ಚೀನಾದ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾದ ಕ್ಸಿ ಜಿನ್ಪಿಂಗ್

Date:

Advertisements
  • ನ್ಯಾಷನಲ್ ಪೀಪಲ್ಸ್ ಕಾಂಗ್ರೆಸಿನ 14 ನೇ ಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆ
  • 10 ವರ್ಷವಿದ್ದ ಅಧ್ಯಕ್ಷರ ಮಿತಿಯನ್ನು 2018ರಲ್ಲಿ ಬದಲಾಯಿಸಿದ್ದ ಜಿನ್ಪಿಂಗ್

ಚೀನಾದ ಅಧ್ಯಕ್ಷರಾಗಿ ಸತತ ಮೂರನೇ ಬಾರಿ ಕ್ಸಿ ಜಿನ್ಪಿಂಗ್ ಆಯ್ಕೆಯಾಗಿದ್ದಾರೆ. ಸುಮಾರು 2,977 ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಸದಸ್ಯರು ಕ್ಸಿ ಜಿನ್ಪಿಂಗ್ ಅವರನ್ನು ಅವಿರೋಧವಾಗಿ ಅನುಮೋದಿಸಿದ್ದಾರೆ.

ಚುನಾವಣೆಯಲ್ಲಿ ಕ್ಸಿಗೆ ಪ್ರತಿಸ್ಪರ್ಧಿಯಾಗಿ ಯಾವುದೇ ಅಭ್ಯರ್ಥಿ ಇರಲಿಲ್ಲ. ಚೀನಾದ ಹೊಸ ಸಂಸತ್ತಿನ ಅಧ್ಯಕ್ಷರಾಗಿ ಝಾವೊ ಲೆಜಿ ಮತ್ತು ಹೊಸ ಉಪಾಧ್ಯಕ್ಷರಾಗಿ ಹಾನ್ ಝೆಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರಿಬ್ಬರೂ ಕ್ಸಿ ಅವರ ಹಿಂದಿನ ಪಾಲಿಟ್‌ ಬ್ಯೂರೋ ಸ್ಥಾಯಿ ಸಮಿತಿಯ ಪಕ್ಷದ ನಾಯಕರ ತಂಡದಲ್ಲಿದ್ದರು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ, ಕ್ಸಿ ಜಿನ್ಪಿಂಗ್ ಅವರು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 3ನೇ ಬಾರಿ 5 ವರ್ಷಗಳ ಅವಧಿಗೆ ಮರು ಆಯ್ಕೆಯಾಗಿದ್ದು, ಈ ಮೂಲಕ ದಾಖಲೆ ಸೃಷ್ಟಿಸಿದ್ದರು. ಇದೀಗ ಕ್ಸಿ ಅವರು ಮಾವೋ ಝೆಡಾಂಗ್ ನಂತರ ದೇಶದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ.

Advertisements

ಚೀನಾದಲ್ಲಿ ಅಧ್ಯಕ್ಷರಾಗಿ ಅಧಿಕಾರದಲ್ಲಿರಲು ಎರಡು ಅವಧಿಯ ಮಿತಿ ಇತ್ತು. ಆದರೆ ತಮ್ಮ ಅಧಿಕಾರ ಬಳಸಿಕೊಂಡು ಕ್ಸಿ ಜಿನ್ಪಿಂಗ್ ಅವರು 2018ರಲ್ಲಿ ಈ ನಿಯಮವನ್ನು ರದ್ದುಗೊಳಿಸಿದ್ದರು. ಈ ಕಾನೂನಿನ ಅನ್ವಯ ಕ್ಸಿ ಜಿನ್ಪಿಂಗ್ ಅವರಿಗೆ ತಮಗೆ ಆಡಳಿತ ಸಾಕು ಎನಿಸಿ ನಿವೃತ್ತಿ ಪಡೆದುಕೊಳ್ಳುವವರೆಗೆ ಅಥವಾ ಮೃತಪಡುವವರೆಗೆ ಅಥವಾ ಪದಚ್ಯುತವಾಗುವವರೆಗೂ ಅಧಿಕಾರ ನಡೆಸಬಹುದಾಗಿದೆ.

ಈ ಸುದ್ದಿ ಓದಿದ್ದೀರಾ?ಮನೀಶ್ ಸಿಸೋಡಿಯಗೆ ಮತ್ತೆ ಶುರುವಾಯ್ತು ಸಂಕಷ್ಟ; ಸಿಬಿಐ ನಂತರ ಇಡಿಯಿಂದ ಬಂಧನ

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯು ನಿಧಾನಗತಿಯಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಕ್ಸಿ ಜಿನ್ಪಿಂಗ್ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಈ ವರ್ಷ ಚೀನಾ ತನ್ನ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 18 ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ನಿರ್ಧರಿಸಿದೆ. ಇದು ಭಾರತದ ರಕ್ಷಣಾ ಬಜೆಟಿಗಿಂತ ಸುಮಾರು 3 ಪಟ್ಟು ಹೆಚ್ಚು. 2023ರ ಚೀನಾದ ಆರ್ಥಿಕ ಬೆಳವಣಿಗೆಯ ಗುರಿಯನ್ನು ಶೇ 5 ಕ್ಕೆ ಇರಿಸಲಾಗಿದೆ.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಚೀನಾದಾದ್ಯಂತ ಸರ್ಕಾರಿ ದೂರದರ್ಶನಗಳಲ್ಲಿ ನೇರ ಪ್ರಸಾರ ಮಾಡಲಾಯಿತು. ಸಮೃದ್ಧ, ಪ್ರಬಲ, ಪ್ರಜಾಪ್ರಭುತ್ವ, ನಾಗರಿಕವಾದ, ಸೌಹಾರ್ದಯುತ ಹಾಗೂ ಮಹಾನ್ ಆಧುನಿಕ ಸಮಾಜವಾದಿ ದೇಶವನ್ನು ನಿರ್ಮಿಸುತ್ತೇನೆ ಎಂದು ಕ್ಸಿ ಜಿನ್ಪಿಂಗ್ ಶಪಥ ಮಾಡಿದ್ದಾರೆ.

bfe5ebf00de2b670976597f37a6d2b77?s=150&d=mp&r=g
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X