ಈ ಬಾರಿಯ ಚುನಾವಣೆಗೆ ಹೊಸ ಇವಿಎಂ, ವಿವಿಪ್ಯಾಟ್ ಬಳಕೆ : ಮನೋಜ್ ಕುಮಾರ್​ ಮೀನಾ

Date:

Advertisements
  • ಈ ಬಾರಿ ಬ್ಯಾಲೆಟ್ ಪೇಪರ್‌ನಲ್ಲಿ ಅಭ್ಯರ್ಥಿಗಳ ಭಾವಚಿತ್ರ; ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ
  • ನೀತಿ ಸಂಹಿತೆ ಜಾರಿ; ರಾಜಕಾರಣಿಗಳು ಸರ್ಕಾರಿ ಕಾರ್ಯಕ್ರಮ ಆಯೋಜಿಸುವಂತಿಲ್ಲ: ಮನೋಜ್ ಕುಮಾರ್​ ಮೀನಾ

ಇಂದಿನಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಮೇ 10ರಂದು 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್​ 11ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್​ ಮೀನಾ ತಿಳಿಸಿದರು.

ಕೇಂದ್ರ ಚುನಾವಣಾ ಆಯೋಗದಿಂದ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ರಾಜ್ಯ ಮುಖ್ಯಚುನಾವಣಾಧಿಕಾರಿ ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಈ ಕ್ಷಣದಿಂದಲೇ ರಾಜಕಾರಣಿಗಳು ಯಾವುದೇ ಸರ್ಕಾರಿ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಯಾವುದೇ ಅಧಿಕಾರಿಗಳ ಸಭೆ ನಡೆಸಲು ರಾಜಕಾರಣಿಗಳಿಗೆ ಅವಕಾಶವಿಲ್ಲ. ಯಾವುದೇ ಕಡತಕ್ಕೂ ಅವರು ಸಹಿ ಹಾಕುವಂತಿಲ್ಲ. ಹಾಗೆಯೇ ಹೊಸ ಕಾರ್ಯಕ್ರಮ ಅನುಷ್ಠಾನ ಮಾಡುವಂತಿಲ್ಲ” ಎಂದರು.

Advertisements

“ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಕೋವಿಡ್ ಬಾಧಿತರಿಗೆ ಪ್ರತ್ಯೇಕ ಮತಗಟ್ಟೆ ಇರಲಿದೆ. ಹಾಗೆಯೇ 80 ವರ್ಷ ಮೇಲ್ಪಟ್ಟವರು, ವಿಶೇಷ ಚೇತನರಿಗೆ ಮನೆಯಿಂದಲೇ ಗೌಪ್ಯ ಮತದಾನ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಮೇ 10 ಬರೀ ಮತದಾನ ದಿನವಲ್ಲ; ಭ್ರಷ್ಟಾಚಾರ ನಿರ್ಮೂಲನಾ ದಿನ: ಡಿ ಕೆ ಶಿವಕುಮಾರ್‌

“ಮನೆಯಿಂದ ಮತ ಹಾಕುವವರಿಗೆ ಫಾರಂ 12ರಡಿ ಅನುಮತಿ ನೀಡಲಾಗಿದೆ. ವಿಕಲಚೇತನರು ಇರುವ ಮನೆಗೆ ಚುನಾವಣಾ ಸಿಬ್ಬಂದಿಯೇ ತೆರಳಲಿದ್ದಾರೆ. ಆ ಸಿಬ್ಬಂದಿ ಜತೆ ಪಕ್ಷಗಳ ಪ್ರತಿನಿಧಿಗಳು ಕೂಡ ಇರುತ್ತಾರೆ. ಆದರೆ, ಮತದಾನದ ಗೌಪ್ಯತೆ ಕಾಪಾಡಲಾಗುತ್ತೆ” ಎಂದು ವಿವರಿಸಿದರು.

ಹೊಸ ಇವಿಎಂ, ವಿವಿಪ್ಯಾಟ್

“ಹೈದ್ರಾಬಾದ್ ನಿಂದ ಹೊಸ ಇವಿಎಂ, ವಿವಿಪ್ಯಾಟ್ ಬಂದಿವೆ. ಯಾವ ಚುನಾವಣೆಯಲ್ಲೂ ಇವನ್ನು ಬಳಸಿಲ್ಲ. ಮೊದಲ ಬಾರಿಗೆ ಕರ್ನಾಟಕದಲ್ಲಿ ಇವುಗಳನ್ನು ಬಳಸಲಾಗುತ್ತಿದೆ. ಈ ಬಾರಿ ಇವಿಎಂ ಬ್ಯಾಲೆಟ್ ಪೇಪರ್‌ನಲ್ಲಿ ಅಭ್ಯರ್ಥಿಗಳ ಭಾವಚಿತ್ರವಿರಲಿದೆ. ನೋಟಾ ಆಯ್ಕೆಯ ವ್ಯವಸ್ಥೆ ಎಂದಿನಂತೆ ಇರಲಿದೆ” ಎಂದು ತಿಳಿಸಿದರು.

“ಮತಗಟ್ಟೆಗಳಲ್ಲಿ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. 3 ಲಕ್ಷ ಸಿಬ್ಬಂದಿ ಚುನಾವಣೆ ಕಾರ್ಯ ನಿರ್ವಹಿಸಲಿದ್ದಾರೆ. ಅವರೆಲ್ಲರಿಗೂ ಈಗಾಗಲೇ ತರಬೇತಿ ಕೊಡಲಾಗಿದೆ. 89 ಸಾವಿರ ವಿವಿ ಪ್ಯಾಟ್ ಗಳು ಬಳಕೆಯಾಗುತ್ತಿವೆ. 1 ಲಕ್ಷ 834 ಸೆಕ್ಸ್ ವರ್ಕರ್ಸ್ ರಾಜ್ಯದಲ್ಲಿದ್ದಾರೆ. ಅವರನ್ನು ಮತ ಪಟ್ಟಿಗೆ ಸೇರಿಸಿದ್ದೇವೆ. ಬೆಂಗಳೂರು ದಕ್ಷಿಣ ಕ್ಷೇತ್ರ ದೊಡ್ಡ ಕ್ಷೇತ್ರ. 6 ಲಕ್ಷ 91 ಸಾವಿರ ಮತದಾರರು ಅಲ್ಲಿದ್ದಾರೆ. ಶೃಂಗೇರಿ ಅತಿ ಕಡಿಮೆ ಮತದಾರರಿರುವ ಕ್ಷೇತ್ರ. ಬೆಳಗಾವಿಯಲ್ಲಿ ಅತಿ ಹೆಚ್ಚು ಮತಗಟ್ಟೆಗಳಿವೆ. ಈ ಬಾರಿ ರಾಜ್ಯ ಮತದಾರರ ಪಟ್ಟಿಗೆ 3,021 ಅನಿವಾಸಿ ಭಾರತೀಯರ ಹೆಸರು ಸೇರ್ಪಡೆ ಮಾಡಲಾಗಿದೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X