ಕರ್ನಲ್ ಖುರೇಷಿ ಬಗ್ಗೆ ಸಚಿವ ವಿಜಯ್ ಶಾ ಅವಹೇಳನಕಾರಿ ಹೇಳಿಕೆ; ರಾಷ್ಟ್ರಪತಿಗೆ ನಾಗರಿಕರ ಪತ್ರ

Date:

ಆಪರೇಷನ್ ಸಿಂಧೂರ ಬಳಿಕ ಮಧ್ಯಪ್ರದೇಶದ ಇಬ್ಬರ ಸಚಿವರು ವಿವಾದಾದ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿ ಸಚಿವ ವಿಜಯ್ ಶಾ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರೆ ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಸೇನೆಗೆ ಅವಮಾನ ಮಾಡುವ ಹೇಳಿಕೆ ನೀಡಿದ್ದಾರೆ. ಇವುಗಳ ವಿರುದ್ಧವಾಗಿ ನಾಗರಿಕರ ಗುಂಪೊಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ.

- Advertisement -

ಮಧ್ಯಪ್ರದೇಶದ ಇಬ್ಬರು ಸಚಿವರು ಸೇನೆಗೆ ಅವಮಾನ ಮಾಡಿದ್ದಾರೆ. ಇದು ವಿ‍ಷಾದನೀಯ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಮುರ್ಮು ಅವರಿಗೆ ನಾಗರಿಕರ ಗುಂಪು ಒತ್ತಾಯಿಸಿದೆ. ಮಧ್ಯಪ್ರದೇಶ ಸಚಿವ ವಿಜಯ್ ಶಾ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಅವಹೇಳನಕಾರಿಯಾಗಿ ನೀಡಿರುವ ಹೇಳಿಕೆ ಮತ್ತು ಸೇನೆ, ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಪಾದಗಳಿಗೆ ನಮಸ್ಕರಿಸುತ್ತದೆ ಎಂಬ ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಅವರ ಹೇಳಿಕೆಯನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ, ಖಂಡಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ರಾಜಕೀಯದಲ್ಲಿ ಮಹಿಳೆಯರ ಮೇಲೆ ಗಂಡಾಳ್ವಿಕೆಯ ಸಾಂಸ್ಕೃತಿಕ ರಾಜಕಾರಣ

ರಾಜಕೀಯದ ಮೇಲೆ ಪುರುಷ ಪ್ರಧಾನ ಹಿಡಿತ ಹೇಗೆ ನಿರ್ಮಾಣವಾಯಿತು? ರಾಜಕೀಯವೆಂದರೆ, ಜನರ ಬದುಕಿನ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಾರ್ವಜನಿಕ ಕ್ಷೇತ್ರ. ಆದರೆ ಶತಮಾನಗಳ ಕಾಲ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಅದನ್ನು...

ಸಾಫ್ಟ್‌ವೇರ್ ಕೈಗೊಂಬೆಯಾದ ಚುನಾವಣಾ ವ್ಯವಸ್ಥೆ: ದೆಹಲಿಯಿಂದಲೇ ಇಡೀ ದೇಶದ...

ತಂತ್ರಜ್ಞಾನವು ಚುನಾವಣಾ ಪ್ರಕ್ರಿಯೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಇರಬೇಕೇ ವಿನಃ, ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲು ಅಲ್ಲ. ಒಬ್ಬ ಐಟಿ ಅಧಿಕಾರಿಯ ವಿವೇಚನಾರಹಿತ ನಿರ್ಧಾರಗಳು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಸಾಂಸ್ಥಿಕ ಮೌನವು ಇಡೀ ಚುನಾವಣಾ...

ಇದನ್ನು ಓದಿದ್ದೀರಾ? ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳುಹಿಸಿದ್ದೆವು: ಸಚಿವ ವಿಜಯ್ ಶಾ ವಿವಾದಾತ್ಮಕ ಹೇಳಿಕೆ

ಮಾಜಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ವಿಷ್ಣು ಭಾಗವತ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ವಪ್ಪಲ ಬಾಲಚಂದ್ರನ್ ಸೇರಿದಂತೆ ಇತರರು ಈ ಪತ್ರವನ್ನು ಬರೆದಿದ್ದಾರೆ. ಈ ಅವಮಾನಕಾರಿ ಹೇಳಿಕೆಗೆ ಪ್ರತಿಕ್ರಿಯಿಸುವುದನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ತಮಗೆ ಪತ್ರ ಬರೆಯುತ್ತಿರುವುದಾಗಿ ರಾಷ್ಟ್ರಪತಿಗಳಿಗೆ ನಾಗರಿಕರ ತಂಡ ಈ ಪತ್ರದ ಮೂಲಕ ತಿಳಿಸಿದೆ.

ರಾಷ್ಟ್ರೀಯ ಏಕತೆಯ ಹಿತದೃಷ್ಟಿಯಿಂದ ಇಂತಹ ಸಮಸ್ಯೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿದ್ದಾರೆ. ಇಬ್ಬರು ಸಚಿವರ ಅವಹೇಳನಕಾರಿ ಹೇಳಿಕೆಗಳು ನಮ್ಮ ಸೇನೆಯ ಸಿಬ್ಬಂದಿಯ ನೈತಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದಾಗಿ ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆ ದುರ್ಬಲಗೊಳ್ಳುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಅವರು ಇಡೀ ದೇಶ, ದೇಶದ ಸೇನೆ ಮತ್ತು ಯೋಧರು ಆಪರೇಷನ್ ಸಿಂಧೂರ ನಡೆಸಿದ ಮೋದಿ ಅವರ ಪಾದಗಳಿಗೆ ನಮಸ್ಕರಿಸಬೇಕು ಎಂದು ಹೇಳಿದ್ದರು. ಇನ್ನೊಂದೆಡೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣರಾದವರನ್ನು ಎದುರಿಸಲು “ತಮ್ಮ ಸಮುದಾಯದಿಂದ ಒಬ್ಬ ಸಹೋದರಿಯನ್ನು (ಕರ್ನಲ್ ಖುರೇಷಿ)” ಕಳುಹಿಸುವ ಸಾಂಕೇತಿಕ ಹೆಜ್ಜೆಯನ್ನು ಪ್ರಧಾನಿ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಸಚಿವ ವಿಜಯ್ ಶಾ ಹೇಳಿದ್ದರು. ಈ ಎರಡೂ ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಯಾರಾ ಎನರ್ಜಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ; ಪೆಟ್ರೋಲ್ ₹5, ಡೀಸೆಲ್ ₹3 ದುಬಾರಿ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ಸಂಸ್ಕರಿಸಿದ ಇಂಧನ ಉತ್ಪನ್ನಗಳ ಬೆಲೆ...

ಇನ್‌ಸ್ಟಾಗ್ರಾಮ್ ಚಾಟ್ ವಿವಾಹೇತರ ಸಂಬಂಧಕ್ಕೆ ಪುರಾವೆಯಲ್ಲ: ಅಲಹಾಬಾದ್ ಹೈಕೋರ್ಟ್

ಪತ್ನಿಯು ಮತ್ತೊಬ್ಬ ವ್ಯಕ್ತಿಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಿದ ಸಂಭಾಷಣೆಗಳ ಪ್ರಿಂಟ್‌ಔಟ್‌ಗಳನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು...