ಕಾಂಕ್ರೀಟ್ ಚರಂಡಿ ಕಾಮಗಾರಿ ಕಾರ್ಯ ವಿಳಂಬ ಆಗಿರುವುದರಿಂದ ಸ್ಥಳೀಯ ಆಕ್ರೋಶ ವ್ಯಕ್ತಪಡಿಸಿರುವ ಘಟನೆ, ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾರು ಎಂಟು ವರ್ಷಗಳಿಂದ ಕೊಲ್ಲಹಳ್ಳಿ ಗ್ರಾಮದ ಸಾರ್ವಜನಿಕರು ರಸ್ತೆ ಕಾಮಗಾರಿಯಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಂಟ್ರಾಕ್ಟ್ ಗಳಿಂದ ಕೂಡಿದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕೆಲಸ ಅರ್ಧದಲ್ಲಿ ಉಳಿದರಿಂದ, ಗ್ರಾಮದ ಸರ್ಕಲ್ ನಲ್ಲಿ ಸರ್ಕಾರಿ ಶಾಲೆ, ಬಸ್ ಸ್ಟಾಪ್, ನ್ಯಾಯಬೆಲೆ ಅಂಗಡಿ, ಅರಬಿ ಸ್ಕೂಲ್ ಇನ್ನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಚರಂಡಿ ನೀರು ಹಾಗೂ ಮಳೆ ನೀರು ನಿಂತು ಕೊಳಚೆ ನಿರ್ಮಾಣವಾಗಿದೆ. ಇದರಿಂದ ಗ್ರಾಮದಲ್ಲಿ ಮಲೇರಿಯಾ ಡೆಂಗ್ಯೂ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳು ಉತ್ಪತ್ತಿಯಾಗುತ್ತಿದೆ. ಗ್ರಾಮದ ಸಾರ್ವಜನಿಕರು ದಿನನಿತ್ಯ ನಡೆದಾಡುವ ರಸ್ತೆಯ ಪಕ್ಕದಲ್ಲಿ ಆಳದ ಚರಂಡಿಯಿಂದ ಸಾವು ನೋವುಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಬಗ್ಗೆ ಗ್ರಾಮಸ್ಥರಾದ ನಾವು ಹಲವು ಬಾರಿ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಮತ್ತು ರಸ್ತೆ ಕಾಂಟ್ರಾಕ್ಟ್ ಗಳಲ್ಲಿ ಸಮಸ್ಯೆ ಕುರಿತು ಹಲವು ಬಾರಿ ತಿಳಿಸಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿದ್ದೀರಾ?ಹಾಸನ l ಜಿಲ್ಲೆಯ ಹಲವೆಡೆ ವರುಣನ ಅಬ್ಬರ: ರೈತರಲ್ಲಿ ಮಂದಹಾಸ ಮೂಡಿದೆ
ಹಾಸನ ಲೋಕಸಭಾ ಸದಸ್ಯರ ಮತ್ತು ಹಾಸನ ಜಿಲ್ಲಾಧಿಕಾರಿಗಳ ಗಮನಕ್ಕೆ ವಹಿಸಲು 19 ರಂದು ಗ್ರಾಮದ ವಿವಿಧ ಸಂಘಟನೆಗಳೊಂದಿಗೆ ಸೇರಿ ಹೆದ್ದಾರಿ ತಡೆದು, ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆಂದು ಸ್ಥಳೀಯ ತಿಳಿಸಿದರು.