ಸರ್ವಪಕ್ಷ ನಿಯೋಗ ಎಂಬುದು ಮೋದಿ ಸರ್ಕಾರದ ‘ಸಾಮೂಹಿಕ ಗೊಂದಲ ಸೃಷ್ಟಿಸುವ ಆಯುಧ’

Date:

Advertisements

ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ತನ್ನ ನಿಲುವು ಮತ್ತು ಭಾರತದ ಪ್ರಜಾಪ್ರಭುತ್ವ ತತ್ವಗಳನ್ನು ಮಿತ್ರ ರಾಷ್ಟ್ರಗಳಿಗೆ ಮನದಟ್ಟು ಮಾಡಿಕೊಡಲು ಕೇಂದ್ರ ಸರ್ಕಾರವು 7 ಸರ್ವಪಕ್ಷ ನಿಯೋಗಗಳನ್ನು ಕಳಿಸುತ್ತಿದೆ. ಈ ರಾಜತಾಂತ್ರಿಕ ನಿಯೋಗಗಳು ಮೋದಿ ಸರ್ಕಾರದ ‘ಸಾಮೂಹಿಕ ಗೊಂದಲದ ಆಯುಧ’ (ಡಬ್ಲ್ಯೂಎಂಡಿ)ದ ಭಾಗವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಇತ್ತೀಚೆಗೆ, ಪಹಲ್ಗಾಮ್ ದಾಳಿಯಿಂದ ಉಂಟಾದ ಭಾರತ-ಪಾಕ್ ಸಂಘರ್ಷದ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು, ಕದನ ವಿರಾಮ ಘೋಷಣೆಗೆ ತಮ್ಮದೇ ಪಾತ್ರವೆಂದು ಹೇಳಿಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಹೇಳಿಕೆಗಳಿಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಆದರೆ, ಈ ವಿಚಾರಗಳಿಂದ ಜನರ ಚಿತ್ತವನ್ನು ಬೇರೆಡೆಗೆ ತಿರುಗಿಸಲು ಮತ್ತು ಗೊಂದಲ ಸೃಷ್ಟಿಸಿಲು ‘ಸರ್ವಪಕ್ಷ ನಿಯೋಗ’ ಎಂಬುದನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

“ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣರಾದ ಭಯೋತ್ಪಾದಕರು ಈ ಹಿಂದೆಯೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೂರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದರು ಎಂಬ ವರದಿಗಳಿವೆ. ಇದು ನಿಜವಾಗಿದ್ದರೆ, ಸರ್ಕಾರವು ಸ್ಪಷ್ಟೀಕರಣ ಕೊಡಬೇಕು. ಏಕೆಂದರೆ, ಭಯೋತ್ಪಾದಕರು ದಾಳಿಗಳಲ್ಲಿ ಭಾಗಿಯಾಗಿಯೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ಹೇಳಿದ್ದಾರೆ.

Advertisements

“ಸಂಸತ್ತಿನ ಅಧಿವೇಶನವನ್ನು ಕರೆಯಲು ಪ್ರಧಾನಿ ಮೋದಿ ನಿರಾಕರಿಸುತ್ತಿದ್ದಾರೆ. ಇದೇ ಸಮಯದಲ್ಲಿ 50 ಸಂಸದರ ನಿಯೋಗವನ್ನು ವಿವಿಧ ದೇಶಗಳಿಗೆ ಕಳುಹಿಸುವುದನ್ನು ಮುಂದುವರಿಸಿದ್ದಾರೆ. ಇದೆಲ್ಲವೂ ದೇಶೀಯ ದೃಷ್ಟಿಕೋನದಲ್ಲಿ ಅರ್ಥಹೀನ” ಎಂದು ರಮೇಶ್ ಹೇಳಿದ್ದಾರೆ.

