ದಾವಣಗೆರೆ | ಸಂವಿಧಾನಬದ್ದ ಹಕ್ಕುಗಳಿಗಾಗಿ ಯುವಕರ ಸಂಘಟಿತ ಹೋರಾಟ ಅನಿವಾರ್ಯ; ಸಿಪಿಐ ಕಾರ್ಯದರ್ಶಿ ಆವರಗೆರೆ ಚಂದ್ರು.

Date:

Advertisements

“ಯುವಕರು ಸಂಘಟಿತ ಹೋರಾಟದಿಂದ ಮಾತ್ರ ಸಂವಿಧಾನಬದ್ದ ಹಕ್ಕುಗಳನ್ನು ಪಡೆಯಲು ಸಾಧ್ಯ” ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಕರೆ ನೀಡಿದರು. ದಾವಣಗೆರೆ ನಗರದ ಪಂಪಾಪತಿ ಭವನದಲ್ಲಿ ಆಲ್ ಇಂಡಿಯಾ ಯೂತ್ ಫೆಡರೇಷನ್ (ಎಐವೈಎಫ್) ಜಿಲ್ಲಾ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, “ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಕನಿಷ್ಠ 5 ಶಾಖೆಗಳನ್ನು ಸ್ಥಾಪಿಸುವ ಮೂಲಕ ಎಐವೈಎಫ್ ಸಂಘಟನೆ ಸಿದ್ದಾಂತ, ಧ್ಯೇಯೋದ್ದೇಶಗಳನ್ನು ಸಂಘಟನೆ ಮುಖಂಡರು ಯುವಕರಿಗೆ ತಿಳಿಸುವ ಮೂಲಕ ಯುವಕರನ್ನು ಜಾಗೃತಗೊಳಿಸಬೇಕಿದೆ” ಎಂದು ಸಲಹೆ ನೀಡಿದರು.

1002036756

“ವಿದ್ಯಾರ್ಥಿಯುವ ಸಮೂಹ ಮೊಬೈಲ್ ಗೀಳು, ಕ್ರಿಕೆಟ್ ಬೆಟ್ಟಿಂಗ್, ಮಾದಕ ವಸ್ತುಗಳ ಸೇವನೆಗಳಿಗೆ ಮಾರುಹೋಗದೆ, ಸಮಾಜಮುಖಿಯಾಗಿ ಸಂಘಟನಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ವಿದ್ಯಾಭ್ಯಾಸ, ದುಡಿಮೆಯ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಇತ್ತೀಚೆಗೆ ಯುವಕರು ದುಶ್ಚಟಗಳ ದಾಸರಾಗಿ ವೈಯಕ್ತಿಕ, ಕೌಟುಂಬಿಕ ಜವಾಬ್ದಾರಿಯಿಂದ ವಿಮುಖವಾಗಿದ್ದು, ಸಮಾಜದಲ್ಲಿ ಕೆಲವರ ಕೈಗೊಂಬೆಯಂತೆ ವರ್ತಿಸುತ್ತಿರುವುದು ಬೇಸರದ ಸಂಗತಿ” ವಿಷಾದ ವ್ಯಕ್ತಪಡಿಸಿದರು.

1002036748

ಎಐವೈಎಫ್- ಅಖಿಲ ಭಾರತ ಯುವಜನ ಫೆಡರೇಷನ್ ರಾಷ್ಟ್ರೀಯ ಮಂಡಳಿ ಸದಸ್ಯ ಎಚ್.ಎಂ. ಸಂತೋಷ್ ಕುಮಾರ್ ಮಾತನಾಡಿ, “ದೇಶದಲ್ಲಿ ಬಿಜೆಪಿ ಆಡಳಿತ ಸರಕಾರ ಯುವಕರಿಗೆ ನೀಡಿದ್ದ 2 ಕೋಟಿ ಉದ್ಯೋಗ ಸೃಷ್ಠಿಯ ಭರವಸೆ ಹುಸಿಯಾಗಿದೆ. ಯುವಕರು ದೇಶದಲ್ಲಿನ ನಿರುದ್ಯೋಗ, ಉಚಿತ ಶಿಕ್ಷಣ, ಇತರೆ ಜ್ವಲಂತ ಸಮಸ್ಯೆಗಳನ್ನು ಮರೆತು ದೇವರು,ಧರ್ಮದ ಹೆಸರಿನಲ್ಲಿ ಕೋಮುವಾದದ ಕೂಪದಲ್ಲಿ ಮುಳುಗಿರುವುದು ಆತಂಕಕಾರಿ ಬೆಳವಣಿಗೆ” ಎಂದು ಬೇಸರ ವ್ಯಕ್ತಪಡಿಸಿದರು.

