ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದಲ್ಲದೆ, ತಗ್ಗು ಪ್ರದೇಶದ ಹಲವು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ರಾಜಕಾಲುವೆಗಳು ತುಂಬಿದವು, ನೂರಾರು ವಾಹನಗಳು ಕೊಚ್ಚಿ ಹೋದ ಮತ್ತು ಮುಳುಗಡೆಯಾದ ವರದಿಗಳಾದವು. ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು ಅವಾಂತರಗಳು ಸೃಷ್ಟಿಯಾದವು. ನಗರದ ಬಹುತೇಕ ಕೆರೆಗಳು ತುಂಬಿದವು, ಸಾಧಾರಣ ದಿನಗಳಲ್ಲೇ ಅಸ್ತವ್ಯಸ್ತತೆಗೆ ಹೆಸರಾದ ಬೆಂಗಳೂರು ವಾಹನ ಸಂಚಾರ ಕುಸಿದೇ ಹೋಗಿತ್ತು. ಪರಿಹಾರ ತಂಡಗಳು ಹಲವೆಡೆಗಳಲ್ಲಿ ದೋಣಿಗಳನ್ನು ಬಳಸಿ ಸ್ಥಳೀಯ ನಿವಾಸಿಗಳಿಗೆ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದವು.
ಒಂದೇ ಮಳೆಗೆ ಬೆಂಗಳೂರು ನಗರದ ಜನಜೀವನ ಅಸ್ತವ್ಯಸ್ತವಾದ ಕಾರಣ ಸಾಮಾಜಿಕ ಜಾಲತಾಣ ಬಳಕೆದಾರರು ಬೆಂಗಳೂರಿನ ಸ್ಥಿತಿಯನ್ನು ವಿವಿಧ ರೀತಿಯಲ್ಲಿ ಟ್ರೋಲ್ ಮಾಡಿದ್ದಾರೆ.
ʼಈಗ ಬೆಂಗಳೂರಿನಲ್ಲಿ — ಏರ್‌ಬಿಎನ್‌ಬಿ ಚಿಹ್ನೆಗಳಲ್ಲಿ: ಭಾರತದ ವೆನಿಸ್‌ಗೆ ಸುಸ್ವಾಗತʼ ಎಂದು ಟ್ರೋಲ್ ಆಗಿದೆ.
ಉತ್ತರ ಇಟಲಿಯ ವೆನೆಟೊ ಪ್ರದೇಶದ ರಾಜಧಾನಿಯಾದ ವೆನಿಸ್, ಆಡ್ರಿಯಾಟಿಕ್ ಸಮುದ್ರದಲ್ಲಿನ ಒಂದು ಲಗೂನ್‌ನಲ್ಲಿರುವ 100 ಕ್ಕೂ ಹೆಚ್ಚು ಸಣ್ಣ ದ್ವೀಪಗಳಲ್ಲಿ ನಿರ್ಮಿಸಲ್ಪಟ್ಟಿದೆ. ಇದೀಗ ಬೆಂಗಳೂರು ಮಳೆ ನೀರಿನಿಂದ ತುಂಬಿದ ಕಾರಣ ನಗರವನ್ನು ವೆನಿಸ್ ಪಟ್ಟಣಕ್ಕೆ ಹೋಲಿಸಿ ಸಾಮಾಜಿಕ ಜಲಾತಾಣದಲ್ಲಿ ಟ್ರೋಲ್ ಮಾಡಿದ್ದಾರೆ.
Bangalore right now — in Airbnb icons:
— Soumya.designᅠ (@soumya_design) May 20, 2025
🛵💼 -> 🚣♂️🌧️
☕ -> ☔
🏙️ -> 🌊
Welcome to the Venice of India.#BangaloreRains #PeakBangalore #BLRLife pic.twitter.com/QqFyLRWFo6
ಒಂದು ಮಳೆ ಬಂದರೆ ಕೋರಮಂಗಲ ವೆನಿಸ್ ಆಗಿ ಬದಲಾಗುತ್ತದೆ.
“ಬೆಂಗಳೂರಿಗೆ ಸ್ವಾಗತ.
