ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಪೂರ್ವಜರು ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯಲ್ಲಿ ಹೊಂದಿದ್ದ ಜಮೀನು ಹರಾಜಾಗಿದೆ. ಪರ್ವೇಜ್ ಮುಷರಫ್ ಅವರ ಪೂರ್ವಜರು ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಬರೌತ್ ಪಟ್ಟಣದಲ್ಲಿ ಹೊಂದಿರುವ ಆಸ್ತಿಯನ್ನು 1.38 ಕೋಟಿ ರೂ.ಗೆ ಹರಾಜು ಹಾಕಲಾಗಿದೆ.
ಬರೌತ್‌ನ ಕೊಟಾನಾ ಗ್ರಾಮದಲ್ಲಿ ಇರುವ ಸುಮಾರು 13 ಬಿಘಾ ಭೂಮಿ 1.38 ಕೋಟಿ ರೂ.ಗೆ ಮಾರಾಟವಾಗಿದೆ. ಈ ಭೂಮಿ ಮೊದಲು ಪರ್ವೇಜ್ ಮುಷರಫ್ ಅವರ ಸಹೋದರ ಡಾ. ಜಾವೇದ್ ಮುಷರಫ್ ಮತ್ತು ಅವರ ಕುಟುಂಬದ ಹೆಸರಿನಲ್ಲಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!
ಈಗ ಆ ಭೂಮಿಯನ್ನು ಪಂಕಜ್ (ಗುತ್ತಿಗೆದಾರ), ಮನೋಜ್ ಗೋಯಲ್ (ಬರಾವುತ್ ನಿವಾಸಿ) ಮತ್ತು ಗಾಜಿಯಾಬಾದ್‌ನ ಜೆಕೆ ಸ್ಟೀಲ್ ಕಂಪನಿಗೆ ವರ್ಗಾಯಿಸಲಾಗಿದೆ. ಶನಿವಾರ, ಲಖನೌದಿಂದ ಬಂದ ಅಧಿಕಾರಿಗಳು ಉಪ ನೋಂದಣಿ ಕಚೇರಿಯಲ್ಲಿ ಮಾರಾಟ ಪತ್ರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
ಪರ್ವೇಜ್ ಮುಷರಫ್ ಅವರ ಕುಟುಂಬವು 1943 ರಲ್ಲಿ ಬರೌತ್‌ನ ಕೊಟಾನಾ ಗ್ರಾಮದಿಂದ ದೆಹಲಿಗೆ ಸ್ಥಳಾಂತರಗೊಂಡಿತು. ಕೆಲವು ವರ್ಷಗಳ ನಂತರ, 1947 ರಲ್ಲಿ ವಿಭಜನೆಯ ಸಮಯದಲ್ಲಿ, ಅವರು ಪಾಕಿಸ್ತಾನಕ್ಕೆ ಹೋಗಿ ನೆಲೆಸಿದರು. ಆದಾಗ್ಯೂ, ಅವರ ಮಹಲು ಮತ್ತು ಕೃಷಿ ಭೂಮಿ ಕೋಟಾದಲ್ಲಿಯೇ ಉಳಿದಿತ್ತು.
ಪಾಕ್‌ನ ಸೇನಾ ಮುಖ್ಯಸ್ಥರಾಗಿದ್ದ ಪರ್ವೇಜ್ ಮುಷರಫ್ 2001 ರಿಂದ 2008ರವರೆಗೆ ಪಾಕಿಸ್ತಾನದ ರಾಷ್ಟ್ರಾಧ್ಯಕ್ಷರಾಗಿದ್ದರು. 2023ರಲ್ಲಿ ಅವರು ಮೃತಪಟ್ಟಿದ್ದರು.