Advertisements
1002036749 1

“ಎಐವೈಎಫ್ ಸಂಘಟನೆ ರಾಷ್ಟ್ರೀಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಂತೆ ವಿಶ್ವಪರಿಸರ ದಿನಾಚರಣೆ, ಮಾದಕವಸ್ತುಗಳ ನಿಷೇಧ ಕಾರ್ಯಕ್ರಮ, ಸ್ಥಳೀಯವಾಗಿ ಉದ್ಯೋಗಕ್ಕಾಗಿ ಕೈಗಾರಿಕೆ ಸ್ಥಾಪನೆಗಾಗಿ ಹೋರಾಟ, ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಚಟುವಟಿಕೆಗಳ ಆಯೋಜನೆಯೊಂದಿಗೆ ಸಂಘಟನೆಯನ್ನು ಬಲವರ್ಧನೆಗೊಳಿಸಲಾಗುವುದು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರೇಗಾ ಉದ್ಯೋಗಖಾತ್ರಿ ಕೆಲಸದ ವೇಳೆ ಗ್ರಾಕೂಸ್ ಕೂಲಿ ಕಾರ್ಮಿಕ ಸಾವು.

ಪೂರ್ವಭಾವಿ ಸಭೆಯಲ್ಲಿ ಅಕ್ಷರದಾಸೋಹ ಬಿಸಿಯೂಟ ತಯಾರಕರ ಸಂಘಟನೆಯ ರಮೇಶ್ ದಾಸರ್, ಸರೋಜಮ್ಮ, ಪಂಪಾಪತಿ ಟ್ರಸ್ಟ್ ನ ಯಲ್ಲಪ್ಪ, ಎಐವೈಎಫ್ ಜಿಲ್ಲಾಧ್ಯಕ್ಷ ರಾಜು ಕೆರನಹಳ್ಳಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ತಿಪ್ಪೇಸ್ವಾಮಿ, ಜಗಳೂರು ತಾಲೂಕು ಅಧ್ಯಕ್ಷ ಮಾದಿಹಳ್ಳಿ ಮಂಜುನಾಥ್, ಮುಖಂಡರಾದ ಗದುಗೇಶ್, ಪರುಶರಾಮ್, ಶೇಖರನಾಯ್ಕ ಸೇರಿದಂತೆ ಮತ್ತಿತರರು ಹಾಜರಿದ್ದರು

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಬೀದಿ ನಾಯಿ ದಾಳಿಗೆ ಗಾಯಗೊಂಡು ರೇಬೀಸ್ ತಗುಲಿದ್ದ ಮಗು ಸಾವು

ದಾವಣಗೆರೆ ನಗರದ ಶಾಸ್ತ್ರೀನಗರದಲ್ಲಿ ಮನೆ ಮುಂದೆ ಆಟ ಆಡುವ ವೇಳೆ ಬೀದಿ...

ದಾವಣಗೆರೆ | ನಾಗಮೋಹನ ದಾಸ್ ಆಯೋಗದ ವೈಜ್ಞಾನಿಕ ಒಳಮೀಸಲಾತಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ನ್ಯಾ.ನಾಗಮೋಹನ ದಾಸ್ ಆಯೋಗದ ಒಳಮೀಸಲಾತಿ ವರದಿಯು ವೈಜ್ಞಾನಿಕವಾಗಿದ್ದು, ಪ್ರಸ್ತುತ ಅಧಿವೇಶನದಲ್ಲಿ ಜಾರಿಗೊಳಿಸಬೇಕು...

ದಾವಣಗೆರೆ | ದಲಿತ ಸಂಘಟನೆಗಳ ಒಳಮೀಸಲಾತಿ ಪ್ರತಿಭಟನೆ; ಎಸಿ ಕಛೇರಿಗೆ ಬೀಗ

"ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಒಂದು ವರ್ಷವಾದರೂ ಒಳಮೀಸಲಾತಿಯನ್ನು ಜಾರಿ ಮಾಡುವಲ್ಲಿ...

ದಾವಣಗೆರೆ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳಿಂದ ಹರಿಹರದಲ್ಲಿ ಆ.18ಕ್ಕೆ ಪ್ರತಿಭಟನೆ

ಪರಿಶಿಷ್ಟ ಜಾತಿ ಜನಾಂಗದವರಿಗೆ ಯಥಾವತ್ತಾಗಿ ಒಳ ಮೀಸಲಾತಿ ಜಾರಿ ಮಾಡಲು ಒತ್ತಾಯಿಸಿ,...

Download Eedina App Android / iOS

X