ದಿನಕ್ಕೊಂದು ವಿಭಿನ್ನ ಅಭಿಪ್ರಾಯವನ್ನು ತಳೆಯುವ ಮೂಲಕವೇ ಪ್ರಧಾನಿ ನರೇಂದ್ರ ಮೋದಿ ಟ್ರೋಲ್ಗೆ ಒಳಗಾಗುತ್ತಾರೆ. ಇದೀಗ ಜಾತಿ ಜನಗಣತಿ ಬಗ್ಗೆ ತಾನೇ ನೀಡಿದ ಎರಡು ವಿಭಿನ್ನ ಹೇಳಿಕೆ ವಿಚಾರದಲ್ಲಿ ಪೇಚಿಗೆ ಸಿಲುಕಿದ್ದಾರೆ. ಈ ಹಿಂದೆ ಜಾತಿ ಜನಗಣತಿಯನ್ನು ಟೀಕಿಸಿದ್ದ ಪ್ರಧಾನಿ ಮೋದಿ ಈಗ ಜಾತಿ ಜನಗಣತಿಯನ್ನು ಶ್ಲಾಘಿಸಿದ್ದಾರೆ.
ಜಾತಿ ಜನಗಣತಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ ಒಂದು ದಿನದ ನಂತರ ಕಾಂಗ್ರೆಸ್ ಸೋಮವಾರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಧಾನಿ ಜಾತಿ ಜನಗಣತಿಯನ್ನು ತೆಗಳಿದ್ದ, ಹೊಗಳಿದ್ದ ಎರಡೂ ವಿಡಿಯೋಗಳನ್ನು ಪೋಸ್ಟ್ ಮಾಡಿದೆ.
ಇದನ್ನು ಓದಿದ್ದೀರಾ? ಜಾತಿ ಜನಗಣತಿ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಪ್ರಿಯಾಂಕಾ ಗಾಂಧಿ
ಜಾತಿ ಜನಗಣತಿಯು ಹಿಂದುಳಿದವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವತ್ತ ಒಂದು ಹೆಜ್ಜೆಯಾಗಿದೆ. ನಮ್ಮ ಸರ್ಕಾರ ಜಾತಿ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ. ಬದಲಿಗೆ ಹಿಂದುಳಿದವರ ಸಬಲೀಕರಣದಲ್ಲಿ ನಾವು ನಂಬಿಕೆ ಇಡುತ್ತೇವೆ ಎಂದು ಪ್ರಧಾನಿ ಮೋದಿ ಭಾನುವಾರ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರಧಾನಿ ಮೋದಿ ಅವರ ಎರಡು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. “2025ರ ಏಪ್ರಿಲ್ 30ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಆರಂಭದ ನಡುವಿನ ಅವಧಿಯಲ್ಲಿ ಮೋದಿ ಸರ್ಕಾರ ಅನಿರೀಕ್ಷಿತವಾಗಿ ಮತ್ತು ಇದ್ದಕ್ಕಿದ್ದಂತೆ ಜಾತಿ ಜನಗಣತಿಯನ್ನು ಘೋಷಿಸಿದೆ. ಇದರ ಪೂರ್ಣ ಕೀರ್ತಿಯನ್ನು ತಾವೇ ಹೊತ್ತಿಕೊಳ್ಳುವ ಯತ್ನವನ್ನು ಮೋದಿ ಮಾಡಿದ್ದಾರೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
पहलगाम आतंकी हमले और ऑपरेशन सिंदूर के लॉन्च के बीच के समय में ही, 30 अप्रैल 2025 को, मोदी सरकार ने अचानक और अप्रत्याशित रूप से जाति जनगणना की घोषणा कर दी। कल एनडीए शासित राज्यों के मुख्यमंत्रियों की बैठक में प्रधानमंत्री ने उम्मीद के मुताबिक इसका पूरा श्रेय खुद ले लिया।
