ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ಮಂಗಳವಾರ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನೆರ್ತಿ ಗ್ರಾಮದ ಹೊರಹೊಲಯದಲ್ಲಿ ನಡೆದಿದೆ.
18 ವರ್ಷದ ಮೃತಪಟ್ಟಿರುವ ಮೈಲಾರಪ್ಪ ಉಣಕಲ್ ಆತನ ಗೆಳೆಯನ ಜೊತೆಗೂಡಿ ಹಿರೇನೆರ್ತಿ ಗ್ರಾಮದ ಹೊರಹೊಲಯದ ಕೆರೆಯಲ್ಲಿ ಎತ್ತುಗಳ ಮೈ ತೊಳೆಯಲು ಹೋದಾಗ; ಸಿಡಿಲು ಬಿಡಿದ ಪರಿಣಾಮ ಮೈಲಾರಪ್ಪ ಸ್ಥಳದಲ್ಲೇ ಮೃತಪಟ್ಟುದ್ದು, ಆತನ ಜೊತೆಗಿದ್ದ ಮಂಜುನಾಥ ನಾಯ್ಕನನ್ನು ಕೂಡಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಯುವಕ ಮೂಲತಃ ಹಿರೆಕರಗುಣಿ ಗ್ರಾಮದ. ನಿವಾಸಿಯಾಗಿದ್ದು, ರಜಾದಿನಕ್ಕೆ ಅಜ್ಜನ ಮನೆಗೆ ಬಂದಿದ್ದ ಎಂದು ಹೇಳಲಾಗಿದೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ದಂಡಾಧಿಕಾರಿ ರಾಜು ಮಾವಕರ ಮೃತ ಯುವಕನ ಕುಟುಂಬಕ್ಕೆ 5ಲಕ್ಷ ಪರಿಹಾರ ನೀಡುವ ಭರವಸೆ ನೀಡಿದರು. ಮತ್ತು ವಿಪರೀತ ಮಳೆ ಇರುವ ಕಾರಣ; ಆದಷ್ಟು ಸಾರ್ವಜನಿಕರು ಮನೆಯಿಂದ ಹೊರಗೆ ಬರುವುದನ್ನು ತಪ್ಪಿಸಬೇಕು ಎಂದರು.