“ಈ ನಿಯೋಗಗಳು ‘ಅರ್ಥಹೀನ ಆಪ್ಟಿಕಲ್ ಕೆಲಸಗಳು’. ಭಾರತ ಮತ್ತು ಪಾಕಿಸ್ತಾನ – ಎರಡೂ ‘ಡಬ್ಲ್ಯೂಎಂಡಿ’ಗಳನ್ನು ಹೊಂದಿವೆ. ಪಾಕಿಸ್ತಾನ ಹೊಂದಿಲ್ಲದ ಒಂದು ಡಬ್ಲ್ಯೂಎಂಡಿಯನ್ನು ಭಾರತ ಹೊಂದಿದೆ. ಅದು, ಸಾಮೂಹಿಕ ವಿಚಲಿತಗೊಳಿಸುವ ಆಯುಧ. ಮೋದಿ ಮೂರು WMD ಗಳನ್ನು ಬಿಡುಗಡೆ ಮಾಡಿದ್ದಾರೆ – 1. ‘ಸಾಮೂಹಿಕ ಮಾನಹಾನಿ ಆಯುಧ’ವನ್ನು ಬಿಜೆಪಿ ಪ್ರಧಾನ ಕಚೇರಿಯಿಂದ ಬಿಡುಗಡೆ ಮಾಡಲಾಗಿದೆ. 2. ‘ಸಾಮೂಹಿಕ ಗಮನ ಬದಲಿಸುವ ಆಯುಧ’ ಹಾಗೂ 3. ‘ಸಾಮೂಹಿಕ ವಿಚಲಿತಗೊಳಿಸುವ (ಗೊಂದಲ) ಆಯುಧ’. ವಿದೇಶಗಳಿಗೆ ಸಂಸದರ ಸರ್ವಪಕ್ಷ ನಿಯೋಗಗಳನ್ನು ಕಳಿಸಿರುವುದು ‘ಡಬ್ಲ್ಯೂಎಂಡಿ’ಯ ಭಾಗವಾಗಿದೆ” ಎಂದು ಅವರು ವಿವರಿಸಿದ್ದಾರೆ.

““ಟ್ರಂಪ್ 11 ದಿನಗಳಲ್ಲಿ ಎಂಟು ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದಲ್ಲಿ ತಮ್ಮದೇ ಪಾತ್ರವಿರುವುದಾಗಿ ಹೇಳಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಪ್ರಧಾನಿಗಳನ್ನು ಸಮಾನವಾಗಿ ಹೊಗಳಿದ್ದಾರೆ. ಇಬ್ಬರನ್ನೂ ಎಲ್ಲ ರೀತಿಯಲ್ಲೂ ಸಮಾನವೆಂದು ಹೇಳಿದ್ದಾರೆ. ಎರಡು ದೇಶಗಳು ಕದನ ವಿರಾಮ ಘೋಷಿಸುವಂತೆ ಮಾಡಲು ಅಮೆರಿಕ ಜೊತೆಗಿನ ವ್ಯಾಪಾರ ವಹಿವಾಟನ್ನು ಅಸ್ತ್ರವಾಗಿ ಬಳಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಅವರ ಹೇಳಿಕೆಗಳನ್ನು ಮೋದಿ ಒಮ್ಮೆಯೂ ತಿರಸ್ಕರಿಸಿಲ್ಲ. ಗಾಢ ಮೌನಕ್ಕೆ ಜಾರಿದ್ದಾರೆ. ಈ ಮೌನ ಯಾಕೆ” ಎಂದು ಪ್ರಶ್ನಿಸಿದ್ದಾರೆ.

“ಟ್ರಂಪ್ ಹೇಳಿಕೆ ಬಗ್ಗೆ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಹಿಂದೆ, ‘ಹೌಡಿ ಮೋದಿ’, ‘ನಮಸ್ತೆ ಟ್ರಂಪ್’ ಎಲ್ಲವೂ ನಡೆದಿದೆ. ಆದರೆ, ಈಗ ಮೋದಿ ಮಾತನಾಡುತ್ತಿಲ್ಲ. ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಒಂದು ಹೆಜ್ಜೆ ಮುಂದೆ ಹೋಗಿ, ಎರಡೂ ದೇಶಗಳ ನಡುವಿನ ಮಾತುಕತೆಗಳು ‘ತಟಸ್ಥ ಸ್ಥಳದಲ್ಲಿ’ ನಡೆಯುತ್ತವೆ ಎನ್ನುತ್ತಿದ್ದಾರೆ. ಇದಕ್ಕೂ ಯಾವುದೇ ಪ್ರತಿಕ್ರಿಯೆಗಳಿಲ್ಲ” ಎಂದು ಅವರು ಆರೋಪಿಸಿದ್ದಾರೆ.

“ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣರಾದ ಭಯೋತ್ಪಾದಕರು ಈ ಹಿಂದೆ ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಮೂರು ಭಯೋತ್ಪಾದಕ ದಾಳಿಗಳಲ್ಲಿಯೂ ಭಾಗಿಯಾಗಿದ್ದಾರೆ ಎಂಬ ಕೆಲವು ಸುದ್ದಿ ವರದಿಗಳಿವೆ. ವರದಿಗಳ ಪ್ರಕಾರ, ಇದೇ ಭಯೋತ್ಪಾದರು 2023ರ ಡಿಸೆಂಬರ್‌ಬಲ್ಲಿ ನಡೆದ ಪೂಂಚ್‌ ಭಯೋತ್ಪಾದಕ ದಾಳಿ, 2024ರ ಅಕ್ಟೋಬರ್‌ನಲ್ಲಿ ನಡೆದ ಗಂಡರ್ಬಾಲ್‌ ದಾಳಿ ಹಾಗೂ ಅದೇ ತಿಂಗಳು ನಡೆದ ಗುಲ್ಮಾರ್ಗ್‌ ದಾಳಿಯಲ್ಲಿ ಭಾಗಿಯಾಗಿದ್ದರು. ಈ ಮೂರು ದಾಳಿಗಳಲ್ಲೂ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರೇ ಭಾಗಿಯಾಗಿದ್ದರು ಎಂಬುದು ನಿಜವಾಗಿದ್ದರೆ, ನಮ್ಮ ಸಂಸದರ ನಿಯೋಗವು ವಿದೇಗಳಲ್ಲಿ ಏನು ಹೇಳುತ್ತದೆ. ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಾದ್ಯಂತ ಆರಾಮವಾಗಿ ಸುತ್ತಾಡುತ್ತಿದ್ದಾರೆ ಎಂದು ಹೇಳುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.

“ಪಹಲ್ಗಾಮ್ ದಾಳಿ ನಡೆದು ಒಂದು ತಿಂಗಳು ಕಳೆದಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಇದ್ದಕ್ಕಿದ್ದಂತೆ ಮತ್ತು ಅನಿರೀಕ್ಷಿತವಾಗಿ ಏಕೆ ನಿಲ್ಲಿಸಲಾಯಿತು ಮತ್ತು ಕಾರ್ಯಾಚರಣೆಯ ಸಂಪೂರ್ಣ ಪರಿಣಾಮಗಳು ಏನು ಎಂಬುದರ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಇದನ್ನು ನಿರ್ಣಯಿಸಲು ಏಕೈಕ ಮಾರ್ಗವೆಂದರೆ, ಕಾರ್ಗಿಲ್ ಸಮಿತಿಯಂತೆ ಈಗಲೂ ಸಮಿತಿ ರಚಿಸಿಬೇಕು. ಪರಿಶೀಲನೆಗಳನ್ನು ನಡೆಸಬೇಕು” ಎಂದು ರಮೇಶ್ ಒತ್ತಾಯಿಸಿದ್ದಾರೆ.

“ಕಾರ್ಗಿಲ್ ಯುದ್ಧ ಮುಗಿದ ಮೂರೇ ದಿನಗಳಲ್ಲಿ (1999ರ ಜುಲೈ 29) ವಾಜಪೇಯಿ ಸರ್ಕಾರ ಕಾರ್ಗಿಲ್ ಪರಿಶೀಲನಾ ಸಮಿತಿಯನ್ನು ರಚಿಸಿತು. ಸಮಿತಿಯು ನೀಡಿದ ವರದಿಯನ್ನು 2000ದ ಫೆಬ್ರವರಿ 23ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು. 1962ರಲ್ಲಿ ಚೀನಾ ಆಕ್ರಮಣದ ಸಮಯದಲ್ಲಿ ನೆಹರು ಅವರು ವಿಶೇಷ ಅಧಿವೇಶನ ಕರೆದಿದ್ದರು. ಅಂತೆಯೇ, ಈಗಲೂ ಮೋದಿ ಸರ್ಕಾರ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪರಿಶೀಲಿಸಲು ಪರಿಶೀಲನಾ ಸಮಿತಿಯನ್ನು ರಚಿಸಬೇಕು ಮತ್ತು ವಿಶೇಷ ಅಧಿವೇಶನವನ್ನು ಕರೆಯಬೇಕು” ಎಂದು ಆಗ್ರಹಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X