ದಾವಣಗೆರೆ | ನರೇಗಾ ಉದ್ಯೋಗಖಾತ್ರಿ ಕೆಲಸದ ವೇಳೆ ಗ್ರಾಕೂಸ್ ಕೂಲಿ ಕಾರ್ಮಿಕ ಸಾವು.

Date:

ನರೇಗಾ ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ತೆರಳಿ, ಕೆಲಸ ನಿರ್ವಹಿಸುವ ವೇಳೆ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಕುಂಟೆ ಗ್ರಾಮದಲ್ಲಿ ನಡೆದಿದೆ.‌ ಸಾವನ್ನಪ್ಪಿರುವ ಕೂಲಿ ಕಾರ್ಮಿಕ ಗ್ರಾಕೂಸ್ ಸಂಘಟನೆಯ ಕಾರ್ಮಿಕ ಎನ್ನಲಾಗಿದೆ.‌

- Advertisement -

ಕೂಲಿ ಕೆಲಸಕ್ಕೆ ತೆರಳಿ ಮೃತಪಟ್ಟ ವ್ಯಕ್ತಿ ಕೆಂಚಪ್ಪ ತಂದೆ ರಾಮಚಂದ್ರಪ್ಪ ತಾಯಿ ಗುರುಸಿದ್ದಮ್ಮ
ಎಂದು ಗುರುತಿಸಲಾಗಿದೆ. ದಿನಾಂಕ 22.5.2025 ರಂದು ಗುರುವಾರ ಬೆಳಿಗ್ಗೆ ಉದ್ಯೋಗ ಖಾತ್ರಿಯಡಿಯಲ್ಲಿ ಕೆರೆ ಹೂಳೆತ್ತುವ ಕೆಲಸಕ್ಕೆ ತೆರಳಿದ್ದಾರೆ. ಕೆಲಸದಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ಕೆಂಚಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು...

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ ಮತ ಬಾಚುವ ಕಣ್ಣು ಮುಚ್ಚಿ ತನ್ಮ ಕರ್ತವ್ಯದ ಕಣ್ಣು ತೆರೆದು ನೋಡುವುದು ಅಗತ್ಯ. ಬೈಗಾ ಸಮುದಾಯದಂತಹ ಅಪರೂಪದ ಬುಡಕಟ್ಟು ಸಂತತಿಯನ್ನು...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...
1002035131
ಕೆಲಸದ ವೇಳೆ ಸ್ಥಳದಲ್ಲಿಯೇ ಮೃತಪಟ್ಟ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕ

ಎಂದಿನಂತೆ ಬೆಳಿಗ್ಗೆ ಎದ್ದು ಉದ್ಯೋಗ ಖಾತ್ರಿ ಕೆಲಸಕ್ಕೆ ಹೋದ ವ್ಯಕ್ತಿ ಕೆಂಚಪ್ಪ ಮನೆಗೆ ಹೆಣವಾಗಿ ಬಂದಿದ್ದಾರೆ. ಕುಟುಂಬಕ್ಕೆ ಆಸರೆಯಾಗಿ ಕೆಲಸ ಮಾಡುತ್ತಿದ್ದ ಕೆಂಚಪ್ಪ ಇನ್ನಿಲ್ಲ ಎನ್ನುವ ಕುಟುಂಬದವರು ಗೋಳು ಮುಗಿಲು ಮುಟ್ಟುವಂತಿತ್ತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಿತ್ತನೆ ಬೀಜ ದರ ಏರಿಕೆ, ರಸಗೊಬ್ಬರ ಅಭಾವ ಸೃಷ್ಟಿಗೆ ರೈತರ ಆತಂಕ; ಕ್ರಮಕ್ಕೆ ರೈತ ಸಂಘ ಆಗ್ರಹ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಬಂಧಿಸಿದ ಪಲ್ಲಾಗಟ್ಟಿ ಗ್ರಾಪಂ ಅಧ್ಯಕ್ಷ ವೀರೇಶ್, ಪಿಡಿಓ ಶಶಿಧರ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಮಿಕರಿಗೆ ಸಿಗುವಂತ ಪರಿಹಾರವನ್ನ ಕೊಡಿಸಿಕೊಡಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಸುಧಾ ಪಲ್ಲಾಗಟ್ಟೆ ಮುಂತಾದ ಸಿಬ್ಬಂದಿಗಳು ಹಾಜರಿದ್ದರು.‌

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SBI ನಿಂದ 800 ಕನ್ನಡ ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

SBI ನಿಂದ ಸುಮಾರು 800 ಕನ್ನಡ ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿಗಳನ್ನು...

ಕೊಪ್ಪಳ | ಅಂಚೆ ಇಲಾಖೆಯ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ಸೆ.19 ಕೊನೆಯ ದಿನ

ಕೊಪ್ಪಳ ಅಂಚೆ ವಿಭಾಗೀಯ ವ್ಯಾಪ್ತಿಯ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ...

ಕೆ ಎಸ್ ಬಸವಂತಪ್ಪ ಹೋರಾಟದ ಹೆಜ್ಜೆಗುರುತು: ಪೌರಕಾರ್ಮಿಕರ ಮಗನಿಂದ ಸಚಿವ ಸ್ಥಾನದವರೆಗೆ

ಪೌರಕಾರ್ಮಿಕ ಕುಟುಂಬದಿಂದ ಆರಂಭವಾದ ಬದುಕಿನ ಪಯಣ ಇದೀಗ ರಾಜ್ಯ ಸಚಿವ ಸಂಪುಟದವರೆಗೆ...

ದಾವಣಗೆರೆ | ಜಾತಿ ದೌರ್ಜನ್ಯ: ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಹಲ್ಲೆ

ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ಐವರು ದಲಿತ ಯುವಕರನ್ನು ಪ್ರಬಲ ಜಾತಿಯ ಜಾತಿವಾದಿಗಳು...