1975ರ ಫೆಬ್ರವರಿಯಲ್ಲಿ ನಾನು ಆರೆಮ್ಮೆಸ್ ಬಿಟ್ಟು, ಅದೇ ಇಲಾಖೆಯ ಟೆಲಿಫೋನ್ಸ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದೆ. ಆ ವರ್ಷದ ಜುಲೈಯಲ್ಲಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದರು. ದೇಶಾದ್ಯಂತ ಭಾರೀ ಅಲ್ಲೋಲ ಕಲ್ಲೋಲ ಉಂಟಾಯಿತು. ರಾಜ್ಯದಲ್ಲಿ ಸಹ, ಉತ್ತರ ಭಾರತದಷ್ಟು ಅಲ್ಲವಾದರೂ, ಎಮರ್ಜೆನ್ಸಿಯ ಪ್ರಭಾವ ಗೋಚರಿಸಿತು, ಇಲ್ಲೂ ಅನೇಕರ ಬಂಧನಗಳಾದವು. ಆದರೂ ದೇವರಾಜ ಅರಸರಿಂದಾಗಿ, ಇಂದಿರಾ ಅವರ ʻ20 ಅಂಶದ ಕಾರ್ಯಕ್ರಮʼ, ಸಾಲ ಮನ್ನಾ ಮುಂತಾದವುಗಳಿಂದ ರಾಜ್ಯದ ಬಡಜನತೆಗೆ ಸಾಕಷ್ಟು ಒಳ್ಳೆಯದೂ ಆಯಿತು ಎಂದು ಇತಿಹಾಸ ದಾಖಲಿಸಿದೆ.
(“ನಾನು ಭರ್ತಿ ಎಂಟು ವರ್ಷದ ಆರೆಸ್ಸೆಸ್ ಸಹವಾಸದಿಂದ ಶಾಶ್ವತವಾಗಿ ಬಿಡಿಸಿಕೊಂಡೆ. ಅಷ್ಟೇ ಅಲ್ಲ, ದೇವರು-ದೇವಸ್ಥಾನ-ಪೂಜೆ-ಸಂಧ್ಯಾವಂದನೆ-ಜನಿವಾರ ಎಲ್ಲದರಿಂದಲೂ ಬಿಡುಗಡೆಗೊಂಡು ಒಂದು ರೀತಿ ʻನಿರ್ವಾಣʼವಾದೆ. ಸಂಕುಚಿತ ಅರ್ಥದ ಧರ್ಮ ಜಾತಿ ಎಲ್ಲವನ್ನೂ ತೊರೆದು ಮನುಷ್ಯ ಧರ್ಮ – ಮನುಷ್ಯ ಜಾತಿಗೆ ಸೇರಿಬಿಟ್ಟೆ. ಅದು 1971, ನನಗಾಗ ಹತ್ತೊಂಬತ್ತು ವರ್ಷ ವಯಸ್ಸು. ನಂತರದ ಎರಡು ವರ್ಷ ತಲೆಯೊಳಗೆ ಕೊತಕೊತ ಕುದಿತ. ಪ್ರಶ್ನೆಗಳು ಪ್ರಶ್ನೆಗಳು ಪ್ರಶ್ನೆಗಳು. ಈ ಹುಡುಕಾಟದ ಫಲವಾಗಿ ನನಗೆ ಧುತ್ತೆಂದು ಸಿಕ್ಕಿದ್ದೇ ಮಾವೋವಾದಿ ಧಾರೆಯ ಕಮ್ಯೂನಿಸಂ …” … ಮೇ 7ರ ʻಜೋಳಿಗೆʼಯ ʻನನ್ನ ಆರೆಸ್ಸೆಸ್ ದಿನಗಳುʼ ಬರಹದಲ್ಲಿ ಈ ಮೇಲಿನಂತೆ ಬರೆದಿದ್ದೆ. ಅದನ್ನೀಗ ಸ್ವಲ್ಪ ಮುಂದುವರಿಸೋಣ).
1971ರಿಂದ ಎರಡು ವರ್ಷ ಹಾಗೆ ನನ್ನ ಸುತ್ತಲಿನ ಸಮಾಜದ ಆಗುಹೋಗುಗಳ ಕಡೆ ಗಮನ ಹರಿಯುತ್ತಿತ್ತು. ಯುವರಾಜ ಕಾಲೇಜಿನಲ್ಲಿ ಎಂ.ವಿ.ಶ್ರೀಧರ ಎಂಬ ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕರಿದ್ದರು. ಅವರು ಸಮಾಜವಾದಿಯೋ, ಗಾಂಧಿವಾದಿಯೋ ಆಗಿದ್ದರು; ಸದಾ ಅಚ್ಚ ಬಿಳಿ ಖಾದಿಯ ಸಾದಾ ಪ್ಯಾಂಟ್ ಶರ್ಟನ್ನೇ ತೊಡುತ್ತಿದ್ದರು. ಅವರು ದೇಶದ ಆಗುಹೋಗುಗಳನ್ನು ಕುರಿತು ತರಗತಿಯಲ್ಲಿ ಆಗೀಗ ಒಂದಷ್ಟು ಹೊತ್ತು ಮಾತಾಡುತ್ತಿದ್ದರು. ಅದೆಲ್ಲವೂ ಪೂರ್ತಿ ಅರ್ಥ ಆಗುತ್ತಿರಲಿಲ್ಲವಾದರೂ ಅಸ್ಪಷ್ಟವಾಗಿ ನನ್ನ ಮನಸ್ಸಿನಲ್ಲಿ ನಡೆಯುತ್ತಿದ್ದ ತುಮುಲವನ್ನೇ ಪುಷ್ಟಿಗೊಳಿಸುತ್ತಿತ್ತು.
