ವಿದ್ಯಾರ್ಥಿಗಳಿಗೆ ವಿಶೇಷವಾದ ಮತ್ತು ವಿನೂತನ ಶಿಕ್ಷಣವನ್ನು ನೀಡುವುದಾದರೆ ಶಿಕ್ಷಕರಿಗೆ ಪುನಶ್ವೇತನ ತರಬೇತಿ ನೀಡುವ ಅಗತ್ಯತೆ ಇದೆ ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಪ್ರೊ. ಎಚ್ ಚನ್ನಪ್ಪ ಪಲ್ಲಾಗಟ್ಟೆ ಹೇಳಿದ್ದಾರೆ.
ದಾವಣಗೆರೆಯಲ್ಲಿ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಆಯೋಜಿಸಿದ್ದ ‘ಶಿಕ್ಷಕರ ಪುನಶ್ವೇತನ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು. “ಪ್ರತಿಯೊಬ್ಬ ಶಿಕ್ಷಕರು ಸೇವಾದಳದ ಉದ್ದೇಶಗಳನ್ನು ತಿಳಿದುಕೊಂಡು ಸೇವಾದಳದ ವಾರ್ಷಿಕ ಕೈಪಿಡಿಯಂತೆ ಮಹಾತ್ಮ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮದ ತಳಹದಿಯ ಮೇಲೆ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು,” ಎಂದರು.
ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶ್ರೀಮತಿ ಮಂಜುಳಾ ಎನ್ ಮಾತನಾಡಿ, “ಪ್ರತಿಯೊಂದು ಶಾಲೆಗಳಲ್ಲೂ ಸೇವಾದಳ ಘಟಕವನ್ನು ಆರಂಭಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೇವಾದಳದ ತಾಲೂಕು ಅಧ್ಯಕ್ಷ ಹಾಸಬಾವಿ ಕರಿಬಸಪ್ಪ, ವಲಯ ಸಂಘಟಕ ಎಂ ಅಣ್ಣಪ್ಪ, ಗೋಪಾಲಪ್ಪ, ರಾಘವೇಂದ್ರ, ಹುಸೇನ್ ಪೀರ್, ಕೆ. ಆರ್ ಸಿದ್ದೇಶಪ್ಪ, ಎಸ್.ಎನ್ ರಮೇಶ್, ಗಣೇಶ್, ಶ್ರೀನಿವಾಸ್, ಸಂತೋಷ್, ಸತ್ಯನಾರಾಯಣ್ ಉಪಸ್ಥಿತರಿದ್ದರು.