17 ಸಂಸದರಿಗೆ ಸಂಸದ ರತ್ನ ಪ್ರಶಸ್ತಿ; ಕರ್ನಾಟಕದ ಯಾವೊಬ್ಬ ಸಂಸದರೂ ಆಯ್ಕೆಯಾಗಿಲ್ಲ!

Date:

ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೊಡಗಿಸಿಕೊಂಡಿರುವ, ಕೆಲಸ ಮಾಡುತ್ತಿರುವ ಹಾಗೂ ಸಂಸತ್‌ ಕಲಾಪಗಳಲ್ಲಿ ನಿಯಮಿತವಾಗಿ ಭಾಗಿಯಾಗುತ್ತಿರುವ ಮಾನದಂಡಗಳ ಮೇಲೆ 17 ಸಂಸದರನ್ನು 2015ರ ‘ಸಂಸದ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರಲ್ಲಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಚರಣ್‌ಜಿತ್ ಸಿಂಗ್ ಚನ್ನಿ ಕೂಡ ಒಬ್ಬರಾಗಿದ್ದಾರೆ. ದುರದೃಷ್ಟವಶಾತ್ ಕರ್ನಾಟಕದಿಂದ ಯಾವೊಬ್ಬ ಸಂಸದರೂ ಈ ಪ್ರಶಸ್ತಿಗೆ ಆಯ್ಕೆಯಾಗಿಲ್ಲ.

- Advertisement -

ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಸಂಸದರಿಗೆ ಸಂಸದ ರತ್ನ ಪ್ರಶಸ್ತಿಯನ್ನು ‘ಪ್ರೈಮ್ ಪಾಯಿಂಟ್ ಫೌಂಡೇಶನ್’ ಕೊಡುಮಾಡುತ್ತದೆ. ಸಂಸದರ ಸಂಸದೀಯ ಕಾರ್ಯಕ್ಷಮತೆಯ ದತ್ತಾಂಶಗಳ ಆಧಾರದ ಮೇಲೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಂಸರಾಜ್ ಅಹಿರ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯು ವಿಜೇತರನ್ನು ಪಟ್ಟಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ನಾಲ್ವರು ಸಂಸದರಿಗೆ ವಿಶೇಷ ಮನ್ನಣೆ;
16ನೇ ಮತ್ತು 17ನೇ ಲೋಕಸಭೆಯಲ್ಲಿ ಸ್ಥಿರ ಮತ್ತು ಅಸಾಧಾರಣ ಸೇವೆ ಸಲ್ಲಿಸಿದ, ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡಿ ಉತ್ತಮ ಪ್ರದರ್ಶನ ನೀಡಿದ ನಾಲ್ವರು ಸಂಸದರಿಗೆ ವಿಶೇಷ ಗೌರವ ನೀಡಲಾಗುತ್ತಿದೆ. ಅವರಲ್ಲಿ;
ಭರ್ತೃಹರಿ ಮಹ್ತಾಬ್ (ಬಿಜೆಪಿ)
ಸುಪ್ರಿಯಾ ಸುಳೆ (NCP-SPA)
ಎನ್.ಕೆ. ಪ್ರೇಮಚಂದ್ರನ್ (ಆರ್‌ಎಸ್‌ಪಿ)
ಶ್ರೀರಂಗ್ ಅಪ್ಪಾ ಬಾರ್ನೆ (ಶಿವಸೇನೆ) ಸೇರಿಸಿದ್ದಾರೆ.

ಸಂಸತ್ತಿನಲ್ಲಿ ಸಕ್ರಿಯ ಭಾಗವಹಿಸುವಿಕೆಗಾಗಿ ಪ್ರಶಸ್ತಿ ಪಡೆದವರು;
ಸಂಸತ್ತಿನ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಗಮನಾರ್ಹ ಚರ್ಚೆಗಳಲ್ಲಿ ಭಾಗಿಯಾದ ಹದಿಮೂರು ಸಂಸದರನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸ್ಮಿತಾ ವಾಘ್ (ಬಿಜೆಪಿ)
ಮೇಧಾ ಕುಲಕರ್ಣಿ (ಬಿಜೆಪಿ)
ಪ್ರವೀಣ್ ಪಟೇಲ್ (ಬಿಜೆಪಿ)
ರವಿ ಕಿಶನ್ (ಬಿಜೆಪಿ)
ನಿಶಿಕಾಂತ್ ದುಬೆ (ಬಿಜೆಪಿ)
ವಿದುತ್ ಬರನ್ ಮಹ್ತೊ (ಬಿಜೆಪಿ)
ಪಿ.ಪಿ. ಚೌಧರಿ (ಬಿಜೆಪಿ)
ಮದನ್ ರಾಥೋಡ್ (ಬಿಜೆಪಿ)
ದಿಲೀಪ್ ಸೈಕಿಯಾ (ಬಿಜೆಪಿ)
ಅರವಿಂದ್ ಸಾವಂತ್ (ಶಿವಸೇನೆ – ಉದ್ಧವ್ ಬಣ)
ನರೇಶ್ ಗಣಪತ್ ಮ್ಹಾಸ್ಕೆ (ಶಿವಸೇನೆ)
ವರ್ಷಾ ಗಾಯಕ್ವಾಡ್ (ಕಾಂಗ್ರೆಸ್)
ಸಿ.ಎನ್. ಅಣ್ಣಾದೊರೈ (ಡಿಎಂಕೆ)

ಸಂಸದರು ಮಾತ್ರವಲ್ಲೆ, ಎರಡು ಸಂಸದೀಯ ಸ್ಥಾಯಿ ಸಮಿತಿಗಳನ್ನು ಕೂಡ 2025ರ ‘ಸಂಸದ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವುಗಳು; ಹಣಕಾಸು ಸ್ಥಾಯಿ ಸಮಿತಿ ಮತ್ತು ಕೃಷಿ ಸ್ಥಾಯಿ ಸಮಿತಿ. ಕೃಷಿ ಸ್ಥಾಪಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಸಂಸದ, ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಚೆನ್ನಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...