1973ರಲ್ಲಿ ಬಿಎಸ್ಸಿ ಮುಗಿಸಿದೆ. ಆಗಲೇ ಮೈಸೂರಿನಲ್ಲಿ ಅಂಚೆ-ತಂತಿ ಇಲಾಖೆಯ ಆರ್.ಎಂ.ಎಸ್. ವಿಭಾಗದಲ್ಲಿ ಖಾಯಂ ಉದ್ಯೋಗ ಸಿಕ್ಕಿತು. ಒಳ್ಳೆಯ ಕೆಲಸಗಾರನೆಂಬ ಮೆಚ್ಚುಗೆಯನ್ನೂ ಗಳಿಸಿದೆ. ಅಲ್ಲಿ ನೌಕರರ ಯೂನಿಯನ್ನಿನ ಚಟುವಟಿಕೆ ಬಿರುಸಾಗಿ ನಡೆಯುತ್ತಿತ್ತು. ರಘೋತ್ತಮನ್ ಎಂಬ ನಿಷ್ಠಾವಂತ ಕಮ್ಯೂನಿಸ್ಟ್ ಮುಂದಾಳೊಬ್ಬರು ಆ ಕಚೇರಿಯ ಮುಖ್ಯರಾಗಿದ್ದರು. ಅವರಿಂದಲೂ ಯೂನಿಯನ್ ವಿಚಾರದಲ್ಲಿ, ದೇಶ ಮತ್ತು ಜಗತ್ತಿನ ಪರಿಸ್ಥಿತಿಯ ವಿಚಾರದಲ್ಲಿ ಸಾಕಷ್ಟು ತಿಳವಳಿಕೆ ದೊರೆಯಿತು. ಯೂನಿಯನ್ ಮೀಟಿಂಗುಗಳಲ್ಲಿ ನಾನೂ ʻಬಿರುಸಾಗಿʼಯೇ ಪಾಲ್ಗೊಳ್ಳುತ್ತಿದ್ದೆ. ಅವು 1974ರ ದೇಶವ್ಯಾಪಿ ಐತಿಹಾಸಿಕ ರೈಲ್ವೆ ಮುಷ್ಕರ ಹಾಗೂ ಇಂದಿರಾ ಗಾಂಧಿಯ ʻತುರ್ತುಪರಿಸ್ಥಿತಿʼ (ಎಮರ್ಜೆನ್ಸಿ) ಇವುಗಳಿಗಿಂತ ಮುಂಚಿನ ವರ್ಷಗಳು: ದೇಶದಲ್ಲಿ ಸಾಮಾಜಿಕ-ಆರ್ಥಿಕ-ರಾಜಕೀಯ ಕ್ಷೋಭೆಯ ಚಂಡಮಾರುತ ರೂಪು ತಳೆಯುತ್ತಿತ್ತು. ಇದೆಲ್ಲ ನಮ್ಮ ಯೂನಿಯನ್ ಮೀಟಿಂಗುಗಳಲ್ಲೂ ಅಷ್ಟಿಷ್ಟು ಪ್ರತಿಫಲನಗೊಳ್ಳುತ್ತಿತ್ತು. (ಆಗ ನಾನಿನ್ನೂ ಕಮ್ಯೂನಿಸ್ಟ್ ಆಗಿರಲಿಲ್ಲ! ಬದಲಿಗೆ, ಆರೆಸ್ಸೆಸ್ ತೊರೆದಿದ್ದರೂ ಅದರಿಂದ ಹರಿದುಬಂದಿದ್ದ ಕಮ್ಯೂನಿಸ್ಟ್ ವಿರೋಧವೇ ಮನಸ್ಸಿನೊಳಗೆಲ್ಲೋ ಹುದುಗಿ ಕೂತಿತ್ತು).

ಅಲ್ಲಿ ಗಂಗಾಧರ ಮೂರ್ತಿ ಮತ್ತು ಲಕ್ಷ್ಮೀನಾರಾಯಣ ಎಂಬ ಇಬ್ಬರು ಹಿರಿಯ ಸಹೋದ್ಯೋಗಿಗಳು ನನ್ನ ಮನೋಭಾವ, ಪ್ರವೃತ್ತಿಗಳನ್ನು ಗಮನಿಸುತ್ತಿದ್ದರು ಅನ್ನಿಸುತ್ತೆ. ಗಂಗಾಧರ ಮೂರ್ತಿಯವರು ಆರೆಮ್ಮೆಸ್ನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತ ಮೈಸೂರು ವಿವಿಯಿಂದ ಇಂಗ್ಲಿಷ್ನಲ್ಲಿ ಎಂಎ ಮಾಡಿದರು. ನಂತರ ಗೌರಿಬಿದನೂರಿನ ನ್ಯಾಶನಲ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕ, ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿ, 2022ರ ಸೆಪ್ಟೆಂಬರಿನಲ್ಲಿ ತೀರಿಕೊಂಡರು. ಅವರು ಕರ್ನಾಟಕದ ಬಹುತೇಕ ಜನಪರ ಚಳವಳಿಗಳ ಜೊತೆ, ವಿಶೇಷವಾಗಿ ದಲಿತ ಸಂಘರ್ಷ ಸಮಿತಿ ಜೊತೆ ಸಕ್ರಿಯ ಸಂಬಂಧ ಇಟ್ಟುಕೊಂಡಿದ್ದರಲ್ಲದೆ, ಅದಕ್ಕೆ ಪೂರಕವಾಗಿ ಅನೇಕ ಕೃತಿಗಳನ್ನು ಬರೆದರು ಹಾಗೂ ಕೆಲವು ಒಳ್ಳೆಯ ಕೃತಿಗಳನ್ನು ಇತರ ಭಾಷೆಗಳಿಂದ ಅನುವಾದಗಳನ್ನೂ ಮಾಡಿದರು. ನಾನು ಅವರನ್ನು ನನಗೆ ಜನಪರ ಚಳವಳಿಗಳ ಹಾದಿ ತೋರಿದವರು ಎಂದು ಪರಿಗಣಿಸಿದ್ದೇನೆ. ಅವರ ಬದುಕಿನ ಕೊನೆಯವರೆಗೂ ಅವರ ಮತ್ತು ನಮ್ಮ ಕುಟುಂಬಗಳ ಸ್ನೇಹಸಂಬಂಧ ಉಳಿದುಬಂದಿತು. ಅದು ಈಗಲೂ ಅವರ ಕುಟುಂಬದ ಜೊತೆ ಮುಂದುವರಿದಿದೆ.
ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ(ಸಿಎಫ್ಟಿಆರ್‌ಐ)ಯ ಪ್ರೊ. ವೀರ್ರಾಜು (ರಾಜು ಅಂತ ಎಲ್ಲರೂ ಕರೆಯುತ್ತಿದ್ದುದು) ಅವರು ಪ್ರತೀ ಭಾನುವಾರ ನಡೆಸುತ್ತಿದ್ದ ಸಣ್ಣದೊಂದು ಕಮ್ಯೂನಿಸ್ಟ್ ಅಧ್ಯಯನ ಕೂಟದಲ್ಲಿ ನನ್ನ ಈ ಇಬ್ಬರು ಹಿರಿಯ ಸಹೋದ್ಯೋಗಿಗಳೂ ಪಾಲ್ಗೊಳ್ಳುತ್ತಿದ್ದರು. ಅಲ್ಲಿಗೆ 1974ರ ಜನವರಿ-ಫೆಬ್ರವರಿಯ ಒಂದು ಭಾನುವಾರ ನನ್ನನ್ನೂ ಕರೆದೊಯ್ದರು. ಪ್ರೊ. ರಾಜು ಒಳ್ಳೆಯ ನುರಿತ ಕಮ್ಯೂನಿಸ್ಟ್ ತತ್ವಜ್ಞ ಮತ್ತು ಎಲೆಮರೆಯಂಥ ಸಂಘಟಕರಾಗಿದ್ದರು. ಅವರು ನನ್ನ ಬದುಕಿನ ವಿವರಗಳನ್ನು ಹಾಗೂ ನನ್ನ ಮನಸ್ಸನ್ನು ಕೊರೆಯುತ್ತಿದ್ದ ಪ್ರಶ್ನೆಗಳನ್ನೆಲ್ಲ ಕೇಳಿಸಿಕೊಂಡು, ಅದೆಲ್ಲದರ ಮೂಲ ಕಾರಣವನ್ನು ಸಮಾಧಾನದಿಂದ ನನಗೆ ವಿವರಿಸಿದರು. ಆ ಕಾರಣವೆಂದರೆ ನಮ್ಮನ್ನಾಳುತ್ತಿರುವ ಶೋಷಕ ವ್ಯವಸ್ಥೆ. ನಾನು ಅನುಭವಿಸಿದ ಸಮಸ್ಯೆಗಳಿಗೂ, ನನ್ನ ಸುತ್ತಲಿನ ಮತ್ತು ದೇಶದ ಎಲ್ಲ ಸಮಸ್ಯೆಗಳಿಗೂ ಹೇಗೆ ಈ ಶೋಷಕ ವ್ಯವಸ್ಥೆಯೇ ಮೂಲ ಕಾರಣ ಎನ್ನುವುದನ್ನು ಅವರು ಬಹಳ ಸರಳವಾಗಿ ನನಗೆ ಮನವರಿಕೆ ಮಾಡಿಕೊಟ್ಟರು. ಇದು ನನಗೆ ಸಂಪೂರ್ಣ ಒಪ್ಪಿಗೆಯಾಯಿತು.
ಆದರೆ ಒಂದು ಸಂದೇಹ ಕಾಡಿತು: ಇದೆಲ್ಲ ಬಹಳ ಸರಿಯಾಗಿಯೇನೋ ಇದೆ. ಆದರೆ ಅವರು ಹೇಳುತ್ತಿರುವುದು ಕಮ್ಯೂನಿಸಂ! …? ಈ ಅಸಂಗತ ವಿರೋಧಾಭಾಸ ಮನಸ್ಸಿನಲ್ಲಿ ಒಂದಷ್ಟು ಕಾಲ – ಬಹುಶಃ ಒಂದೆರಡು ದಿನ – ಕಡೆಯಿತು. ಕೊನೆಗೆ, “ಹಾಗಿದ್ದರೆ ಕಮ್ಯೂನಿಸಮ್ಮೇ ಸರಿ. ಹಾಗಿದ್ದರಿಂದಲೇ ಅದನ್ನು ಆರೆಸ್ಸೆಸ್ ಇಷ್ಟು ಉಗ್ರವಾಗಿ ವಿರೋಧಿಸುತ್ತಿರುವುದು” ಎಂಬ ತಥ್ಯ ಮನವರಿಕೆ ಆಯಿತು. ಅಂದಿನಿಂದ ನಾನೂ ಕಮ್ಯೂನಿಸ್ಟ್ ಆಗಿಬಿಟ್ಟೆ. ಸ್ವಲ್ಪ ಸಮಯದೊಳಗೆ ಅದು ಮಾವೋವಾದಿ ಧಾರೆಯ ಕಮ್ಯೂನಿಸಂ ಎನ್ನುವುದೂ ಅರ್ಥವಾಯಿತು. ಆಲ್ ರೈಟ್! ಅದೇ ಆಗಲಿ, ನಾನೂ ಮಾವೋವಾದಿ ಧಾರೆಯ ಕಮ್ಯೂನಿಸ್ಟನೇ. (ಏನೀಗ?)