ಕ್ಲೌಡ್ ತಂತ್ರಜ್ಞಾನ ಎಲ್ಲಿ ಕೆಲಸ ಮಾಡುತ್ತದೆ, ಆದರೆ ಒಂದು ಮೋಡ ಸಿಡಿದರೆ ಇಡೀ ನಗರ ಬೆಳ್ಳಂದೂರು ಕೆರೆಯಂತಾಗುತ್ತದೆ. ಒಂದು ಮಳೆ ಬಂದರೆ ಕೋರಮಂಗಲ ವೆನಿಸ್ ಆಗಿ ಬದಲಾಗುತ್ತದೆ. ವೈಟ್‌ಫೀಲ್ಡ್ ನಿವಾಸಿಗಳು ಕೆಲಸಕ್ಕೆ ತೆರಳಲು ಈಜುವುದಕ್ಕೆ ಪ್ರಾರಂಭಿಸುತ್ತಾರೆ. ಆಟೋಗಳು ಕಾಗದದ ದೋಣಿಗಳಂತೆ ತೇಲಲು ಪ್ರಾರಂಭಿಸುತ್ತವೆ” ಎಂದು ಟ್ರೋಲ್ ಮಾಡಿದ್ದಾರೆ. ಇವರೂ ಕೂಡ ಬೆಂಗಳೂರು ನಗರವನ್ನು ವೆನಿಸ್ ಪಟ್ಟಣಕ್ಕೆ ಹೋಲಿಕೆ ಮಾಡಿದ್ದಾರೆ.
Welcome to #Bengaluru .
— KulaGuru (@KulaguruK) May 20, 2025
Where the cloud tech works, but one cloud burst and the whole city becomes Bellandur Lake. 🌧️
One rain and Koramangala turns into Venice. Whitefield residents start swimming to work. Autos start floating like paper boats. #BangaloreRains #BBMPFail + pic.twitter.com/wh9ndZ0QIo
ಏನ್ ಗುರು ಮುಂಗಾರು ಹೊಸದಾ
ಮಳೆನೀರಿನ ಚರಂಡಿಗಳು ಮುಚ್ಚಿಹೋಗಿವೆ.
ಕೆರೆಗಳು ಬಡಾವಣೆಗಳಾಗಿ ಮಾರ್ಪಟ್ಟಿವೆ.
ರಸ್ತೆಗಳು ಮತ್ತೆ ಅಗೆಯುವ ಮೊದಲು 3 ದಿನಗಳು ಅಸ್ತಿತ್ವದಲ್ಲಿರುತ್ತವೆ.
ಸಂಚಾರ, ಪಾರ್ಕಿಂಗ್ ಸ್ಥಳ, ಪಾದಚಾರಿ ಮಾರ್ಗಗಳು ಅಸ್ತವ್ಯಸ್ತವಾಗುತ್ತವೆ. ಒಬ್ಬರ ಮೇಲೊಬ್ಬರು ಹೇಳಿಕೊಂಡು, ಅನಿರೀಕ್ಷಿತ ಮಳೆ ಎಂದು ದೂರುತ್ತಾರೆ. ಏನ್ ಗುರು ಮುಂಗಾರು ಹೊಸದಾ ನಿಮಗೆ, ಪ್ರತಿ ವರ್ಷ ಇರುತ್ತಲ್ಲವೇ ಎನ್ನುವ ಮೂಲಕ ಉಬರ್ ಹಡಗಿನ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಟ್ರೋಲ್ ಮಾಡಿದ್ದಾರೆ.
Stormwater drains? Blocked.
— KulaGuru (@KulaguruK) May 20, 2025
Lakes? Turned into layouts.
Roads? Exist for 3 days before being dug up again.
Traffic? Parking lot.
Footpaths? LOL.
Welcome to Smart City, da.
+#SwalpaAdjustMaadi #SiliconValleyOfPotholes pic.twitter.com/3Xl0pJYIpU
ವರುಣ ದೇವ please chill ಎನ್ನುವ ಮೂಲಕ ಬೆಂಗಳೂರು ನಗರದ ಏರಿಯಾಗಳನ್ನು ಅಣಕಿಸುವ ಮೂಲಕ ಟ್ರೋಲ್ ಮಾಡಿದ್ದಾರೆ.
#BangaloreRains #bescom
— 𝐆𝐀𝐆𝐀𝐍𝐃𝐄𝐄𝐏 𝐒𝐈𝐍𝐆𝐇 (@gaganoic) May 26, 2020
Single drop of rain in Bangalore.
Electricity: pic.twitter.com/7QLaNl1a8z

ಈ ಪರಿಸ್ಥಿತಿಯನ್ನು ಲೇವಡಿ ಮಾಡುವ ರೀತಿಯಲ್ಲಿ, ಊಬರ್ ಕಂಪನಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ “ಟೈಟಾನಿಕ್ ಬೋಟ್” ಸೇವೆಯ ಫೋಟೋವನ್ನು ಹಂಚಿಕೊಂಡಿದೆ. ಈ ಪೋಸ್ಟ್‌ನಲ್ಲಿ, “ಒಂದು ನಿಮಿಷದಲ್ಲಿ ಟೈಟಾನಿಕ್ ಬೋಟ್ ಸೇವೆ ಲಭ್ಯವಿದೆ – ಕೇವಲ ₹149ಕ್ಕೆ!” ಎಂಬ ವ್ಯಂಗ್ಯಾತ್ಮಕ ಸಂದೇಶವಿದೆ. ಈ ಮೂಲಕ, ಉಬರ್ ಬೆಂಗಳೂರಿನ ರಸ್ತೆಗಳಲ್ಲಿನ ಜಲಾವೃತ ಸ್ಥಿತಿಯನ್ನು ಹಾಸ್ಯಾತ್ಮಕವಾಗಿ ಚಿತ್ರಿಸಿದೆ.

