ಬೆಳಗಾವಿ ಜಿಲ್ಲೆಯಲ್ಲಿನ ಜೈನ ಮುನಿ ಹತ್ಯೆ ಮತ್ತು ಮೈಸೂರು ಜಿಲ್ಲೆಯಲ್ಲಿ ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಪರಿಶೀಲಿಸಲು ಬಿಜೆಪಿಯ ಎರಡು ತಂಡಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಲಿವೆ.
ಎರಡೂ ತಂಡಗಳಿಂದ ಬೆಳಗಾವಿ ಮತ್ತು ಮೈಸೂರಿಗೆ ಭೇಟಿ, ಪರಿಶೀಲನೆ ನಡೆಸಲಿವೆ. ಒಂದು ತಂಡಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವ ವಹಿಸಲಿದ್ದು, ಇನ್ನೊಂದು ತಂಡಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ನೇತೃತ್ವ ವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ದಿನಗಳಲ್ಲಿ ಹತ್ಯಾ ಪ್ರಕರಣಗಳ ಅಸಲಿಯತ್ತಿನ ಬಗ್ಗೆ ವರದಿ ಸಿದ್ದ ಮಾಡಲಿರುವ ತಂಡಗಳು, ಬಳಿಕ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಿವೆ. ಬಳಿಕ ಬಿಜೆಪಿಯು ಉನ್ನತ ಮಟ್ಟದ ತನಿಖೆ, ನಿಜವಾದ ಆರೋಪಿಗಳ ಬಂಧನ ಮತ್ತು ಕಠಿಣ ಕ್ರಮಕ್ಕೆ ಒತ್ತಾಯಿಸಲಿದೆ.

ಜೈನಮುನಿ ಹತ್ಯೆ ಸ್ಥಳಕ್ಕೆ ಭೇಟಿ ನೀಡಲಿರುವ ತಂಡ
- ನಳಿನ್ ಕುಮಾರ್ ಕಟೀಲ್, ರಾಜ್ಯಾಧ್ಯಕ್ಷ
- ಅಶ್ವತ್ಥನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ
- ಶಾಸಕ ಮಹೇಶ ಟೆಂಗಿನಕಾಯಿ
- ಶಾಸಕ ಅಭಯ ಪಾಟೀಲ್
- ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
- ಸಂಸದೆ ಮಂಗಳಾ ಸುರೇಶ್ ಅಂಗಡಿ
- ಎಂಎಲ್‌ಸಿ ಮಹಾಂತೇಶ್ ಕವಟಗಿಮಠ,
- ಬೆಳಗಾವಿ ನಗರ ಜಿಲ್ಲಾಧ್ಯಕ್ಷ ಅನಿಲ್ ಬೆನಕೆ
- ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ರಾಜೇಶ್ ನೇರ್ಲಿ
- ಸಂಜಯ್ ಪಾಟೀಲ್, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ
- ಎಂ.ಬಿ. ಜಿರಲಿ, ಬಿಜೆಪಿ ವಕ್ತಾರ
ವೇಣುಗೋಪಾಲ್ ನಾಯಕ್ ಮನೆಗೆ ಭೇಟಿ ನೀಡಲಿರುವ ತಂಡ
- ಸಿ ಟಿ ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
- ಶಾಸಕ ಡಾ. ಸಿ ಎನ್ ಅಶ್ವತ್ಥನಾರಾಯಣ
- ಸಂಸದ ಪ್ರತಾಪಸಿಂಹ
- ಶಾಸಕ ಶ್ರೀವತ್ಸ
- ಮಾಜಿ ಶಾಸಕ ಎನ್ ಮಹೇಶ್
- ಮಾಜಿ ಶಾಸಕ ಪ್ರೀತಂ ಜೆ ಗೌಡ
- ಮುಖಂಡ ಅಪ್ಪಣ್ಣ
- ಪ್ರೊ. ಮಲ್ಲಿಕಾರ್ಜುನ, ಮೇಲ್ಮನೆ ಮಾಜಿ ಸದಸ್ಯ
- ವೈ ವಿ ರವಿಶಂಕರ್, ವಿಭಾಗ ಪ್ರಭಾರಿ
- ಮಂಗಳಾ ಸೋಮಶೇಖರ್, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