ಪ್ರೊ. ರಾಜು, ಪ್ರೊ. ನರೇಂದ್ರ ಸಿಂಗ್, ಪ್ರೊ. ರಾಮಲಿಂಗಂ, ಡಾ. ಲಕ್ಷ್ಮೀನಾರಾಯಣ ಮುಂತಾಗಿ ಮೈಸೂರಿನ ಹಲವು ಮಂದಿ ಈ ಧಾರೆಯ ಕಮ್ಯೂನಿಸ್ಟರು ಸರಸ್ವತಿಪುರಂ ಪಕ್ಕದ ಕುಕ್ಕರಹಳ್ಳಿಯಲ್ಲಿ ʻಮಹದೇವಪ್ಪ ಸ್ಮಾರಕ ಮಾರ್ಕ್ಸ್ವಾದಿ ಗ್ರಂಥಾಲಯʼ ಎಂಬ ಚಿಕ್ಕ ಲೈಬ್ರೆರಿಯೊಂದನ್ನು ಆರಂಭಿಸಿದ್ದರು. ಅಲ್ಲಿ ಮಾರ್ಕ್ಸ್ವಾದದ್ದು ಮಾತ್ರವಲ್ಲದೆ ಇನ್ನೂ ಬೇರೆಬೇರೆ ವಿಚಾರಗಳ ಸಣ್ಣಸಣ್ಣ ಒಳ್ಳೊಳ್ಳೆಯ ಪುಸ್ತಕಗಳನ್ನು ಸಂಗ್ರಹಿಸಿದ್ದರು. ದಿನಕ್ಕೊಬ್ಬರು ಸಂಜೆ ಆರರಿಂದ ಎಂಟರವರೆಗೆ ಅದನ್ನು ನಿರ್ವಹಿಸಬೇಕಿತ್ತು. ನಾನೂ ವಾರದಲ್ಲಿ ಒಂದು ದಿನ ಅದನ್ನು ನೋಡಿಕೊಳ್ಳತೊಡಗಿದೆ. ಹೇಮಾ, ರತಿ ರಾವ್ ಮತ್ತಿತರರು ಅಲ್ಲಿಗೆ ಖಾಯಮ್ಮಾಗಿ ಭೇಟಿ ಕೊಡುತ್ತಿದ್ದರು. ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ ಉಪನ್ಯಾಸ ನೀಡಲು ಹೊರಗಿನಿಂದ ಬರುತ್ತಿದ್ದ ಅನೇಕ ವಿದ್ವಾಂಸರನ್ನು, ಹೆಸರಾಂತ ಹೋರಾಟಗಾರರನ್ನು ಲೈಬ್ರೆರಿಗೂ ಕರೆಸಲಾಗುತ್ತಿತ್ತು. ಆಗ ಮೈಸೂರಿನ ಅನೇಕ ಪ್ರಗತಿಪರ ಚಿಂತಕರು, ಹೋರಾಟಗಾರರು ಸಹ ಅಲ್ಲಿ ಸೇರುತ್ತಿದ್ದರು. ನಾವುನಾವೇ ಕೂಡ ದಿನವೂ ಏನಾದರೂ ಚರ್ಚೆ ಮಾಡುತ್ತಿರುತ್ತಿದ್ದೆವು.
ಹೀಗೇ ದಿನಗಳು ಕಳೆದವು. 1974ರ ರೈಲ್ವೆ ಮುಷ್ಕರ ನಡೆದು, ಅದನ್ನು ಕೇಂದ್ರ ಸರ್ಕಾರ ಕ್ರೂರವಾಗಿ ಹತ್ತಿಕ್ಕಿದ್ದೂ ಆಯಿತು. ನಮ್ಮ ಆರೆಮ್ಮೆಸ್ ಕಚೇರಿ ರೈಲ್ವೆ ನಿಲ್ದಾಣದಲ್ಲೇ ಇದ್ದುದರಿಂದ ಅನೇಕ ಹಿರಿಯ ರೈಲ್ವೆ ನೌಕರರು ಪರಿಚಿತರೂ, ಸ್ನೇಹಿತರೂ ಆಗಿದ್ದರು. ಆ ಪೈಕಿ ಹಲಕೆಲವರು ಮುಷ್ಕರದ ಕಾರಣಕ್ಕೆ ಶಿಕ್ಷೆಗೂ ಒಳಗಾಗಿ, ಕೆಲಸ ಕಳೆದುಕೊಂಡರು. ಅವರಲ್ಲಿ ನಿವೃತ್ತಿಯ ಅಂಚಿನಲ್ಲಿದ್ದ ಒಬ್ಬ ಹಿರಿಯ ನಿಷ್ಠಾವಂತ ಯೂನಿಯನ್ ಮುಂದಾಳು ನನಗೆ ಚೆನ್ನಾಗಿ ನೆನಪಿದ್ದಾರೆ (ಅವರ ಹೆಸರು ಭಾಸ್ಕರನ್ ಅಂತ ಇದ್ದಿರಬೇಕು). ಬಹುಶಃ ಅವರದ್ದೆಲ್ಲ ಕೇಸು ಕೋರ್ಟುಗಳಲ್ಲಿ ನಡೆಯಿತು ಅಂತ ನೆನಪು. ಆ ಹಿರಿಯರಿಗಾಗಿ ನಾವೆಲ್ಲ ಪ್ರತಿ ತಿಂಗಳೂ ನಮ್ಮ ಸಣ್ಣ ಸಂಬಳದಲ್ಲೇ ಅಲ್ಪಸ್ವಲ್ಪ ಹಣ ಒಟ್ಟುಗೂಡಿಸಿ ಕೊಡುತ್ತಿದ್ದೆವು. ಆಗ ನನ್ನ ಸಂಬಳ 262ರೂ. 50 ಪೈಸೆ ಇತ್ತು! ಅದು ಮೂರನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಹೆಚ್ಚಳವಾಗಿದ್ದ ಮೊತ್ತ! ರಾಜ್ಯ ಸರ್ಕಾರದ ಪ್ರಥಮ ದರ್ಜೆ ಗುಮಾಸ್ತರಿಗೆ ಸರಿಸಮನಾದ ಹುದ್ದೆಯ ಸಂಬಳ ಅದು ಆಗ.

