ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿಡಾ.ಸರಜೂ ಕಾಟ್ಕರ್ ಅವರ ಛತ್ರಪತಿ “ಶಿವಾಜಿ ದಿ ಗ್ರೇಟ್ ಮರಾಠಾ” ಪುಸ್ತಕ ಬಿಡುಗಡೆಗೊಳಿಸಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಶಿವಾಜಿ ರಕ್ಷಣೆಗೆ ನಿಂತವರೇ ಮುಸ್ಲಿಂ ಸಮುದಾಯದವರು, ಅಪ್ಟಲ್ ಖಾನ್ ನ್ನು ಮುಗಿಸಲು ಮುಸ್ಲಿಂರ ಸಹಾಯ ಇದೆ. ಇದನ್ನು ತಿರುಚುವ ಪ್ರಯತ್ನ ಆಗಬಾರದು ಎಂದರು.
ಶಿವಾಜಿ ಜೊತೆಗೆ ಹಿಂದುಗಳಿಗಿಂತ ಮುಸ್ಲಿಮರೇ ಹೆಚ್ಚಾಗಿದ್ದರು. ಶಿವಾಜಿ ರಕ್ಷಣೆಗೆ ನಿಂತವರೇ ಮುಸ್ಲಿಂ ಸಮುದಾಯದವರು, ಅಪ್ಟಲ್ ಖಾನ್ ನ್ನು ಮುಗಿಸಲು ಮುಸ್ಲಿಂರ ಸಹಾಯ ಇದೆ. ಇದನ್ನು ತಿರುಚುವ ಪ್ರಯತ್ನ ಆಗಬಾರದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರು ಇತಿಹಾಸ ಜಗತ್ತಿಗೆ ಪರಿಚಯಿಸಿದರು ಜ್ಯೋತಿಬಾ ಪುಲೆ ಅವರು, ಶಿವಾಜಿ ಜೊತೆಗೆ ಹಿಂದುಗಳಿಗಿಂತ ಮುಸ್ಲಿಮರೇ ಹೆಚ್ಚಾಗಿದ್ದರು.
ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಮರಾಠಾ ಮುಸ್ಲಿಂ ಸಮಾಜದವರು ಸಹೋದರಂತೆ ಇದ್ದರು. ಇಂದಿನ ಕಾಲಘಟ್ಟದಲ್ಲಿ ನೈಜತೆಯನ್ನು ಕಳೆದು ಕೊಳ್ಳುತ್ತಿದ್ದೇವೆ. ನೈಜ ಇತಿಹಾಸ ಸಮಾಜಕ್ಕೆ ತಿಳಿಸುವ ಕೃತಿಗಳು ರಚನೆಯಾಗಬೇಕು ಎಂದರು.
ದೇಶದ ಇತಿಹಾಸ ತಿಳಿಯಲು ಇಂತಹ ಪುಸ್ತಕ ಅಗತ್ಯ. ಶಿವಾಜಿ ಮಹಾರಾಜರ ಕುರಿತು ಈ ಪುಸ್ತಕದಲ್ಲಿ ನೈಜ ರೂಪದಲ್ಲಿ ಹೇಳುವ ಪ್ರಯತ್ನ ಡಾ. ಸರಜೂ ಕಾಟ್ಕರ್ ಅವರು ಮಾಡಿದ್ದಾರೆ. ಸರಿಯಾದ ದೃಷ್ಟಿ ಕೋನದಿಂದ ಓದಿದಾಗ ಇತಿಹಾಸ ತಿಳಿಯುತ್ತದೆ
ಶಿವಾಜಿ ಮರಾಠಕ್ಕಷ್ಟೇ ಸೀಮಿತವಲ್ಲ, ಬಸವಾದಿ ಶರಣರು ಲಿಂಗಾಯತರಿಗಷ್ಟೇ ಸೀಮಿತವಲ್ಲ, ಹಾಗೆಯೇ ಬಾಬಾ ಸಾಹೇಜ ಅಂಬೇಡ್ಕರ್ ಅವರು ದಲಿತರಿಗಷ್ಟೆ ಸೀಮಿತರಾದವರಲ್ಲ. ಹೀಗಾಗಿ ದೇಶದ ಜನತೆ ನಿಜಾಂಶ ತಿಳಿದುಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಈ ವೇಳೆ ಕೃತಿಕಾರ ಡಾ.ಸರಜೂ ಕಾಟ್ಕರ ಕೃತಿ ರಚನೆ ಕುರಿತು ಮಾತನಾಡಿದರು. ರಾಮಕೃಷ್ಣ ಮರಾಠ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಡಾ.ಮನು ಬಳಿಗಾರ ವಹಿಸಿದ್ದರು. ಡಾ. ಗುರುದೇವಿ ಹುಲೆಪ್ಪನವರಮಠ, ಯ.ರು. ಪಾಟೀಲ ಕೃತಿ ಪರಿಚಯ ಮಾಡಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಪತ್ನಿ ಸುಮಾ ಕಾಟ್ಕರ ವಂದಿಸಿದರು.