ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೋ ) ಇಂದು ತನ್ನ 101ನೇ ಉಪಗ್ರಹ, EOS-09 ಅನ್ನು ಪಿಎಸ್‌ಎಲ್‌ವಿ-61ನಲ್ಲಿ ಉಡಾವಣೆ ಮಾಡಿತು. ಆದರೆ ಕೆಲವೇ ಕ್ಷಣಗಳಲ್ಲಿ ಅದು ವಿಫಲವಾಯಿತು.
101 ನೇ ಉಡಾವಣೆಯನ್ನು PSLV-C61 ಮೂಲಕ ಮಾಡಲಾಯಿತು, ಇದು EOS-09 ಎಂದು ಹೆಸರಿಸಲಾದ ಭೂವೀಕ್ಷಣಾ ಉಪಗ್ರಹವನ್ನು ಹೊತ್ತೊಯ್ದಿತು. ಇದನ್ನು ಸೂರ್ಯ ಸಿಂಕ್ರೊನ ಪೋಲಾರ್ ಆರ್‌ರ್ಬಿಟ್‌ನಲ್ಲಿ ಇರಸಬೇಕಾಗಿತ್ತು. ಆದಾಗ್ಯೂ, EOS-09 ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲ್ಲ.
PSLV 4-ಹಂತದ ವಾಹನ ಮತ್ತು ಕಾರ್ಯಕ್ಷಮತೆ ಎರಡನೇ ಹಂತದವರೆಗೆ ಸಾಮಾನ್ಯವಾಗಿತ್ತು.ಇಂದು 101ನೇ ಉಡಾವಣೆಯನ್ನು ಪ್ರಯತ್ನಿಸಲಾಯಿತು ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಂತಿ ಬಯಸುವುದು ದೇಶದ್ರೋಹವಲ್ಲ!
“ PSLV-C61 ಕಾರ್ಯಕ್ಷಮತೆ 2ನೇ ಹಂತದವರೆಗೆ ಸಾಮಾನ್ಯವಾಗಿತ್ತು. 3ನೇ ಹಂತದಲ್ಲಿ ವೀಕ್ಷಣೆಯಿಂದಾಗಿ, ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಾವು ವಿಶ್ಲೇಷಣೆಯ ನಂತರ ಹಿಂತಿರುಗುತ್ತೇವೆ” ಎಂದು ಇಸ್ರೋ ವಿಫಲಗೊಂಡ ಉಪಗ್ರಹದ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶ ಬೆಳಿಗ್ಗೆ 5.59 ಕ್ಕೆ ರಾಕೆಟ್ ಉಡಾವಣೆಯಾಯಿತು. ಆದರೆ ಪಿಎಸ್ 3 ಘನ ರಾಕೆಟ್ ಮೋಟರ್ ಹಂತದಲ್ಲಿ ಪಥದಿಂದ ವಿಮುಖವಾಯಿತು. ಇದರಿಂದಾಗಿ ಇಸ್ರೋ ಕಾರ್ಯಾಚರಣೆಯನ್ನು ಕೊನೆಗೊಳಿಸಬೇಕಾಯಿತು.