ಭಾರತೀಯ ವಾಯುಪಡೆ(ಐಎಎಫ್) ಮತ್ತು ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್‌ಗಳ ಜೊತೆ ಹಂಚಿಕೊಂಡ ಆರೋಪದ ಮೇಲೆ ಗುಜರಾತ್‌ನಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆರೋಪಿ ಸಹದೇವ್ ಸಿಂಗ್ ಗೋಹಿಲ್(28 ವರ್ಷ) ಕಛ್ ನಿವಾಸಿಯಾಗಿದ್ದು, ಆರೋಗ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಎಂದು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಹಿರಿಯ ಅಧಿಕಾರಿ ಕೆ. ಸಿದ್ಧಾರ್ಥ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಪರೇಷನ್ ಸಿಂಧೂರ – ಪಾಕ್ ಭಯೋತ್ಪಾದನೆಗೆ ತಕ್ಕ ಶಾಸ್ತಿ!
2023ರಲ್ಲಿ ವಾಟ್ಸಾಪ್ ಮೂಲಕ ಅದಿತಿ ಭಾರದ್ವಾಜ್ ಎಂಬ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದ ಗೋಹಿಲ್ ಹೊಸದಾಗಿ ನಿರ್ಮಿಸಲಾಗುತ್ತಿರುವ ಅಥವಾ ನಿರ್ಮಾಣ ಹಂತದಲ್ಲಿರುವ ಐಎಎಫ್ ಮತ್ತು ಬಿಎಸ್‌ಎಫ್ ತಾಣಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಆಕೆಗೆ ಕಳುಹಿಸಿದ್ದ ಎಂಬ ಮಾಹಿತಿ ಲಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
“ಪಾಕಿಸ್ತಾನದ ಏಜೆಂಟ್‌ಗಳಿಗೆ ಮಾಹಿತಿ ಹಂಚಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಕಾರಣ ಮೇ 1ರಂದು ಗೋಹಿಲ್ ಅವರನ್ನು ಪ್ರಾಥಮಿಕ ತನಿಖೆಗಾಗಿ ಕರೆಯಲಾಯಿತು. 2025ರ ಆರಂಭದಲ್ಲಿ ತಮ್ಮ ಆಧಾರ್ ಕಾರ್ಡ್‌ನಲ್ಲಿ ಸಿಮ್ ಖರೀದಿಸಿ ಅದಿತಿ ಭಾರದ್ವಾಜ್‌ಗಾಗಿ ವಾಟ್ಸಾಪ್ ಮಾಡಿಕೊಟ್ಟಿದ್ದಾರೆ. ಅದಾದ ಬಳಿಕ ಬಿಎಸ್‌ಎಫ್ ಮತ್ತು ಐಎಎಫ್‌ಗೆ ಸಂಬಂಧಿಸಿದ ಎಲ್ಲಾ ಫೋಟೋಗಳನ್ನು, ವಿಡಿಯೋಗಳನ್ನು ಆ ಸಂಖ್ಯೆಗೆ ಹಂಚಿಕೊಂಡಿದ್ದಾರೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಗೋಹಿಲ್ ಮಾಹಿತಿಯನ್ನು ಹಂಚಿಕೊಳ್ಳಲು ಬಳಸಿದ ಸಂಖ್ಯೆಗಳನ್ನು ಪಾಕಿಸ್ತಾನದಲ್ಲಿ ನಿರ್ವಹಿಸಲಾಗುತ್ತಿತ್ತು. ಗೋಹಿಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು 40,000 ರೂ. ನಗದು ಸಹ ನೀಡಿದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಪಾಕಿಸ್ತಾನಕ್ಕೆ ಬೇಹುಗಾರಿಕೆ; ಯುಪಿ ಉದ್ಯಮಿ ಶಹಜಾದ್ ಎಸ್‌ಟಿಎಫ್ ವಶಕ್ಕೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕಾ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಟ್ಟು ಒಂಬತ್ತು ಭಯೋತ್ಪಾದಕಾ ನೆಲೆಗಳ ಮೇಲೆ ದಾಳಿ ನಡೆಸಿ ಸರಿಸುಮಾರು ನೂರು ಉಗ್ರರ ಹತ್ಯೆ ಮಾಡಿದೆ.
ಇದಾದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ಅಧಿಕವಾಗಿದೆ. ಸದ್ಯ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ನಡುವೆ ಬೇಹುಗಾರಿಕೆಗೆ ಸಂಬಂಧಿಸಿತ ತನಿಖೆಗೆ ಬಿರುಸಾಗಿ ಸಾಗಿದೆ. ಈಗಾಗಲೇ ಯೂಟ್ಯೂಬರ್, ಉದ್ಯಮಿ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಹತ್ತಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
