ಕೊರಟಗೆರೆ | ತೆರಿಗೆ ಪಾವತಿ ಮಾಡದ ಶಿವಗಂಗ ಚಿತ್ರಮಂದಿರ ಜಪ್ತಿ

Date:

Advertisements

 ಲಕ್ಷಾಂತರ ರೂಪಾಯಿಗಳಷ್ಟು ತೆರಿಗೆ ಹಣಪಾವತಿ ಮಾಡದ ಶ್ರೀ ಶಿವಗಂಗ ಚಿತ್ರಮಂದಿರ, ಕಲ್ಯಾಣಮಂಟಪ ಹಾಗೂ ಹೋಟೆಲ್ ಗೆ ಬೀಗ ಹಾಕಿ ಸೀಲ್ ಮಾಡಿರುವ ಘಟನೆ ಶುಕ್ರವಾರ ಪಟ್ಟಣಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಅಕ್ಕಿರಾಂಪುರ ಮೂಲದ ಗಂಗಾಧರಪ್ಪ ಮಾಲೀಕತ್ವದ ಶ್ರೀ ಶಿವಗಂಗಚಿತ್ರಮಂದಿರ, ಕಲ್ಯಾಣ ಮಂಟಪ, ಹೋಟೆಲ್ ಗಳಿಗೆ ಪಟ್ಟಣ ಪಂಚಾಯಿತಿ ನೋಟಿಸ್ ನೀಡಿದ್ದು, ಪ್ರತಿಕ್ರಿಯಿಸದ ಮಾಲೀಕರ ಬೇಜವಾಬ್ದಾರಿ ವರ್ತನೆಗೆ ಸ್ಥಳಕ್ಕೆಭೇಟಿ ನೀಡಿದ ಪಟ್ಟಣಪಂಚಾತಿಯಿ ಮುಖ್ಯಾಧಿಕಾರಿ ಬೀಗಜಡಿದು ಬಾಗಿಲು ಮುಚ್ಚಿಸುವ ಕೆಲಸ ಮಾಡಿದ್ದಾರೆ.

ಅನೇಕ ಬಾರಿ ನೋಟಿಸ್ ನೀಡಿದರು ಸುಮಾರು ೧೦ಲಕ್ಷ ರೂಗಳಷ್ಟು ತೆರಿಗೆ ಹಣವನ್ನು ಪಾವತಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದ ಮಾಲೀಕರಿಗೆ ಎಚ್ಚರಿಕೆ ನೀಡುವ ಮೂಲಕ ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್ ತೆರಿಗೆ ಹಣ ಪಾವತಿ ಮಾಡುವವರೆಗೂ ಚಿತ್ರಮಂದಿರ ಸೇರಿದಂತೆ ಕಲ್ಯಾಣ ಮಂಟಪ ಮತ್ತು ಹೋಟೆಲ್ ನಡೆಸದಂತೆ ಬೀಗ ಹಾಕಿಸಿದ್ದಾರೆ.

Advertisements

ಯಾವುದೇ ನೋಟಿಸ್ ನೀಡದೇ ಏಕಾಏಕಿ ಬಂದು ಪಟ್ಟಣ ಪಂಚಾಯಿತಿಯವರು ಬೀಗ ಹಾಕಿಸಿ ಬಾಗಿಲು ಮುಚ್ಚಿಸಿದ್ದು, ಚಿತ್ರಮಂದಿರಕ್ಕೆ ಇಂದು ಶುಕ್ರವಾರ ವಾದಕಾರಣ ಚಲನಚಿತ್ರವನ್ನು ಪ್ರರ್ದಶನ ಮಾಡಲಾಗಿತ್ತು, ಸಿನಿಮಾ ವೀಕ್ಷಣೆಗೆ ಬಂದ ಪ್ರೇಕ್ಷಕರು ವಾಪಾಸ್ಸು ಹೋಗಿದ್ದರಿಂದ ನಮಗೆ ನಷ್ಟ ಉಂಟಾಗಿದೆ ಎಂದು ವ್ಯವಸ್ಥಾಪಕ ಆಕ್ರೋಶ ವ್ಯಕ್ತಡಿಸಿದ್ದಾರೆ.