ಅಲ್ಲದೆ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಪ್ರಕಟಿಸಿರುವ ಜೆಡಿಎಸ್, “ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಬೆಂಗಳೂರಿನ ನಾಗರಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಬೆಂಗಳೂರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ. ಇದನ್ನು ಪ್ರಶ್ನೆ ಮಾಡಿದರೆ ಅವರು, ಮನೆ ಸರಿಯಾಗಿ ಕಟ್ಟಿಲ್ಲ ಎಂದು ಉಡಾಫೆ ಮಾತು ಆಡುತ್ತಾರೆ. ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾಗಲು ನಾಲಾಯಕ್” ಎಂದು ಜೆಡಿಎಸ್ ಟೀಕಿಸಿದೆ.
ಪ್ರತಿ ಮಳೆಗಾಲದಂತೆ ಈ ಮಳೆಗಾಲದಲ್ಲೂ ಬಿಬಿಎಂಪಿಯ ಕಾರ್ಯ ಕ್ಷಮತೆಯಲ್ಲಿ ಸ್ವಲ್ಪವೂ ಸುಧಾರಣೆ ಕಂಡುಬಂದಿಲ್ಲ. ಸರ್ಕಾರಗಳು ಬದಲಾದರೂ ಮಳೆಗಾಲದಲ್ಲಿ ಬೆಂಗಳೂರಿಗರ ಪಡಿಪಾಟಲು ಬಗೆಹರಿದಿಲ್ಲ.
ಘಟನೆ ಹಿನ್ನೆಲೆ
ಬೆಂಗಳೂರಿನ ಕಾವೇರಿ ನಗರ, ಸಂಪಂಗಿ ರಾಮನಗರ, ಮೆಜೆಸ್ಟಿಕ್, ಶಾಂತಿನಗರ, ರಿಚಂಡ್ ಸರ್ಕಲ್, ಕಾರ್ಪೊರೇಷನ್ ವೃತ್ತ, ಜಯನಗರ, ಕೆ ಆರ್ ಮಾರ್ಕೆಟ್, ಚಾಮರಾಜಪೇಟೆ, ವಿಜಯನಗರ, ಚಂದ್ರಾಲೇಔಟ್ ರಾಜಾಜಿನಗರ, ಕಾಮಾಕ್ಷಿಪಾಳ್ಯ ಸುಂಕದಕಟ್ಟೆ, ನಾಗರಬಾವಿ, ಆರ್ ಆರ್ ನಗರ, ನಾಯಂಡಹಳ್ಳಿ, ಯಶವಂತಪುರ, ಪೀಣ್ಯ ಬಿಟಿಎಂ ಲೇಔಟ್, ಮೈಕೋ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿತ್ತು.
ಮಾರತ್ತಹಳ್ಳಿಯ ದೀಪ ನರ್ಸಿಂಗ್ ಹೋಮ್, ಚಿನ್ನಪ್ಪನಹಳ್ಳಿ 5ನೇ ಕ್ರಾಸ್, ಪಣತ್ತೂರ್ ರೈಲ್ವೆ ಕೆಳಸೇತುವೆ, ಗ್ರೀನ್ ಹುಡ್, ಇಬ್ಬಲೂರು ಜಂಕ್ಷನ್, ಬಾಲಾಜಿ ಲೇಔಟ್-ಕೊತ್ತನೂರು, ಎ ನಾರಾಯಣಪುರದ ಕೃಷ್ಣ ನಗರ, ಸುನೀಲ್ ಲೇಔಟ್, ಹರಳೂರು, ಬಿಎಸ್‌ಪಿ ಲೇಔಟ್‌ನ ಕಸವನಹಳ್ಳಿ ಕಡೆಗಳಲ್ಲಿ ರಸ್ತೆಗಳ ಮಲೆ ನೀರು ತುಂಬಿದ್ದು, ಮನೆಗಳಿಗೂ ನೀರು ನುಗ್ಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯಲ್ಲಿ ಟ್ರೋಲ್ ಆಗಿದೆ.