ಈ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿದೆ. ಸರ್ವರಿಗೂ ಸಮನಾಗಿರುವ ಕಾನೂನು ಜಾರಿಯಲ್ಲಿದೆ. ಇಂತಹ ದೇಶದಲ್ಲಿ ಕೋಮು ದ್ವೇಷ ಹರಡುವ ನಿಟ್ಟಿನಲ್ಲಿ ರಾಜಕೀಯ ನಾಯಕರು ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿ ತಮ್ಮ ಸ್ವಾರ್ಥ ಮೆರೆಯಲು ಹೊರಟಿದ್ದಾರೆ. ಇದರ ವಿರುದ್ಧ ದೇಶದ ಎಲ್ಲಾ ಸಮುದಾಯದ ಜನ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಉಸ್ಮಾನ್ ಗನಿ ಹುಮ್ನಾಬಾದ್ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಅಂಜುಮನ್ ಇಸ್ಲಾಂ ಕಮಿಟಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ಈ ದೇಶದ ಸಂಪತ್ತನ್ನು ಬಂಡವಾಳಗಾರರಿಗೆ ಮಾರಾಟ ಮಾಡಿದ್ದಾರೆ. ರೈಲ್ವೆ, ಏರ್ ಇಂಡಿಯಾ, ಬಿ ಎಸ್ ಎನ್ ಎಲ್ ಸೇರಿದಂತೆ ದೇಶದ ಶ್ರಮಿಕರು ಬೆಳೆಸಿದಂತ ಸರ್ಕಾರೀ ಸಂಸ್ಥೆಗಳನ್ನು ಮಾರಾಟ ಮಾಡಿ ದುಡಿಯುವ ಜನಗಳ ಬದುಕನ್ನು ಅದೋಗತಿಗೆ ದೂಡಿದ್ದಾರೆ” ಎಂದು ಆರೋಪಿಸಿದರು.

“ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಜಾತಿ ಬೇಧ ಇಲ್ಲದೆ ಹೋರಾಟ ಮಾಡಿದ್ದಾರೆ. ಆದರೆ ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಎನ್ ಆರ್ ಐ, ಎನ್ ಪಿ ಆರ್, ಸಿ ಎ ಎ ತಂದು ಒಡೆದು ಆಳುವ ನೀಚ ಮನಸ್ಥಿಗೆ ಇಳಿದಿದೆ ಇದರ ವಿರುದ್ಧ ಬಲಿಷ್ಠ ಜನಾಂದೋಲ ಬೆಳಸಬೇಕು” ಎಂದರು.
ಇದೇ ವೇಳೆ ಇಳಕಲ್ ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಅದೇ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ಮೇರವಣಿಗೆ ಮುಖಾಂತರ ಪ್ರತಿಭಟನೆ ಮಾಡಿ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಬಾಗಲಕೋಟೆ | ಮುಧೋಳ ಗ್ರಾಮೀಣ ಠಾಣೆ ಮಂಜೂರಿಗೆ ಮನವಿ
ಪ್ರತಿಭಟನೆಯಲ್ಲಿ ಜನಾಬ್ ತಾಜುದ್ದೀನ್ ಹುಮ್ನಾಬಾದ್, ಜನಾಬ್ ಸಾಯೇದ್ ಬಾಹುದ್ದಿನ್ ಕಾಜಿ, ಇಳಕಲ್‌ನ ಜಮಾತ್-ಎ-ಇಸ್ಲಾಮಿ ಹಿಂದ್ ಅಧ್ಯಕ್ಷ ಜನಾಬ್ ಹುಸೈನ್ ಭಾಷಾ ಸುಲಿಬಾವಿ, ಮೊಹಮ್ಮದ್ ಸಿರಾಜ ಹುಣಚಗಿ, ಮೊಹಮ್ಮದ್ ಗೌಸ್ ಗಡಾದ, ಮುರ್ತುಜಾ ಕಾಕ್ಬಾಲ್ ಲಾಲ್ ಸಾಬ್ ಭಂಡಾರಿ, ರಫೀಕ್ ಬಾಲ್ಗನೂರ, ಯೂಸುಫ್ ಭಗವಾನ್, ಸಾಧಂ ಮಾಕಾನದಾರ್ ಹಾಗೂ ಅಬ್ದುಲ್ ಗಫರ್ ಸೇರಿದಂತೆ ಇತರರು ಇದ್ದರು.