“ನ್ಯಾ.ನಾಗಮೋಹನ್ ದಾಸ್ ಒಳಮೀಸಲಾತಿ ಏಕಸದಸ್ಯ ಆಯೋಗದ ಶಿಫಾರಸಿನಂತೆ ಸರ್ಕಾರ ಕೈಗೊಂಡಿರುವ ಪರಿಶಿಷ್ಟ ಜಾತಿ ಗಣತಿ ಕಾರ್ಯದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಶೇ.100 ಕ್ಕೂ ಅಧಿಕ ಸಾಧನೆ ಮಾಡಲಾಗಿದ್ದು, ಈ ಮೂಲಕ ರಾಜ್ಯದಲ್ಲಿಯೇ ಶೇ.100 ರಷ್ಟು ಸಾಧನೆ ಮಾಡಿದ ಹೆಗ್ಗಳಿಕೆಗೆ ದಾವಣಗೆರೆ ಜಿಲ್ಲೆ ಪಾತ್ರವಾಗಿದೆ”ಎಂದು ದಾವಣಗೆರೆ ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ ಮಾಹಿತಿ ನೀಡಿದರು.
ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿ ಮಾಹಿತಿ ನೀಡಿದ ಅವರು, “2011 ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಪರಿಶಿಷ್ಟ ಜನಸಂಖ್ಯೆ 3 ಲಕ್ಷದ 18 ಸಾವಿರದ 315 ಇತ್ತು. ಪ್ರಸ್ತುತ ಪರಿಶಿಷ್ಟ ಜಾತಿ ಗಣತಿಯ ವೇಳೆ
3 ಲಕ್ಷ 29 ಸಾವಿರದ 64 ಜನಸಂಖ್ಯೆ ಇರುವುದು ಗೊತ್ತಾಗಿದೆ. ಕುಟುಂಬಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರತಿಶತ ಹೆಚ್ಚು ಸಂಖ್ಯೆ ಕಂಡು ಬಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರೇಗಾ ಉದ್ಯೋಗಖಾತ್ರಿ ಕೆಲಸದ ವೇಳೆ ಗ್ರಾಕೂಸ್ ಕೂಲಿ ಕಾರ್ಮಿಕ ಸಾವು.
ವಿಸ್ತರಿಸಿರುವ ಗಣತಿ ದಿನಾಂಕ ಮೇ.25 ರ ವರೆಗೆ ಗಣತಿದಾರರು ಮನೆ ಮನೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಗಣತಿದಾರರು ಈಗಾಗಲೇ ಗಣತಿ ಕಾರ್ಯ ಪೂರ್ಣಗೊಳಿಸಿದ್ದು, ಇದಾದ ನಂತರ ಮೇ 26 ರಿಂದ 28 ರ ವರೆಗೆ ಮತಗಟ್ಟೆಗಳಲ್ಲಿ ಜಾತಿ ಗಣತಿ ದಾಖಲು ಮಾಡಲು ವಿಶೇಷ ಶಿಬಿರ ಆಯೋಜಿಸಲಾಗಿದೆ” ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಸುರೇಶ್ ಇಟ್ನಾಳ್ ಹಾಗೂ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.