(ಮುಂದುವರಿದ ಭಾಗ..) ಬಾಬಾಸಾಹೇಬ್ ಅಂಬೇಡ್ಕರ್ ಅವರು `ಸ್ಟೇಟ್ಸ್ ಆಂಡ್ ಮೈನಾರಿಟಿಸ್’ನಲ್ಲಿ ಅವರು ಸೂಚಿಸಿದ ಸಂವಿಧಾನಕ್ಕೆ ಒಂದು ಪೀಠಿಕೆಯನ್ನು ಪ್ರಸ್ತಾಪಿಸುತ್ತಾರೆ. ಅದರಲ್ಲಿ ಪ್ರತಿಯೊಬ್ಬರಿಗೂ ಸಂತೋಷಕ್ಕಾಗಿ ಯತ್ನಿಸುವ ಹಕ್ಕಿರಬೇಕು ಎನ್ನುತ್ತಾರೆ. ನಾಳಿನ ನಮ್ಮ ನಗರ ಸಮಾನತೆ, ನ್ಯಾಯ, ಘನತೆ ಹಾಗೂ ಸಂತೋಷದಿಂದ ತುಂಬಿರಬೇಕು. ಅದು ಸಾಧ್ಯವೇ? ಅಸಾಧ್ಯ ಅಂತೂ ಅಲ್ಲ. ಆದರೆ ಇವುಗಳನ್ನು ಸಾಧಿಸಲು ಇಲ್ಲಿಯತನಕ ಪಾಲಿಸಿಕೊಂಡು ಬಂದ ಅರೆಬೆಂದ ಪರಿಹಾರಗಳು, ನೀತಿಗಳು ಸಾಲದು. 2030ರಲ್ಲಿ ಬೆಂಗಳೂರಿನ ಜನಸಂಖ್ಯೆ 2 ಕೋಟಿ ಆಗುತ್ತೆ ಎಂದು ಬಿಡಿಎ ಅಂದಾಜಿಸಿದೆ. ನಮ್ಮ ಜನಸಂಖ್ಯೆ…

ವಿನಯ್ ಶ್ರೀನಿವಾಸ್
ಪರ್ಯಾಯ ಕಾನೂನು ವೇದಿಕೆಯಲ್ಲಿ ಸಕ್ರಿಯರಾಗಿರುವ ವಿನಯ್ ಶ್ರೀನಿವಾಸ್ ಅವರು ಜನಪರ ಹೋರಾಟಗಳ ದಿಟ್ಟ ದನಿಯೂ ಹೌದು. ವಕೀಲರಾಗಿ, ಬರಹಗಾರರಾಗಿ, ಬೆಂಗಳೂರಿನ ನಾಡಿಮಿಡಿತ ಬಲ್ಲವರಾಗಿ ಅವರು ನೀಡುವ ಒಳನೋಟಗಳು ಅಪರೂಪದ್ದಾಗಿವೆ