ಹೊಸಪೇಟೆ ನಗರದಲ್ಲಿ ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಾಗೂ ಮೂರ್ತಿಯು ಕಟ್ಟೆಯನ್ನು ಅಭಿವೃದ್ಧಿಪಡಿಸಿ ಬಹು ಕಾಲದ ಬೇಡಿಕೆ ಈಡೇರಿಸಿದೆ ಎಂದು ಮೂರ್ತಿಗೆ ಹೂವಿನ ಹಾರ ಹಾಕಿ ಸಂಭ್ರಮದಿಂದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖಂಡರು ಸಂತಸಪಟ್ಟರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಎಪ್ಪತ್ತರ ದಶಕದಲ್ಲಿ ಹೊಸಪೇಟೆ ನಗರಕ್ಕೆ ಆಗಮಿಸಿದಾಗ ಈ ಭಾಗದ ಅಭಿವೃದ್ಧಿಗಾಗಿ ವಿಜಯನಗರ ಉಕ್ಕು ಕಾರ್ಖಾನೆಗೆ ಶಿಲಾನ್ಯಾಸ ಮಾಡಿದ್ದರು.ವಿಜಯನಗರ ಉಕ್ಕು ಕಾರ್ಖಾನೆ ಇಂದು ಜಿಂದಾಲ್ ಉಕ್ಕು ಸಂಸ್ಥೆ ಜೆ.ಎಸ್.ಡಬ್ಲೂ. ಕಾರ್ಖಾನೆಯಾಗಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವುದರಲ್ಲಿ ಹೆಸರಾಗಿದ್ದ ಕಾರಣಕ್ಕೆ ಇದರ ರುವಾರಿಯಾದ ಇಂದಿರಾಗಾಂಧಿಯವರ ಮೂರ್ತಿ ಪ್ರತಿಷ್ಠಾಪನೆ ಆಗುವ ಕನಸು ನನಸಾಯಿತು ಎಂದರು.
ಈ ಬಗ್ಗೆ ಕಾಂಗ್ರೆಸ್ ಮುಖಂಡ ಸೋಮಶೇಖರ್ ಬಣ್ಣದ ಮನೆ ಮಾತನಾಡಿ,ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೊಸಪೇಟೆ ನಗರಕ್ಕೆ ಬಂದು ಉಕ್ಕು ಕಾರ್ಖಾನೆ ಶಿಲಾನ್ಯಾಸ ಮಾಡಿ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಒದಗಿಸಿಕೊಟ್ಟರು.ಅಂದು ಕಟ್ಟಿದ ಮೂರ್ತಿ ಅದು ದುರಸ್ತಿಗೊಂಡಿತ್ತು.ಮತ್ತೆ ಅದನ್ನು ಪುನರ್ ನಿರ್ಮಾಣ ಮಾಡಿ ಐತಿಹಾಸಿಕ ಕಟ್ಟಡವನ್ನು ಇಂದಿರಾ ಗಾಂಧಿ ಅವರ ಮೊಮ್ಮಗ,ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ವಿರೋದ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ,ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ನೀಡಿ ವೀಕ್ಷಿಸಿ ಉದ್ಘಾಟಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಸೀದಿ ಆವರಣದಲ್ಲಿದ್ದ ಅನಧಿಕೃತ ಮನೆ, ಅಂಗಡಿ ತೆರವು
ದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲಿದ್ದಾಗ ದೇಶದ ಜನರಿಗೆ ಇಪ್ಪತ್ತು ಅಂಶಗಳ ಕಾರ್ಯಕ್ರಮ ನೀಡಿ ಉಳುವವನೆ ಭೂಮಿಯ ಒಡೆಯ ಎಂದು ಘೋಷಣೆ ಮಾಡಿ ಹಲವಾರು ಬಡ ಕೃಷಿಕರಿಗೆ ಭೂಮಿ ಸಿಗುವಂತೆ ಮಾಡಿದರು.ಪ್ರಮುಖವಾಗಿ ಸರ್ವರಿಗೂ ಶಿಕ್ಷಣ ಸಿಗುವಂತೆ ಕಡ್ಡಾಯ ಶಿಕ್ಷಣ ಘೋಷಣೆ ಮಾಡಿ ದೇಶದ ಕೊಟ್ಯಾಂತರ ದಲಿತ ಸಮುದಾಯಕ್ಕೆ ಅಕ್ಷರ ಜ್ಞಾನ ನೀಡಿದ ಉಕ್ಕಿನ ಮಹಿಳೆ ಎಂದು ಬಿರುದು ಪಡೆದವರು ಎಂದರು.
ಐತಿಹಾಸಿಕ ಕಟ್ಟಡಕ್ಕೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ , ಶಾಸಕರಾದ ಎಚ್ ಆರ್ ಗವಿಯಪ್ಪ ,ಮಾಜಿ ಶಾಸಕರು ವಿಜಯನಗರ ಜಿಲ್ಲಾ ಡಿಸಿಸಿ ಅಧ್ಯಕ್ಷರಾದ ಶಿರಾಜ್ ಶೇಕ, ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎನ್ ಎಫ್ ಇಮಾಮ್ ನಿಯಾಜಿ ಹಾಗೂ ಇನ್ನಿತರ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.
ಈ ವೇಳೆ ಸೂರ್ಯನರಾಯಣ, ಸಣ್ಣಮಾರೆಪ್ಪ, ಯರ್ರಿಸ್ವಾಮಿ, ವಾಸುದೇವ್, ಇಮ್ತಿಯಾಜ್, ಸಣ್ಣ ಈರಪ್ಪ, ರಾಮಚಂದ್ರ, ವಿನಾಯಕ ಶೆಟ್ಟರ್, ಶಿವಕುಮಾರ್, ಜಯಣ್ಣ ಪಟ್ಟಿ, ಪ್ರಮೋದ್ ಶೆಟ್ಟಿ, ಗಿರೀಶ್,ಪ್ರಕಾಶ್, ಪಂಪಣ್ಣ, ಹನುಮಂತಪ್ಪ, ಸಜ್ಜಾದ್ ಖಾನ್, ಖಾಜ ಹುಸೇನ್ ಸೇರಿದಂತೆ ಇನ್ನಿತರರು ಹಾಜರಿದ್ದರು.
