ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೊಡಗಿಸಿಕೊಂಡಿರುವ, ಕೆಲಸ ಮಾಡುತ್ತಿರುವ ಹಾಗೂ ಸಂಸತ್ ಕಲಾಪಗಳಲ್ಲಿ ನಿಯಮಿತವಾಗಿ ಭಾಗಿಯಾಗುತ್ತಿರುವ ಮಾನದಂಡಗಳ ಮೇಲೆ 17 ಸಂಸದರನ್ನು 2015ರ ‘ಸಂಸದ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರಲ್ಲಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಚರಣ್‌ಜಿತ್ ಸಿಂಗ್ ಚನ್ನಿ ಕೂಡ ಒಬ್ಬರಾಗಿದ್ದಾರೆ. ದುರದೃಷ್ಟವಶಾತ್ ಕರ್ನಾಟಕದಿಂದ ಯಾವೊಬ್ಬ ಸಂಸದರೂ ಈ ಪ್ರಶಸ್ತಿಗೆ ಆಯ್ಕೆಯಾಗಿಲ್ಲ.
ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಸಂಸದರಿಗೆ ಸಂಸದ ರತ್ನ ಪ್ರಶಸ್ತಿಯನ್ನು ‘ಪ್ರೈಮ್ ಪಾಯಿಂಟ್ ಫೌಂಡೇಶನ್’ ಕೊಡುಮಾಡುತ್ತದೆ. ಸಂಸದರ ಸಂಸದೀಯ ಕಾರ್ಯಕ್ಷಮತೆಯ ದತ್ತಾಂಶಗಳ ಆಧಾರದ ಮೇಲೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಂಸರಾಜ್ ಅಹಿರ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯು ವಿಜೇತರನ್ನು ಪಟ್ಟಿ ಮಾಡಿದೆ.
ನಾಲ್ವರು ಸಂಸದರಿಗೆ ವಿಶೇಷ ಮನ್ನಣೆ;
16ನೇ ಮತ್ತು 17ನೇ ಲೋಕಸಭೆಯಲ್ಲಿ ಸ್ಥಿರ ಮತ್ತು ಅಸಾಧಾರಣ ಸೇವೆ ಸಲ್ಲಿಸಿದ, ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡಿ ಉತ್ತಮ ಪ್ರದರ್ಶನ ನೀಡಿದ ನಾಲ್ವರು ಸಂಸದರಿಗೆ ವಿಶೇಷ ಗೌರವ ನೀಡಲಾಗುತ್ತಿದೆ. ಅವರಲ್ಲಿ;
ಭರ್ತೃಹರಿ ಮಹ್ತಾಬ್ (ಬಿಜೆಪಿ)
ಸುಪ್ರಿಯಾ ಸುಳೆ (NCP-SPA)
ಎನ್.ಕೆ. ಪ್ರೇಮಚಂದ್ರನ್ (ಆರ್‌ಎಸ್‌ಪಿ)
ಶ್ರೀರಂಗ್ ಅಪ್ಪಾ ಬಾರ್ನೆ (ಶಿವಸೇನೆ) ಸೇರಿಸಿದ್ದಾರೆ.
ಸಂಸತ್ತಿನಲ್ಲಿ ಸಕ್ರಿಯ ಭಾಗವಹಿಸುವಿಕೆಗಾಗಿ ಪ್ರಶಸ್ತಿ ಪಡೆದವರು;
ಸಂಸತ್ತಿನ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಗಮನಾರ್ಹ ಚರ್ಚೆಗಳಲ್ಲಿ ಭಾಗಿಯಾದ ಹದಿಮೂರು ಸಂಸದರನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸ್ಮಿತಾ ವಾಘ್ (ಬಿಜೆಪಿ)
ಮೇಧಾ ಕುಲಕರ್ಣಿ (ಬಿಜೆಪಿ)
ಪ್ರವೀಣ್ ಪಟೇಲ್ (ಬಿಜೆಪಿ)
ರವಿ ಕಿಶನ್ (ಬಿಜೆಪಿ)
ನಿಶಿಕಾಂತ್ ದುಬೆ (ಬಿಜೆಪಿ)
ವಿದುತ್ ಬರನ್ ಮಹ್ತೊ (ಬಿಜೆಪಿ)
ಪಿ.ಪಿ. ಚೌಧರಿ (ಬಿಜೆಪಿ)
ಮದನ್ ರಾಥೋಡ್ (ಬಿಜೆಪಿ)
ದಿಲೀಪ್ ಸೈಕಿಯಾ (ಬಿಜೆಪಿ)
ಅರವಿಂದ್ ಸಾವಂತ್ (ಶಿವಸೇನೆ – ಉದ್ಧವ್ ಬಣ)
ನರೇಶ್ ಗಣಪತ್ ಮ್ಹಾಸ್ಕೆ (ಶಿವಸೇನೆ)
ವರ್ಷಾ ಗಾಯಕ್ವಾಡ್ (ಕಾಂಗ್ರೆಸ್)
ಸಿ.ಎನ್. ಅಣ್ಣಾದೊರೈ (ಡಿಎಂಕೆ)
ಸಂಸದರು ಮಾತ್ರವಲ್ಲೆ, ಎರಡು ಸಂಸದೀಯ ಸ್ಥಾಯಿ ಸಮಿತಿಗಳನ್ನು ಕೂಡ 2025ರ ‘ಸಂಸದ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವುಗಳು; ಹಣಕಾಸು ಸ್ಥಾಯಿ ಸಮಿತಿ ಮತ್ತು ಕೃಷಿ ಸ್ಥಾಯಿ ಸಮಿತಿ. ಕೃಷಿ ಸ್ಥಾಪಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಸಂಸದ, ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಚೆನ್ನಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.