ದೇಶದೊಳಗೆ ಸಂಕ್ಷೋಭೆ ಮುಂದುವರಿಯಿತು. ಜಯಪ್ರಕಾಶ ನಾರಾಯಣರ ʻನವ ನಿರ್ಮಾಣ ಕ್ರಾಂತಿʼ ಚಳವಳಿ ಬಿರುಸು ಪಡೆಯಿತು. ಆಗ ದೇವರಾಜ ಅರಸರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು 1974ರಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದರು. ದಲಿತ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಇಂತಹ ಹಲವು ಕಾರಣಗಳಿಂದಾಗಿ ನಮ್ಮ ರಾಜ್ಯದಲ್ಲಿ ʻನವ ನಿರ್ಮಾಣ ಕ್ರಾಂತಿʼ ಚಳವಳಿಯ ಪ್ರಭಾವ ಅಷ್ಟಾಗಿ ಇರಲಿಲ್ಲ ಅನ್ನಬಹುದು. ಇಲ್ಲಿ ಗಣನೀಯ ಸಂಖ್ಯೆಯಲ್ಲಿದ್ದ ಮತ್ತು ಸಾಕಷ್ಟು ಮಟ್ಟಿಗೆ ಪ್ರಭಾವಶಾಲಿಗಳೂ ಆಗಿದ್ದ ಸಮಾಜವಾದಿಗಳು ಸ್ವಲ್ಪ ಹೆಚ್ಚು ಸಕ್ರಿಯವಾಗಿದ್ದರು.
1975ರ ಫೆಬ್ರವರಿಯಲ್ಲಿ ನಾನು ಆರೆಮ್ಮೆಸ್ ಬಿಟ್ಟು, ಅದೇ ಇಲಾಖೆಯ ಟೆಲಿಫೋನ್ಸ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದೆ. ಆ ವರ್ಷದ ಜುಲೈಯಲ್ಲಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದರು. ದೇಶಾದ್ಯಂತ ಭಾರೀ ಅಲ್ಲೋಲ ಕಲ್ಲೋಲ ಉಂಟಾಯಿತು. ರಾಜ್ಯದಲ್ಲಿ ಸಹ, ಉತ್ತರ ಭಾರತದಷ್ಟು ಅಲ್ಲವಾದರೂ, ಎಮರ್ಜೆನ್ಸಿಯ ಪ್ರಭಾವ ಗೋಚರಿಸಿತು, ಇಲ್ಲೂ ಅನೇಕರ ಬಂಧನಗಳಾದವು. ಆದರೂ ದೇವರಾಜ ಅರಸರಿಂದಾಗಿ, ಇಂದಿರಾ ಅವರ ʻ20 ಅಂಶದ ಕಾರ್ಯಕ್ರಮʼ, ಸಾಲ ಮನ್ನಾ ಮುಂತಾದವುಗಳಿಂದ ರಾಜ್ಯದ ಬಡಜನತೆಗೆ ಸಾಕಷ್ಟು ಒಳ್ಳೆಯದೂ ಆಯಿತು ಎಂದು ಇತಿಹಾಸ ದಾಖಲಿಸಿದೆ. ನಮ್ಮ ಲೈಬ್ರೆರಿಗೆ ಮತ್ತು ಅದರ ಮುಂದಾಳುಗಳಿಗೂ ಬಂಧನದ ಅಪಾಯ ಇತ್ತು. ಇದನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸಿಕೊಳ್ಳುವ ಉದ್ದೇಶದಿಂದ, ಕಾಂಗ್ರೆಸ್ ಎಂಎಲ್ಸಿಯಾಗಿದ್ದ
ಬಿ. ಸುಬ್ಬಯ್ಯ ಶೆಟ್ಟಿ ಎಂಬ ಸಮಾಜವಾದಿಗಳೊಂದಿಗೆ ಸೇರಿ, ʻಸೋಷಲಿಸ್ಟ್ ಸ್ಟಡಿ ಸೆಂಟರ್ʼ ಅಂತಲೋ ಏನೋ, ವೇದಿಕೆಯೊಂದನ್ನು ಸ್ಥಾಪಿಸಿ, ಅದರ ಮೂಲಕ ಕೆಲವು ಸಣ್ಣಪುಟ್ಟ ಚರ್ಚೆ ಮುಂತಾದುವನ್ನು ನಡೆಸಲಾಯಿತು.
