ಸಂವಹನಕ್ಕೆ ಹೊಸಹೊಸ ಆಯಾಮಗಳನ್ನು ತಂದುಕೊಟ್ಟದ್ದು ಹಾಗೂ ಸಂವಹನದ ಇಡೀ ಪ್ರಕ್ರಿಯೆಯನ್ನು ಸುಲಭವಾಗಿಸಿದ್ದು ಮಾಹಿತಿ ತಂತ್ರಜ್ಞಾನದ ಅತಿದೊಡ್ಡ ಸಾಧನೆ. ಈ ಕ್ಷೇತ್ರದ ಬೆಳವಣಿಗೆಗಳ ಪರಿಣಾಮವಾಗಿ ಹಿಂದೊಮ್ಮೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಿದ್ದ ಸಂಗತಿಗಳೆಲ್ಲ ಈಗ ಸರ್ವೇಸಾಮಾನ್ಯ ಸಂಗತಿಗಳಾಗಿ ಹೋಗಿವೆ. ಕಂಪ್ಯೂಟರು-ಸ್ಮಾರ್ಟ್ಫೋನುಗಳಲ್ಲಿ ಟೈಪಿಸುವ ಅಕ್ಷರಗಳನ್ನು, ಕ್ಯಾಮೆರಾಗೆ ಸೆರೆಸಿಕ್ಕ ಚಿತ್ರಗಳನ್ನು ಕ್ಷಣಾರ್ಧದಲ್ಲೇ ಪ್ರಪಂಚ ಪರ್ಯಟನೆಗೆ ಕಳುಹಿಸಿಕೊಡುವುದೇನು ಕಡಿಮೆ ಸಾಧನೆಯೇ? ಇದನ್ನೆಲ್ಲ ಸಾಧ್ಯವಾಗಿಸಿರುವುದು ಅಂತರ್ಜಾಲ (ಇಂಟರ್‌ನೆಟ್). ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕಂಪ್ಯೂಟರು-ಮೊಬೈಲ್ ಫೋನುಗಳನ್ನೆಲ್ಲ ಪರಸ್ಪರ ಸಂಪರ್ಕಿಸಿ, ಅವುಗಳ ನಡುವೆ ಮಾಹಿತಿಯ ವಿನಿಮಯ ಸಾಧ್ಯವಾಗಿಸಿದ್ದು ಅದರ ಸಾಧನೆ. ವಿಶ್ವವ್ಯಾಪಿ…

ಟಿ.ಜಿ. ಶ್ರೀನಿಧಿ
ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಪ್ರೋಗ್ರಾಮರ್ ಅನಲಿಸ್ಟ್ ಆಗಿರುವ ಟಿ. ಜಿ. ಶ್ರೀನಿಧಿ ಕಳೆದ ಎರಡು ದಶಕಗಳಿಂದ ಕನ್ನಡದಲ್ಲಿ ವಿಜ್ಞಾನ ಸಂವಹನ ನಡೆಸುತ್ತಿದ್ದು, 3000ಕ್ಕೂ ಹೆಚ್ಚು ಲೇಖನ ಹಾಗೂ 30ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಹಲವು ದಿನಪತ್ರಿಕೆಗಳಿಗೆ ಲೇಖನ ಬರೆಯುತ್ತಲೆ, ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ ಕನ್ನಡ ಜಾಲತಾಣ ejnana.com ಅನ್ನು ನಡೆಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ಮಯೂರವರ್ಮ ಸಾಹಿತ್ಯ ಪ್ರಶಸ್ತಿ’, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ‘ಶ್ರೇಷ್ಠ ಲೇಖಕ’ ಪ್ರಶಸ್ತಿ ಮುಂತಾದ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.