ಬೆಳಗಾವಿ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ವಿರೋಧ ವ್ಯಕ್ತವಾಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕಾಮಗಾರಿ ಸ್ಟಾಪ್ ಮಾಡಿಸಿದ್ದರು. ಆದರೆ ಬೆಳಗಾವಿ ಜಿಲ್ಲೆಯ ಜನರ ವಿರೋಧವಿದ್ದರೂ ಇದೆ ಕಾಮಗಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ ಅಸ್ತು ಅಂದಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಡಿಸಿಎಂ ಡಿಕೆಶಿ ಮತ್ತು ಸತೀಶ್ ಮಧ್ಯೆ ಮತ್ತೊಂದು ಹಂತದ ಸಮರಕ್ಕೆ ನಾಂದಿ ಹಾಡಿದೆ.
ಬೆಳಗವಿ ಜನರಿಗೆ ನೀರಿನ ಅಭಾವ ಆಗುವ ಸಾಧ್ಯತೆ ಇದೆ ಎಂದು ವಿವಿಧ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದವು ಹಾಗಾಗಿ ಹಿಡಕಲ್ ಜಲಾಶಯದಿಂದ ಧಾರವಾಡಕ್ಕೆ ವಾಟರ್ ಲಿಫ್ಟ್ ಕಾಮಗಾರಿ ನಿಲ್ಲಿಸಲಾಗಿತ್ತು. ಆದರೆ ಧಾರವಾಡಕ್ಕೆ ವಾಟರ್ ಲಿಫ್ಟ್ ಕಾಮಗಾರಿ ಮರು ಆರಂಭವಾಗಿದೆ.
110 ಕಿಮೀ ಪೈಪ್‌ಲೈನ್ ಅಳವಡಿಕೆಗೆ 350 ಕೋಟಿ ವೆಚ್ಚದ ಧಾರವಾಡ ಕೆಐಎಡಿಬಿ ಅಧಿಕಾರಿಗಳು ರೂಪಿಸಿದ್ದ ವಾಟರ್ ಲಿಫ್ಟ್ ಯೋಜನೆ ಸತೀಶ ಜಾರಕಿಹೊಳಿ, ಜಿಲ್ಲಾಡಳಿತ ಗಮನಕ್ಕೆ ತರದೇ ಮೂರು ತಿಂಗಳ ಹಿಂದೆ ಕಾಮಗಾರಿ ನಡೆದಿತ್ತು. ವಾಟರ್ ಲಿಫ್ಟ್‌ಗೆ ಕಾಮಗಾರಿಗೆ ಬೆಳಗಾವಿಯಲ್ಲಿ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಸೂಚನೆ ಮೇರೆಗೆ ಬೆಳಗಾವಿ ಜಿಲ್ಲಾಡಳಿತ ಕಾಮಗಾರಿ ನಿಲ್ಲಿಸಿತು.
ಈಗ ಮತ್ತೇ ಜಲಸಂಪನ್ಮೂಲ ಇಲಾಖೆ ಈ ಯೋಜನೆ ಪುನರಾರಂಭಕ್ಕೆ ಡಿಕೆಶಿ ಅಸ್ತು ಎನ್ನಲಾಗಿದೆ. ಮತ್ತೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಗೋಕಾಕದಲ್ಲಿ ಕಾಮಗಾರಿ ಪುನರಾರಂಭಿದಲಾಗಿದೆ. ಜನಾಕ್ರೋಶ ವ್ಯಕ್ತವಾಗುವ ಭೀತಿ ಹಿನ್ನೆಲೆಯಲ್ಲಿ ಪೈಪ್ ಅಳವಡಿಕೆ ಕಾಮಗಾರಿ ವೇಗ ಪಡೆದುಕೊಂಡಿದೆ.