1975ರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪನೆಯಾಯಿತು. ತುರ್ತುಪರಿಸ್ಥಿತಿ ಅವಧಿಯಲ್ಲೂ ಸಹ ಅದರ ಸಂಘಟನೆ ಮತ್ತು ಚಟುವಟಿಕೆಗಳು ನಿಧಾನವಾಗಿ ವಿಸ್ತರಿಸಿದವು. ಆದರೆ ಅದರ ಹೋರಾಟಗಳು ಬಿರುಸು ಪಡೆದಿದ್ದು ಎಮರ್ಜೆನ್ಸಿಯ ನಂತರ, ಅಂದರೆ 1977ರ ನಂತರ. ನೋಡನೋಡುತ್ತಿದ್ದಂತೆ ಅದು ರಾಜ್ಯವ್ಯಾಪಿಯಾಗಿ ಹಬ್ಬಿ ಬೇರೂರಿತು. ಇಂದು ಫ್ಯಾಸಿಸ್ಟ್-ಕಾರ್ಪೊರೇಟ್ ಕೋಮುವಾದ, ಬ್ರಾಹ್ಮಣವಾದಗಳೇ ರಾಜ್ಯದಲ್ಲಿ ಪ್ರಧಾನ ಧಾರೆಯಾಗಿದ್ದರೆ, ಅಂದು ಪ್ರಗತಿಪರ-ಜನಪರ ಚಿಂತನೆ ಮತ್ತು ಚಟುವಟಿಕೆಗಳೇ ರಾಜ್ಯದ ವಿಚಾರವಂತರ ಪ್ರಧಾನ ಧಾರೆಯಾಗಿದ್ದವು. ಅಂತಹ ಎಲ್ಲರೂ ದಲಿತ ಸಂಘರ್ಷ ಸಮಿತಿಯನ್ನು ಅಖಂಡವಾಗಿ ಬೆಂಬಲಿಸಿದರು. ದಸಂಸ ಅಲ್ಲದೆ, ಅದಕ್ಕೂ ಮೊದಲಿನಿಂದ ಕಮ್ಯೂನಿಸ್ಟ್ ಚಳವಳಿ ಮತ್ತು ಚಿಂತನೆಗಳೂ ಸಾಕಷ್ಟು ಪ್ರಭಾವ ಹೊಂದಿದ್ದವು. ಜೊತೆಗೆ ವಿಚಾರವಾದಿ ಚಳವಳಿಯೂ ತನ್ನ ಛಾಪು ಮೂಡಿಸಿತ್ತು, ಮೈಸೂರಿನ ಪ್ರೊ. ರಾಮಲಿಂಗಂ ಅವರು ಮುಂದೆ ಅಖಿಲ ಭಾರತ ರ್ಯಾಶನಲಿಸ್ಟ್ ಫೋರಂನ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ದೇವನೂರ ಮಹಾದೇವ ಅವರ ಮುಂದಾಳತ್ವದಲ್ಲಿ ಸಮಾಜವಾದಿ ಯುವಜನ ಸಭಾ ಕೂಡ ಸಕ್ರಿಯವಾಗಿತ್ತು.

ಇದೆಲ್ಲದರ ಜೊತೆಗೆ, ಆ ಕಾಲಮಾನದಲ್ಲಿ ಜಗತ್ತಿನ ಅನೇಕ ಕಡೆಗಳಲ್ಲಿ – ದಕ್ಷಿಣ ಆಫ್ರಿಕ ದೇಶದಲ್ಲಿ ವರ್ಣಭೇದ ನೀತಿ (ಅಪಾರ್ಥೇಡ್) ವಿರುದ್ಧ, ಪ್ಯಾಲೆಸ್ತೀನಿನಲ್ಲಿ ನರಸಂಹಾರಕ ಯಹೂದಿ ಜಿ಼ಯೋನಿಸಂನಿಂದ ವಿಮೋಚನೆಗಾಗಿ, ಫಿಲಿಪೀನ್ಸ್ ಮತ್ತು ಇರಾನಿನಲ್ಲಿ ಸರ್ವಾಧಿಕಾರಿಗಳಾಗಿದ್ದ ಮಾರ್ಕೋಸ್ ಮತ್ತು ಶಾ ವಿರುದ್ಧ, ಕೊರಿಯದಲ್ಲಿ ಅಮೇರಿಕದ ದುಷ್ಟ ಹಿತಾಸಕ್ತಿಗೋಸ್ಕರ ಕೃತಕವಾಗಿ ಉತ್ತರ-ದಕ್ಷಿಣ ಎಂದು ಮಾಡಿದ್ದ ವಿಭಜನೆಯ ವಿರುದ್ಧ ದೇಶದ ಐಕ್ಯತೆಗಾಗಿ – ಹೀಗೆ ನಾನಾ ಹೋರಾಟಗಳ ಕಾರಣಕ್ಕೆ ತಲೆ ಮರೆಸಿಕೊಂಡ ಅಥವಾ ಗಡೀಪಾರಾದ ಯುವ ಮುಂದಾಳುಗಳೂ ಮೈಸೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರು. ಮೈಸೂರಿನ ಪ್ರಗತಿಪರ ವಲಯ ಇವರೊಂದಿಗೆ ಗಾಢವಾದ ಸೌಹಾರ್ದ ಸಂಬಂಧವನ್ನು ಹೊಂದಿತ್ತು ಹಾಗೂ ಆ ಹೋರಾಟಗಳಿಗೆ ಬೆಂಬಲವಾಗಿ ಮೈಸೂರಿನಲ್ಲೂ ಅನೇಕ ಪ್ರತಿಭಟನಾ ಪ್ರದರ್ಶನ, ಮೆರವಣಿಗೆ ಮುಂತಾದುವು ನಡೆಯುತ್ತಿದ್ದವು.
