ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ ವಾಹನ ಸಂಚರಿಸಲು ಅಡಚಣೆ ಆಗುತಿದ್ದು, ರಾಷ್ಟ್ರೀಯ ಹೆದ್ದಾರಿ-75 ಸಕಲೇಶಪುರದ ಬೈಪಾಸ್ ರಸ್ತೆ ಆನೆಮಹಲ್, ದೋಣಿಗಲ್, ದೊಡ್ಡತಪ್ಪಲು, ಮುಂತಾದ ಕಡೆ ಮಳೆಯಿಂದ ಭೂಕುಸಿತ ಉಂಟಾಗಿದೆ.
ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜಾಗರೂಕತೆಯಿಂದ ಚಲಿಸಬೇಕಾಗಿದೆ ಎಂದು ಸಕಲೇಶಪುರ ತಾಲೂಕು ಪೊಲೀಸ್ ಇಲಾಖೆಯಿಂದ ತಿಳಿಸಿದರು.