— Jairam Ramesh (@Jairam_Ramesh) May 26, 2025
लेकिन… pic.twitter.com/hJbFhvCp4b
“ಮೊದಲ ಕ್ಲಿಪ್ನಲ್ಲಿ 2023ರ ಅಕ್ಟೋಬರ್ನಲ್ಲಿ ಪ್ರಧಾನಿ ಮೋದಿ ಅವರು ಬಿಹಾರದಲ್ಲಿ ಜಾತಿ ಜನಗಣತಿ ನಡೆದ ಸಂದರ್ಭದಲ್ಲಿ ಆಡಿರುವ ಮಾತುಗಳು. ಎರಡನೇ ಕ್ಲಿಪ್ನಲ್ಲಿ 2024ರ ಏಪ್ರಿಲ್ 28ರಂದು ಜಾತಿ ಜನಗಣತಿಗಾಗಿ ಕಾಂಗ್ರೆಸ್ ಬೇಡಿಕೆ ಇಟ್ಟಾಗ ಮೋದಿ ಏನು ಹೇಳಿದ್ದಾರೆ ನೋಡಿ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ನೈಜ ಸಮಸ್ಯೆ ಮರೆಮಾಚಲು, ಜನರ ಗಮನ ಬೇರೆಡೆ ಸೆಳೆಯಲು ಮೋದಿ ಬಳಸುತ್ತಿರುವ ಐದು ಆಸನಗಳು
ಮೊದಲ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು, “ಅವರು(ವಿಪಕ್ಷ) ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುವ ಯತ್ನ ಮಾಡುತ್ತಿದ್ದರು. ಆ ಪಾಪವನ್ನು ಇಂದಿಗೂ ಮುಂದುವರೆಸಿದ್ದಾರೆ” ಎಂದು ಹೇಳಿದ್ದಾರೆ. ಇನ್ನೊಂದು ವಿಡಿಯೋದಲ್ಲಿ, ಜಾತಿ ಜನಗಣತಿ ನಡೆಸಲು ಕಾಂಗ್ರೆಸ್ನ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, “ಇದು ನಗರ ನಕ್ಸಲಿಗರ ಮನಸ್ಥಿತಿ” ಎಂದಿದ್ದರು. ಆದರೆ ಇದೀಗ ಅದೇ ಜಾತಿ ಜನಗಣತಿಯನ್ನು ಹೊಗಳುತ್ತಾ, ಅದರ ಶ್ರೇಯಸ್ಸನ್ನು ತನ್ನ ಸರ್ಕಾರಕ್ಕೆ ಗಿಟ್ಟಿಸಿಕೊಳ್ಳುವ ಯತ್ನವನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಮೋದಿಯ ಈ ಹೇಳಿಕೆಯಿಂದಾಗಿ ಬಿಜೆಪಿ ನಾಯಕರು ಮಾತ್ರ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಇನ್ನು ಭಾನುವಾರ ನಡೆದ ಸಭೆಯ ನಂತರ ಜಾತಿ ಜನಗಣತಿ ಮಿತ್ರ ಪಕ್ಷದ ಕಲ್ಪನೆಯ ಭಾಗವಾಗಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಜೆಡಿ(ಯು) ನಾಯಕ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಮೊದಲ ಬಾರಿಗೆ ಜಾತಿ ಜನಗಣತಿ ಮಾಡಿರುವುದು ಎಂದಿದ್ದಾರೆ.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ದೇಶದಾದ್ಯಂತ ಜಾತಿ ಗಣತಿಯನ್ನು ನಡೆಸುವಂತೆ ಒತ್ತಾಯಿಸುತ್ತಿದ್ದವು. ಚುನಾವಣೆಯಲ್ಲಿ ಪ್ರಮುಖ ವಿಚಾರ ಇದಾಗಿತ್ತು. ಇನ್ನು ಈಗಾಗಲೇ ಬಿಹಾರ, ತೆಲಂಗಾಣ ಮತ್ತು ಕರ್ನಾಟಕದಂತಹ ಕೆಲವು ರಾಜ್ಯಗಳು ಜಾತಿ ಜನಗಣತಿ ಸಮೀಕ್ಷೆಗಳನ್ನು ನಡೆಸಿವೆ.
