ಭಾರೀ ಮಳೆಯಿಂದಾಗಿ ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ) ಕಚೇರಿಯ ಮೇಲ್ಛಾವಣಿ ಕುಸಿದು 58 ವರ್ಷದ ಸಬ್ ಇನ್‌ಸ್ಪೆಕ್ಟರ್ ಸಾವನ್ನಪ್ಪಿದ ಘಟನೆ ಭಾನುವಾರ ಮುಂಜಾನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಎಸಿಪಿ ಅಂಕುರ್ ವಿಹಾರ್ ಲೋನಿ ಅವರ ಕಚೇರಿಯ ಒಳಗಡೆ ವೀರೇಂದ್ರ ಕುಮಾರ್ ಮಿಶ್ರಾ ಮಲಗಿದ್ದರು. ಕಟ್ಟಡ ಕುಸಿದ ಬಳಿಕ ಪರಿಶೀಲನೆ ನಡೆಸಿದಾಗ ವೀರೇಂದ್ರ ಕುಮಾರ್ ಅವರು ಮೃತಪಟ್ಟಿರುವುದು ಕಂಡುಬಂದಿದೆ.
ಇದನ್ನು ಓದಿದ್ದೀರಾ? ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ
ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಪ್ರಿಯದರ್ಶಿ ಈ ಮಾಹಿತಿ ನೀಡಿದ್ದಾರೆ. ಪೊಲೀಸರು ಬೆಳಿಗ್ಗೆ ಕಚೇರಿಗೆ ಬರುವವರೆಗೂ ಕಚೇರಿ ಕುಸಿದಿರುವುದು ತಿಳಿದಿರಲಿಲ್ಲ ಎಂದು ಹೇಳಲಾಗಿದೆ.
VIDEO | Ghaziabad: Roof of ACP office collapsed in Ankur Vihar due to heavy storm and rain. More details awaited.
— Press Trust of India (@PTI_News) May 25, 2025
(Full video available on PTI Videos – https://t.co/n147TvqRQz)#Ghaziabad pic.twitter.com/Vf7HBs9t7W
ಸಬ್ ಇನ್‌ಸ್ಪೆಕ್ಟರ್ ಮಿಶ್ರಾ ಅವರ ದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಮಿಶ್ರಾ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸದ್ಯ ಇಟಾವಾ ಜಿಲ್ಲೆಯಲ್ಲಿರುವ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