ಇದನ್ನೂ ಓದಿ ಜೋಳಿಗೆ | ನನ್ನ ಆರೆಸ್ಸೆಸ್ ದಿನಗಳು
1977ರ ನಂತರ ಎಲ್ಲ ಸಂಘಟನೆ-ವೇದಿಕೆಗಳೂ ಮತ್ತೊಮ್ಮೆ ಹುರಿಗೊಂಡು ನಿರಂತರ ಚಟುವಟಿಕೆಗಳಲ್ಲಿ ತೊಡಗಿಕೊಂಡವು. ದಲಿತ ಸಂಘರ್ಷ ಸಮಿತಿಯ ಆರಂಭಿಕ ವರ್ಷಗಳಂತೂ ಬಹುಮಟ್ಟಿಗೆ ರಕ್ತಸಿಕ್ತ ವರ್ಷಗಳಾಗಿದ್ದವು ಎಂದರೆ ತಪ್ಪಿಲ್ಲ. ಮೈಸೂರು, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಊಳಿಗಮಾನ್ಯ ಬಲಾಢ್ಯ ಭೂಮಾಲೀಕ ಶಕ್ತಿಗಳು ಮೂರು-ನಾಲ್ಕು ಮಂದಿ ಮುಂಚೂಣಿ ಕಾರ್ಯಕರ್ತರ ಕೊಲೆ ಯತ್ನ ನಡೆಸಿ ಸಾಯಬಡಿದಿದ್ದರು. ಕೋಲಾರದಲ್ಲಿ ಕುಂಬಾರ ಶೇಷಗಿರಿಯಪ್ಪನ ಕೊಲೆ ಮತ್ತು ಅನಸೂಯಮ್ಮನ ಮೇಲಿನ ಸಾಮೂಹಿಕ ಅತ್ಯಾಚಾರ, ಭದ್ರಾವತಿಯಲ್ಲಿ ಪತ್ರೆ ಸಂಗಪ್ಪನ ಕೊಲೆ, ಶಿವಮೊಗ್ಗ ಜಿಲ್ಲೆಯ ತತ್ತೂರಿನಲ್ಲಿ ಮತ್ತು ಕೋಲಾರದಲ್ಲಿ ದಲಿತರಿಗೆ ಮಲ ತಿನ್ನಿಸಿದ್ದು, ಕೊಪ್ಪಳದ ಕುದುರೆಮೋತಿ ಹಳ್ಳಿಯಲ್ಲಿ ಲಿಂಗಾಯತ ಮಠಾಧಿಪತಿ ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆ ಮಾಡಿಸಿದ್ದು … ಮುಂತಾಗಿ ಲೆಕ್ಕವಿಲ್ಲದಷ್ಟು ದೌರ್ಜನ್ಯಗಳ ವಿರುದ್ಧ ಸಾಲುಸಾಲು ಹೋರಾಟಗಳು ನಡೆದವು.
ಜೊತೆಗೆ ಕಾರ್ಮಿಕರ ಹೋರಾಟಗಳು, ಗೋಕಾಕ್ ಚಳವಳಿ ಮತ್ತಿತರ ಕನ್ನಡಪರ ಚಳವಳಿಗಳು, ವಿದ್ಯಾರ್ಥಿ ಹೋರಾಟಗಳು ಇವೆಲ್ಲದರಿಂದಾಗಿ 1970ರ ದಶಕ ಮತ್ತು 1980ರ ದಶಕದ ಆರಂಭದ ಕಾಲಘಟ್ಟದ ಮೈಸೂರಿನ ವಾತಾವರಣ ಒಂದು ರೀತಿಯಲ್ಲಿ ಚಳವಳಿಗಳ ಕುಲುಮೆಯಾಗಿತ್ತು ಎಂದರೆ ತಪ್ಪಾಗದು. ಆ ಅವಧಿಯ ನಿರಂತರವಾದ ಪ್ರಜಾಸತ್ತಾತ್ಮಕ, ಪ್ರಗತಿಪರ ಚಟುವಟಿಕೆ-ಚಳವಳಿ-ಹೋರಾಟಗಳ ಈ ಕುಲುಮೆ ನನ್ನನ್ನು ಹೋರಾಟಗಳ ನಿಟ್ಟಿನಲ್ಲಿ ಒಂದು ಮಟ್ಟಿಗೆ ಪಳಗಿಸಿತು ಎನ್ನಬಹುದು.

ಸಿರಿಮನೆ ನಾಗರಾಜ್
ಲೇಖಕ, ಸಾಮಾಜಿಕ ಚಿಂತಕ
ಹಳೆಯ ನೆನಪುಗಳನ್ನು ಚೆನ್ನಾಗಿ ಬರೆದಿದ್ದೀರಿ. ಆದರೂ ಇಂದಿರಾಗಾಂಧಿ ಅವರ ಭೂಸುಧಾರಣೆ ಹಾಗೂ ಎಲ್ಲರಿಗೂ ಶಿಕ್ಷಣ ನೀತಿಯಿಂದ ಮುಂದೆವರಿದ ಜನ ಇತ್ತಿಚೆಗೆ ಎಲ್ಲವನ್ನು ಮರೆತು ಬಿಟ್ಟಂಗೆ ಇದೆ.
ನನ್ನ RSS ನ ದಿನಗಳು ಈ ಶೀರ್ಷಿಕೆ ನಿಮ್ಮ ವಿಚಾರದ ಪ್ರಚಾರಕ್ಕೋಸ್ಕರ ಉಪಯೋಗಿಸಿದ್ದು ಎಸ್ಟು ಸರಿ. ಜೀವ ನೀಡಿದ ತಂದೆಯನ್ನೇ ಅವಮಾಣಿಸಿದಂತೆ ಅಲ್ವಾ
ಹೇಗಾದರೂ ಮಾಡಿ, ಹಿಂದೂ ಚಿಂತನೆಯ RSS ನ್ನು ಎಳೆದು ತಂದು, ಅದಕ್ಕೊಂದು ಖಳನಾಯಕನ ಪಟ್ಟ ಕಟ್ಟಿ ನಿಮ್ಮ ಚಪಲ ತೀರಿಸಿಕೊಳ್ಳಬೇಕು. ನಿಮಗೆ ಬೇರೆ ಕೆಲಸ ಇಲ್ಲವೇ. ಮೊನ್ನೆ ಪೆಹೇಲ್ಗಮ್ ನಲ್ಲಿ ಶೂಟ್ ಮಾಡಿದ್ದೂ ನೀನು ಹಿಂದುವಾಗಿ ಅಂತ ಕೇಳಿ, ನೀನು ಕಮಿನಿಸ್ಟ್ ಅಂತ ಅಲ್ಲ. ಥೂ ನಿಮ್ಮ ಜನ್ಮಕ್ಕೆ, ಇನ್ನೊಂದು 50 ವರ್ಷ ಆಗ್ಲಿ ನಿಮ್ಮ ತಲೆಮಾರು ಹೇಗೆ ನರಕ ಅನುಭವಿಸುತ್ತೆ ಅಂತ
ಸೂಪರ್ ಅಣ್ತಮ್ಮ ಇವರೆಲ್ಲಾ ಯಾವ್ rss ಗು ಹೋಗಿರಲ್ಲ ಅಲ್ಲಿ ಇಲ್ಲಿ ಕೇಳಿ ಸ್ವಲ್ಪ ತಿಳ್ಕೊಂಡು ನಾನೇ ಹೋಗಿದ್ದೆ ನಾನೇ ಬಿಟ್ಬಿಟ್ಟೆ ಅಂಥೇಳಿ ಬಿಟ್ಟಿ ಬಿಲ್ಡಪ್ ತಗೋಳ್ಳೋ ದೇಶದ್ರೋಹಿ ಚೀನಾ ಕುಲದವರು. ನಾವು ಅಪ್ಪನಿಗೆ ಹುಟ್ಟಿಲ್ಲ ತೀಟೆಗೆ ಹುಟ್ಟಿದೋರು ಅನ್ನೋ ಗುಣ ಗುಲಾಮ ಬಡ್ಡಿ ಮಕ್ಕಳದು.
