ಸಮಿತಿ ನ್ಯೂಯಾರ್ಕ್‌ ಟೈಮ್ಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.

ಬಿಬಿಸಿ ಕೂಡ ಪಹಲ್ಗಾಮ್‌ ಉಗ್ರರ ದಾಳಿಯನ್ನು ಬಂಡುಕೋರರ ದಾಳಿ ಎಂದು ಉಲ್ಲೇಖಿಸಿ, ಕಾಶ್ಮೀರದ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನವು ಭಾರತೀಯರ ವೀಸಾಗಳನ್ನು ಅಮಾನತುಗೊಳಿಸಿದೆ ಎಂದು ವರದಿ ದಾಖಲಿಸಿತ್ತು. ಅಲ್ಲದೆ ಭಾರತ ಕೈಗೊಂಡಿರುವ ಕ್ರಮಗಳಿಗೆ ಪ್ರತಿಯಾಗಿ, ಪಾಕಿಸ್ತಾನ ಕೂಡ ಮುಯ್ಯಿಗೆ ಮುಯ್ಯಿಯಂತಹ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿ ಮಾಡಿತ್ತು. ಈ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ ಬಿಬಿಸಿಯ ಭಾರತದ ಮುಖ್ಯಸ್ಥರಾದ ಜಾಕಿ ಮಾರ್ಟಿನ್ ಅವರಿಗೆ ಪತ್ರ ಬರೆದು ಬಿಬಿಸಿಯ ಮುಂದಿನ ವರದಿಗಳ ಮೇಲೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿಗಾ ವಹಿಸಲಿದೆ ಎಂದೂ ಎಚ್ಚರಿಸಿತ್ತು.

ಯುದ್ಧದ ಅಪಾಯಗಳ ಬಗ್ಗೆ ವಿದೇಶಿ ಮಾಧ್ಯಮಗಳಿಗಿದ್ದ ಕಾಳಜಿ ಭಾರತೀಯ ಮಾಧ್ಯಮಗಳಿಗಿರಲಿಲ್ಲ. ಬಹುತೇಕ ಸುದ್ದಿ ಮಾಧ್ಯಮಗಳು ಯುದ್ಧದಾಹ, ಸುಳ್ಳು ಸುದ್ದಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಹೇಗೆ ಓಲೈಸುವುದು ಸೇರಿದಂತೆ ಮುಂತಾದವನ್ನೆ ಮಾಡಿದವು. ಯುದ್ಧದ ನಂತರ ಆಗುವ ಅನಾಹುತಗಳ ಬಗ್ಗೆ ಯಾವ ಚಾನಲ್‌ಗಳು ವಿಶೇಷ ವರದಿಯಲ್ಲ, ಸಣ್ಣ ವರದಿಯನ್ನು ಮಾಡಲಿಲ್ಲ. ನುಗ್ಗಿ ಹೊಡೆಯಿರಿ ಎಂದೆ ಸಾರುತ್ತಿದ್ದವು. ಎರಡು ಅಣ್ವಸ್ತ್ರ ರಾಷ್ಟ್ರಗಳು ತುರ್ತು ನಿರ್ಧಾರ ತೆಗೆದುಕೊಂಡರೆ ಕೋಟ್ಯಂತರ ಮಂದಿ ಪ್ರಾಣ ಕಳೆದುಕೊಳ್ಳಬೇಕಾಗುತ್ತಿತ್ತು. ಉಭಯ ದೇಶಗಳು ಇತಿಹಾಸ ಪುಟ ಸೇರುವ ಸಂಭವವಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X