ಇದೇ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಹೆಲ್ತ್ ಇನ್ಸ್ಪೆಕ್ಟರ್ ಮಹಮ್ಮದ್ ಹುಸೇನ್, ಆರ್‌ಐ ವೇಣುಗೋಪಾಲ್, ಶೈಲೇಂಧ್ರ, ವೆಂಕಟೇಶ್ ಸೇರಿದಂತೆ ಸಿಬ್ಬಂದಿಗಳು ಇದ್ದರು.

“ನೋಟಿಸ್ ನಲ್ಲಿರುವ ಪ್ರಕಾರ ಕಳೆದ ೩ದಿನಗಳ ಹಿಂದೆ ನೋಟಿಸ್ ನೀಡಬೇಕಿತ್ತು ಆದರೆ ಗುರುವಾರ ನೋಟಿಸ್ ಅಂಟಿಸಿ ಮರುದಿನ ಏಕಾಏಕಿ ಬಂದು ಗಡುವು ನೀಡದೆ ಬಾಗಿಲು ಮುಚ್ಚಿಸುವ ಕೆಲಸ ಮಾಡಿದ್ದಾರೆ. ನಮಗೆ ಇಲ್ಲಿಯವರೆಗೂ ಯಾವುದೇ ನೋಟಿಸ್ ಬಂದಿಲ್ಲ, ಕೋರ್ಟ್ ನಲ್ಲಿ ತಡೆಯಾಜ್ಞೆ ಇರುವ ಕಾರಣ ಕಂದಾಯ ಕಟ್ಟಿಲ್ಲ. ಮುಂದಿನ ದಿನಗಳಲ್ಲಿ ಕೋರ್ಟ್ ಆದೇಶವನ್ನು ಸ್ವೀಕರಿಸಿ ಪಟ್ಟಣಪಂಚಾಯಿತಿಗೆ ನೀಡಿ ಕಂದಾಯ ಪಾವತಿಸುತ್ತೇವೆ ಎಂದು ಶಿವಗಂಗ ಚಿತ್ರಮಂದಿರದ ಮ್ಯಾನೇಜರ್  ಅನಿಲ್ ಕುಮಾರ್ ತಿಳಿಸಿದ್ದಾರೆ.

” ಅನೇಕ ಬಾರಿ ನೋಟಿಸ್ ನೀಡಿದರೂ ಸರಿಯಾದ ರೀತಿ ತೆರಿಗೆ ಹಣಪಾವತಿ ಮಾಡಿದೆ ಸುಮಾರು ೧೦ಲಕ್ಷ ರೂಪಾಯಿಗಳಷ್ಟು ಹಣ ಬಾಕಿ ಉಳಿಸಿಕೊಂಡಿದ್ದರು. ಕಳೆದ ಬಾರಿ ಮಾಲೀಕರ ಮನವಿಗೆ ಕಾಲಾವಕಾಶ ನೀಡಿದ್ದು, ಆದರೆ ಮತ್ತೊಮ್ಮೆ ನೋಟಿಸ್ ನೀಡಲು ಬಂದಾಗ ನಿರಕರಿಸಿರುತ್ತಾರೆ ಆದ ಕಾರಣಕ್ಕೆ ಬಾಗಿಲು ಹಾಕಿಸುವ ಕೆಲಸ ಮಾಡಿದ್ದೇವೆ. ಪಟ್ಟಣದ ಅಂಗಡಿ, ಮಳಿಗೆಗಳ ಮಾಲೀಕರು ಬಾಕಿ ಉಳಿಸಿಕೊಂಡಿರುವ ಕಂದಾಯವನ್ನು ಪಾವತಿಸಲು ಈ ಮೂಲಕ ಮನವಿ ಮಾಡುತ್ತೇವೆ ಎಂದು ಕೊರಟಗೆರೆ ಪ.ಪಂ ಮುಖ್ಯಾಧಿಕಾರಿ ಕೆ.ಎಸ್ ಉಮೇಶ್ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X