ಹಿಂದೂ ಹಿಂದುತ್ವದ ಹುಳ ಶೂದ್ರರ ತಲೆಗೆ ತುಂಬಿ ಬ್ರಾಹ್ಮಣರಿಗೆ ಅಧಿಕಾರ ಮತ್ತು ಆಪ್ತ ಕಾರ್ಪೋರೇಟ್ ಗೆಳೆಯರ ಬೊಕ್ಕಸ ತುಂಬಿಸಲ ಗುಪ್ತ ಕಾರ್ಯಸೂಚಿ ಸಾಧಿಸಲು ದೇಶಭಕ್ತಿ ರಾಷ್ಟ್ರವಾದದ ನಾಟಕ ಆಡುವ ಚಡ್ಡಿಗಳು
ಇದಿನಬ್ಬ, ಕೆದಿಲಾಯರ ಬಗ್ಗೆಯೂ ಹೇಳಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು….
ಶೃಂಗೇರಿಯಲ್ಲೆ ನಿಮ್ಮ ತತ್ವಸಿದ್ಧಾಂತಗಳನ್ನು ಸಾಮಾನ್ಯ ಜನರಿಗೆ ಹಾಗು ಯುವಕರಿಗೆ ಮುಟ್ಟಿಸಲು ನೀವು ವಿಫಲವಾಗಿದ್ದೀರಿ ಎಂದು ಅನಿಸುವುದಿಲ್ಲವೇ.
ಹಿಂದೂ ಸನಾತನ ಧರ್ಮದಿಂದ ಎಲ್ಲೂ ಕೇಡು ಸಂಭವಿಸಿಲ್ಲ!
ಮನುಷ್ಯರ ರೀತಿ- ನೀತಿಗಳೆ ಸರಿಯಿಲ್ಲದಿರುವಾಗ ಧರ್ಮವನ್ನೇಕೆ ಹಿಯಾಳಿಸುತ್ತೀರಿ.?
ಸಂಪೂರ್ಣ ಲೇಖನ ಕಮ್ಯುನಿಸ್ಟ್ ವಿಚಾರವಾಗಿದೆ. ಕೇವಲ ಶೀರ್ಷಿಕೆ ಮಾತ್ರ ಆರೆಸಸ್ ಕಾಪ್ಷನ್ ಇದೆ. ನಿಮಗೆ ಆರೆಸಸ್ ಬಗ್ಗೆ ತಲೆ ಬುಡ ಗೊತ್ತಿಲ್ಲದೆ ಕೇವಲ ಪ್ರಚಾರ ಹಿಂದೆ ಬಿದ್ದಿದ್ದೀರಾ ಅಂತ ನಿಮ್ಮ ಲೇಖನ ಓದಿ ಗೊತ್ತಾಯಿತು. ಕಮ್ಯುನಿಸ್ಟ್ ವಿಚಾರ ಬರೆದರೆ ಯಾರು ಕೂಡ ಮೂಸಿ ನೋಡೋಲ್ಲ ಅಂತ ನಿಮಗೆ ಗೊತ್ತಿದೆ ಅದಕ್ಕಾಗಿ ಆರೆಸಸ್ ಬಗ್ಗೆ ಬರೆದರೆ ಜನ ಓದುತ್ತಾರೆ ಅಂತ ಶೀರ್ಷಿಕೆ ಬಳಸಿದ್ದೀರಾ.
ಕಮ್ಯುನಿಸಂ ಎಲ್ಲ ಸಮಸ್ಯೆಗಳಿಗೆ ಪರಿಹಾರವೆ ?
ನಿನ್ನ ಮನಸ್ಸು ಚಂಚಲ RSS ಬಿಟ್ಟೆ, ಮಾವೋ ಬಿಟ್ಟೆ,
ಇದರಲ್ಲಿ ಅವರವರದ್ದು ಒಂತರ ಸ್ವಾರ್ಥ ಮಾವೋ ಗಳದ್ದು ಯಾರಿಗೋ ಸಹಾಯ್ ಮಾಡ್ತೀವಿ ಅನ್ಕೊಂಡು, ಮಾಡಬಾರದ ಪಾಪ ಕಾರ್ಯಗಳನ್ನು ಮಾಡ್ತಾರೆ.
RSS ಒಳ್ಳೆಯ ಕೆಲಸ ಮಾಡ್ತಾರೆ ಹಿಂದೂತ್ವ ಪಕ್ಷಕ್ಕೆ ಸಹಾಯ ಮಾಡ್ತಾರೆ ಹಿಂದುಳಿದವರಿಗೆ ವಿಶೇಷ ಸಹಾಯ ಮಾಡೋದಿಲ್ಲ ಅನ್ನೋದು ನಿನ್ನ ಆರೋಪ.