ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ಪ್ರಶಾಂತ್ ಡಿಸೋಜಾ ಎಂಬವರು ದಿನಸಿ ಅಂಗಡಿಯಲ್ಲಿದ್ದ ಸುಮಾರು 3 ಲಕ್ಷ ಮೌಲ್ಯದ ದಿನಸಿ ನೀರು ಪಾಲಾಗಿದೆ.
ಮಹಾನಗರ ಪಾಲಿಕೆ ವತಿಯಿಂದ ಚರಂಡಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಮಳೆಯ ನೀರು ಚರಂಡಿಯಲ್ಲಿ ತುಂಬಿ ಅಂಗಡಿಯ ಬಾಗಿಲು ಮತ್ತು ಗೋಡೆ ಹಾನಿಗೊಳಗಾಗಿದೆ. ಕಾಮಗಾರಿಯ ವೇಳೆ ಮುಂಜಾಗ್ರತಾ ಕ್ರಮವನ್ನು ವಹಿಸದೇ ಚರಂಡಿ ಕಾಮಗಾರಿ ನಡೆಸಿದ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಈ ಘಟನೆ ನಡೆದು ನಷ್ಟ ಸಂಭವಿಸಿದೆ.
ಅಂಗಡಿಯಲ್ಲಿದ್ದ ಫ್ರಿಡ್ಜ್, ದಿನಸಿ, ಐಸ್ ಕ್ರೀಂ ಇನ್ನಿತರ ವಸ್ತುಗಳು ಹಾಳಾಗಿದ್ದು, ಸ್ಥಳಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮಂಗಳೂರು | 2010ರ ಬಜ್ಪೆ ವಿಮಾನ ದುರಂತ; ನಾಳೆ ಶ್ರದ್ಧಾಂಜಲಿ ಕಾರ್ಯಕ್ರಮ