ನರೇಗಾ ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ತೆರಳಿ, ಕೆಲಸ ನಿರ್ವಹಿಸುವ ವೇಳೆ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಕುಂಟೆ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿರುವ ಕೂಲಿ ಕಾರ್ಮಿಕ ಗ್ರಾಕೂಸ್ ಸಂಘಟನೆಯ ಕಾರ್ಮಿಕ ಎನ್ನಲಾಗಿದೆ.
ಕೂಲಿ ಕೆಲಸಕ್ಕೆ ತೆರಳಿ ಮೃತಪಟ್ಟ ವ್ಯಕ್ತಿ ಕೆಂಚಪ್ಪ ತಂದೆ ರಾಮಚಂದ್ರಪ್ಪ ತಾಯಿ ಗುರುಸಿದ್ದಮ್ಮ
ಎಂದು ಗುರುತಿಸಲಾಗಿದೆ. ದಿನಾಂಕ 22.5.2025 ರಂದು ಗುರುವಾರ ಬೆಳಿಗ್ಗೆ ಉದ್ಯೋಗ ಖಾತ್ರಿಯಡಿಯಲ್ಲಿ ಕೆರೆ ಹೂಳೆತ್ತುವ ಕೆಲಸಕ್ಕೆ ತೆರಳಿದ್ದಾರೆ. ಕೆಲಸದಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ಕೆಂಚಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಎಂದಿನಂತೆ ಬೆಳಿಗ್ಗೆ ಎದ್ದು ಉದ್ಯೋಗ ಖಾತ್ರಿ ಕೆಲಸಕ್ಕೆ ಹೋದ ವ್ಯಕ್ತಿ ಕೆಂಚಪ್ಪ ಮನೆಗೆ ಹೆಣವಾಗಿ ಬಂದಿದ್ದಾರೆ. ಕುಟುಂಬಕ್ಕೆ ಆಸರೆಯಾಗಿ ಕೆಲಸ ಮಾಡುತ್ತಿದ್ದ ಕೆಂಚಪ್ಪ ಇನ್ನಿಲ್ಲ ಎನ್ನುವ ಕುಟುಂಬದವರು ಗೋಳು ಮುಗಿಲು ಮುಟ್ಟುವಂತಿತ್ತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಿತ್ತನೆ ಬೀಜ ದರ ಏರಿಕೆ, ರಸಗೊಬ್ಬರ ಅಭಾವ ಸೃಷ್ಟಿಗೆ ರೈತರ ಆತಂಕ; ಕ್ರಮಕ್ಕೆ ರೈತ ಸಂಘ ಆಗ್ರಹ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಬಂಧಿಸಿದ ಪಲ್ಲಾಗಟ್ಟಿ ಗ್ರಾಪಂ ಅಧ್ಯಕ್ಷ ವೀರೇಶ್, ಪಿಡಿಓ ಶಶಿಧರ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಮಿಕರಿಗೆ ಸಿಗುವಂತ ಪರಿಹಾರವನ್ನ ಕೊಡಿಸಿಕೊಡಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಸುಧಾ ಪಲ್ಲಾಗಟ್ಟೆ ಮುಂತಾದ ಸಿಬ್ಬಂದಿಗಳು ಹಾಜರಿದ್ದರು.